ಒಮಿಕ್ರಾನ್‌ ಹಾವಳಿ ತಡೆಗೆ ಎರಡನೇ ಬೂಸ್ಟರ್‌ ಡೋಸ್‌ ಸಹಕಾರಿ; ಅಧ್ಯಯನ ವರದಿ | 10 ಮುಖ್ಯ ಅಂಶ

ಕೋವಿಡ್‌-19ರ ಹಾವಳಿಯಿಂದ ಜಗತ್ತು ತಪ್ಪಿಸಿಕೊಂಡಿದೆ ಎನ್ನುವಷ್ಟರಲ್ಲಿ ಅದರ ಉಪತಳಿಗಳ ಉಪಟಳ ಹೆಚ್ಚಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಎರಡನೇ ಬೂಸ್ಟರ್‌ ಡೋಸ್‌ ಸಹಕಾರಿ ಎಂದಿದೆ ಅಮೆರಿಕದ ಸಿಡಿಸಿ ಅಧ್ಯಯನ ವರದಿ
Booster Dose
  • ಅಮೆರಿಕದ ರೋಗ ನಿಯಂತ್ರಣ ಸಂಸ್ಥೆ (ಸಿಡಿಸಿ) ಕೊರೊನಾ ಸೋಂಕಿನ ಮೇಲೆ ಬೂಸ್ಟರ್‌ ಡೋಸ್‌ನ ಪರಿಣಾಮದ ಬಗ್ಗೆ ಅಧ್ಯಯನ ಕೈಗೊಂಡಿತ್ತು.
  • ಎರಡನೇ ಮುನ್ನೆಚ್ಚರಿಕೆ ಡೋಸ್‌ ಒಮಿಕ್ರಾನ್‌ ಉಪತಳಿಗಳನ್ನು ನಿಯಂತ್ರಿಸುತ್ತದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.
  • ಅಧ್ಯಯನದ ಪ್ರಕಾರ, ಒಮಿಕ್ರಾನ್ ಉಪತಳಿಗಳಾದ ಬಿಎ1, ಬಿಎ2, ಬಿಎ2.12.1 (BA.1, BA.2, BA.2.12.1) ವೈರಸ್‌ಗಳ ಮೇಲೆ ಎರಡನೇ ಬೂಸ್ಟರ್‌ ಡೋಸ್‌ ಪರಿಣಾಮಕಾರಿ ಎನ್ನಲಾಗಿದೆ.
  • ವೈರಸ್‌ಗಳ ಮೇಲೆ ಮೊದಲ ಬೂಸ್ಟರ್‌ ಡೋಸ್‌ ಶೇಕಡ 68ರಷ್ಟು ಪರಿಣಾಮಕಾರಿಯಾಗಿತ್ತು. ಆರು ತಿಂಗಳ ನಂತರ ಈ ಪ್ರಮಾಣ ಶೇಕಡ 52ಕ್ಕೆ ಕುಸಿಯುತ್ತದೆ.
  • ಒಮಿಕ್ರಾನ್‌ನ ಉಪತಳಿಗಳು ಲಸಿಕೆಯ ರಕ್ಷಣೆಯನ್ನು ದಾಟಿ ಸೋಂಕು ಉಂಟು ಮಾಡುತ್ತವೆ ಎಂದು ಈಗಾಗಲೇ ಕಂಡುಕೊಳ್ಳಲಾಗಿದೆ.
  • ಸಿಡಿಸಿ ವರದಿ ಪ್ರಕಾರ, ಕೋವಿಡ್ ಉಪತಳಿಗಳ ಮೇಲೆ ಎರಡನೇ ಬೂಸ್ಟರ್ ಡೋಸ್‌ ಪರಿಣಾಮವು ಆರು ತಿಂಗಳ ನಂತರ ಶೇಕಡ 80ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.
  • ಆರು ತಿಂಗಳ ನಂತರದಲ್ಲಿನ ಎರಡನೇ ಬೂಸ್ಟರ್ ಡೋಸ್ ಪರಿಣಾಮದ ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ.
  • ಉಸಿರಾಟ ಸಮಸ್ಯೆ ಸೇರಿದಂತೆ ಕೋವಿಡ್‌ನಿಂದಾಗುವ ಹೆಚ್ಚಿನ ಅಪಾಯದ ವಿಷಯದಲ್ಲಿ ಲಸಿಕೆಯ ಪರಿಣಾಮದ ಬಗ್ಗೆ ಅಧ್ಯಯನದಲ್ಲಿ ಸ್ಪಷ್ಟತೆ ಸಿಕ್ಕಿಲ್ಲ.
  • "ಚಳಿಗಾಲದಲ್ಲಿ ವೈರಸ್‌ಗಳು ಹೆಚ್ಚಾಗಿ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತವೆ. ಹಾಗಾಗಿ ಎರಡನೇ ಬೂಸ್ಟರ್‌ ಡೋಸ್‌ ಪಡೆಯಲು ಸಲಹೆ ನೀಡುತ್ತೇವೆ," ಎನ್ನುವುದು ತಜ್ಞರ ಅಭಿಪ್ರಾಯ.
  • ಎರಡನೇ ಬೂಸ್ಟರ್‌ ಡೋಸ್‌ ಕೋವಿಡ್‌-19ರಿಂದ ಉಂಟಾಗಬಹುದಾದ ತೀವ್ರ ಪರಿಣಾಮವನ್ನು ತಡೆದು, ಆಸ್ಪತ್ರೆ ಸೇರುವವರ ಸಂಖ್ಯೆಯನ್ನು ಕಡಿಮೆ ಮಾಡಲಿದೆ.

ಈ ಸುದ್ದಿ ಓದಿದ್ದೀರಾ?: ಮಂಕಿಪಾಕ್ಸ್‌ ಕುರಿತು ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್‌ ಮಾತು | 10 ಮುಖ್ಯ ಅಂಶ

ನಿಮಗೆ ಏನು ಅನ್ನಿಸ್ತು?
0 ವೋಟ್
eedina app