ಕೊರೊನಾ ಹೆಚ್ಚಳ ಹಿನ್ನೆಲೆ; ಸಭೆ ಬಳಿಕ ಆರೋಗ್ಯ ಸಚಿವ ಸುಧಾಕರ್‌ ಹೇಳಿದ್ದೇನು? 10 ಮುಖ್ಯ ಅಂಶ

ಸಾಂಕ್ರಾಮಿಕದ ಪರಿಸ್ಥಿತಿ ಪರಾಮರ್ಶಿಸಲು ತಾಂತ್ರಿಕ ಸಲಹಾ ಸಮಿತಿ ಜೊತೆ ರಾಜ್ಯ ಸರ್ಕಾರ ಸಭೆ ನಡೆಸಿತು (ಆ.11). ಸಭೆಯಲ್ಲಿ ಕೋವಿಡ್‌-19, ಮಂಕಿಪಾಕ್ಸ್‌ ಸ್ಥಿತಿ ಪರಾಮರ್ಶೆ ನಡೆಯಿತು. ಸಭೆಯ ತೀರ್ಮಾನಗಳ ಮುಖ್ಯಾಂಶ ಇಲ್ಲಿದೆ
K.Sudhakar
  • ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ. ಮಾಸ್ಕ್‌ ಬಗ್ಗೆ ಜನರ ನಿರ್ಲಕ್ಷ್ಯ ಮುಂದುವರಿದಲ್ಲಿ ದಂಡ ವಿಧಿಸುವ ಬಗ್ಗೆ ಚರ್ಚಿಸಿ ನಿರ್ಧಾರ.
  • ಬೆಂಗಳೂರು ನಗರದಲ್ಲಿ ಶೇಕಡ 1.9ರಷ್ಟು ಧನಾತ್ಮಕ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಸೋಂಕು ಹರಡದಂತೆ ನಿಗಾ ಮತ್ತು ಅವಶ್ಯಕತೆ ಇದ್ದವರಿಗೆ ಚಿಕಿತ್ಸೆಗೆ ಕ್ರಮ.
  • ಲಸಿಕೆ ಹಾಕಿಸಿಕೊಳ್ಳದವರಿಗೆ ತಗುಲುತ್ತಿದೆ ಸೋಂಕು; ಬೂಸ್ಟರ್‌ ಡೋಸ್‌ ಪಡೆಯದವರಿಗೆ ಲಸಿಕೆ ಹಾಕಿಸಿಕೊಳ್ಳಲು ಸಲಹೆ. 60 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ.
  • ವಿದೇಶದಿಂದ ಬರುವವರ ಮೇಲೆ ಹೆಚ್ಚಿನ ನಿಗಾ. ಪ್ರಯಾಣಿಕರ ದಾಖಲೆ ಸಂಗ್ರಹ, ಟೆಲಿ ಮಾನಿಟರಿಂಗ್‌ ಮೂಲಕ ಆರೋಗ್ಯ ವಿಚಾರಣೆ
  • ಕೋವಿಡ್‌-19ರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ನಿರಾಕರಿಸುವಂತಿಲ್ಲ. ದೂರುಗಳು ಮತ್ತೆ ಕೇಳಿಬಂದಲ್ಲಿ ಕಠಿಣ ಕಾನೂನು ಕ್ರಮ.
  • ಎರಡನೇ ಡೋಸ್ ಪಡೆದು 6-7 ತಿಂಗಳುಗಳ ನಂತರ ಲಸಿಕೆಯ ಶಕ್ತಿ ಕ್ಷೀಣಿಸಲಿದ್ದು, 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಸರ್ಕಾರದ ಕ್ರಮ.
  • ಸಾರ್ವಜನಿಕರಿಗೆ ಕೋವಿಶೀಲ್ಡ್, ಕೋವ್ಯಾಕ್ಸಿನ್ ಜೊತೆ ನಾಳೆಯಿಂದ ಕೊರ್ಬೆವ್ಯಾಕ್ಸ್ ಲಸಿಕೆ ಕೂಡ ಲಭ್ಯ. ಮೊದಲ ಎರಡು ಡೋಸ್‌ ಪಡೆದವರಿಗೆ 3ನೇ ಡೋಸ್ ಆಗಿ ಕೊರ್ಬೆವ್ಯಾಕ್ಸ್ ಲಸಿಕೆ.
  • ರಾಜ್ಯದಲ್ಲಿ ಯಾವುದೇ ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿಲ್ಲ. ನೆರೆಯ ರಾಜ್ಯ ಕೇರಳದಲ್ಲಿ ಸೋಂಕಿನ ಪ್ರಕರಣಗಳಿದ್ದು, ಮುನ್ನೆಚ್ಚರಿಕಾ ಕ್ರಮ ಜಾರಿ.
  • ಕೇರಳ-ಕರ್ನಾಟಕ ಗಡಿಗಳಲ್ಲಿ ಹೆಚ್ಚಿನ ಕಣ್ಗಾವಲು. ಗಡಿ ಜಿಲ್ಲೆಗಳಲ್ಲಿ ಪ್ರಯಾಣಿಕರ ತಪಾಸಣೆ, ಸಂಪರ್ಕ ಪತ್ತೆ, ಔಷಧಗಳ ಶೇಖರಣೆಗೆ ವಿಶೇಷ ಗಮನ.
  • ಮಲೇರಿಯಾ, ಡೆಂಘಿ, ಚಿಕನ್‌ಪಾಕ್ಸ್‌ನಂತತಹ ಸೋಂಕುಗಳ ನಿಯಂತ್ರಣಕ್ಕೆ ಸರ್ಕಾರದ ಕ್ರಮಗಳ ಬಗ್ಗೆ ತಜ್ಞರ ಜೊತೆ ಚರ್ಚಿಸಲು ಸಭೆಯ ಸಲಹೆ.

ಈ ಸುದ್ದಿ ಓದಿದ್ದೀರಾ?: ಕೋವಿಡ್‌ ಸುದ್ದಿ | ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಐವರು ಬಲಿ

ನಿಮಗೆ ಏನು ಅನ್ನಿಸ್ತು?
1 ವೋಟ್