ಸುದ್ದಿ ವಿವರ | ಸಂತಾನಹರಣ ಶಸ್ತ್ರಚಿಕಿತ್ಸೆ; ಹಳೇ ಪದ್ಧತಿಗೆ ಜೋತುಬಿದ್ದು ಮಹಿಳೆಯರ ಪ್ರಾಣಕ್ಕೆ ಕುತ್ತು ತಂದ ತೆಲಂಗಾಣ

Telangana

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂ ಪಟ್ಟಣಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ 34 ಮಂದಿ ಮಹಿಳೆಯರು ಸಾಮೂಹಿಕ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಕೆಲವೇ ದಿನಗಳಲ್ಲಿ ನಾಲ್ವರು ಸಾವನ್ನಪ್ಪಿದರೆ, ಏಳು ಮಂದಿ ಮತ್ತೆ ಆಸ್ಪತ್ರೆ ಸೇರಬೇಕಾಯಿತು. ಇದಕ್ಕೆ ಕಾರಣವಾದ ಸಂತಾನಹರಣ ಶಸ್ತ್ರಚಿಕಿತ್ಸೆಯ ಅವ್ಯವಸ್ಥೆ ಕುರಿತ ವಿವರ ಇಲ್ಲಿದೆ

ಸಾಮೂಹಿಕ ಸಂತಾನಹರಣ ಶಸ್ತ್ರಚಿಕಿತ್ಸೆ ಕುರಿತು ಸುಪ್ರೀಂ ಕೋರ್ಟ್ ಹೇಳಿದ್ದೇನು?

Eedina App

2014ರ ನವೆಂಬರ್‌ನಲ್ಲಿ ಛತ್ತೀಸ್‌ಗಢದ ಬಿಲಾಸ್ಪುರದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಚಿಕಿತ್ಸೆಗೆ ಒಳಪಟ್ಟ 16 ಮಹಿಳೆಯರು ಸಾವನ್ನಪ್ಪಿದ್ದರು. ಈ ವೇಳೆ, 'ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾʼ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಖಾಸಗಿ ತನಿಖೆ ಕೈಗೊಂಡಿತ್ತು. ಸಂತಾನ ಶಸ್ತ್ರಚಿಕಿತ್ಸೆಯಿಂದ ಮೃತಪಟ್ಟಿರುವುದು ತನಿಖೆಯಲ್ಲಿ ಬಯಲಾಗಿತ್ತು. ಈ ತನಿಖಾ ವರದಿ ಒಂದು ಮೈಲಿಗಲ್ಲಾಗಿ ಉಳಿಯಿತು. 'ದೇವಿಕಾ ವರ್ಸಸ್ ಯುನಿಯನ್ ಆಫ್ ಇಂಡಿಯಾ' ಪ್ರಕರಣದಲ್ಲಿ ಈ ವರದಿಯನ್ನಾಧರಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ತೀರ್ಪಿನಲ್ಲಿ ಸಾಮೂಹಿಕ ಸಂತಾನ ಶಸ್ತ್ರಚಿಕಿತ್ಸೆ ನಿಲ್ಲಿಸುವಂತೆ ಮತ್ತು ಕ್ಯಾಂಪ್ ಮಾಡಿ ಶಸ್ತ್ರಚಿಕಿತ್ಸೆಯ ಗುರಿ ನಿಗದಿ ಮಾಡುವುದನ್ನು ರಾಜ್ಯ ಸರ್ಕಾರಗಳು ನಿಲ್ಲಿಸಿ, ಚಿಕಿತ್ಸೆಯ ಗುಣಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು.

ಶಸ್ತ್ರಚಿಕಿತ್ಸೆ ಸಂಪೂರ್ಣ ಹೊರೆ ಮಹಿಳೆಯರ ಮೇಲೆ?

AV Eye Hospital ad

ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸಂತಾನ ಶಸ್ತ್ರಚಿಕಿತ್ಸೆಯ ಸಂಪೂರ್ಣ ಹೊಣೆ ಮಹಿಳೆಯರದ್ದೇ ಆಗಿದೆ. (ಬದಲಿಗೆ, ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಪುರುಷರ ಸಂಖ್ಯೆ ತೀರಾ ಕಡಿಮೆ). 2019ರಿಂದ 2021ರವರೆಗೆ ನಡೆಸಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ತೆಲಂಗಾಣದಲ್ಲಿ ಒಟ್ಟು ಫಲವತ್ತತೆಯ ದರ (Total Fertility Rate) 1.75ರಷ್ಟಿತ್ತು. 2004ರಲ್ಲಿ ಈ ಪ್ರಮಾಣ 2.1ರಷ್ಟಕ್ಕಿಂತ ಕಡಿಮೆ ಇತ್ತು. ತೆಲಂಗಾಣ ಇನ್ನೂ ಆಗ ಆಂಧ್ರದ ಭಾಗವಾಗಿತ್ತು. ಆಧುನಿಕ ಗರ್ಭನಿರೋಧಕ ಕ್ರಮಗಳ ಬಳಕೆಯ ಪ್ರಮಾಣ ಶೇಕಡ 66.7ರಷ್ಟಿದೆ. ರಾಜ್ಯದಲ್ಲಿ ಕುಟುಂಬ ಯೋಜನೆಯ ಅಗ್ಯವಿರುವ ಕುಟುಂಬಗಳ ಸಂಖ್ಯೆ 6.4ರಷ್ಟಿದೆ. ಒಟ್ಟು ಆಧುನಿಕ ಗರ್ಭನಿರೋಧಕಗಳ ಬಳಕೆಯಲ್ಲಿ ಶೇಕಡ 93ರಷ್ಟು ಗರ್ಭನಿರೋಧಕಗಳ ಬಳಕೆಯನ್ನು ಮಹಿಳೆಯರೇ ಮಾಡುತ್ತಾರೆ.

ತೆಲಂಗಾಣ ಸರ್ಕಾರ ಎಡವಿದ್ದು ಎಲ್ಲಿ?

ಗರ್ಭನಿರೋಧಕಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಬದಲು ತೆಲಂಗಾಣ ಸರ್ಕಾರ, ಸಾಮೂಹಿಕ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ವರ್ಷ ಏಪ್ರಿಲ್‌ನಿಂದ ಜುಲೈವರೆಗೆ ಒಟ್ಟು 111 ಸಂತಾನಹರಣ ಶಿಬಿರಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿತ್ತು. ಈ ವೇಳೆ 38,656 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ.

ಈ ಸುದ್ದಿ ಓದಿದ್ದೀರಾ?: ನಮ್ಮ ಪ್ರೀತಿಪಾತ್ರರ ಆತ್ಮಹತ್ಯೆ ತಡೆಯಲು ನಾವು ಮಾಡಬಹುದಾದ್ದು ಏನು? ಇಲ್ಲಿವೆ ಕೆಲವು ಸಲಹೆ

ತೆಲಂಗಾಣದಲ್ಲಿ ಗರ್ಭನಿರೋಧಕ ಬಳಸುವ ಪುರುಷರ ಪ್ರಮಾಣವೆಷ್ಟು?

ಗರ್ಭನಿರೋಧಕವಾಗಿ ಬಳಸುವ ಕಾಂಡೋಮ್ ಬಳಸುವ ಪುರುಷರ ಸಂಖ್ಯೆ ತೆಲಂಗಾಣದಲ್ಲಿ ಕೇವಲ ಶೇಕಡ 0.8. ಶೇಕಡ ಎರಡರಷ್ಟು ಮಂದಿ ಪುರುಷರು ಮಾತ್ರವೇ ಸಂತಾನಹರಣ ಶಸ್ತ್ರ ಚಿಕಿತ್ಸೆ ಆರಿಸಿಕೊಳ್ಳುತ್ತಾರೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಪುರುಷರಿಗಿಂತ ಹೆಚ್ಚು ಮಹಿಳೆಯರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. 2014ರ ಅಧ್ಯಯನದ ಪ್ರಕಾರ, ಭಾರತದ ಶೇಕಡ 40.2ರಷ್ಟು ಪುರುಷರ ಪ್ರಕಾರ, ಗರ್ಭಿಣಿಯಾಗುವುದನ್ನು ತಡೆಯುವುದು ಮಹಿಳೆಯ ಜವಾಬ್ದಾರಿ ಎಂದು ಭಾವಿಸಲಾಗುತ್ತದೆ. ಅಂದರೆ, ಈ ವಿಷಯದಲ್ಲಿ ಪುರುಷರ ಸಹಭಾಗಿತ್ವ ಹೆಚ್ಚೂಕಡಿಮೆ ಇಲ್ಲವೇ ಇಲ್ಲ ಎನ್ನಬಹುದು.

ಈ ಸಮಸ್ಯೆಗೆ ಪರಿಹಾರವೇನು?

ತಾತ್ಕಾಲಿಕ ಗರ್ಭನಿರೋಧಕಗಳಾದ ಚುಚ್ಚುಮದ್ದು, ಗರ್ಭನಿರೋಧಕ ಮಾತ್ರೆಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಜೊತೆಗೆ, ಗರ್ಭನಿರೋಧಕಗಳ ಆಯ್ಕೆಯನ್ನು ಜನರಿಗೆ ಬಿಡುವುದು ಉತ್ತಮ ಕ್ರಮ ಎಂಬುದು ತಜ್ಞರ ಅಭಿಪ್ರಾಯ. ಎಲ್ಲಕ್ಕಿಂತ ಮುಖ್ಯವಾಗಿ, ಗರ್ಭನಿರೋಧಕಗಳ ಬಳಕೆಯಾಗಲೀ, ಸಂತಾನಹರಣ ಶಸ್ತ್ರಚಿಕಿತ್ಸೆಯಾಗಲೀ, ಮಕ್ಕಳನ್ನು ಹೆರದಿರುವ ಜವಾಬ್ದಾರಿಯಾಗಲೀ - ಪುರುಷರು ಕೂಡ ಮಹಿಳೆಯರಷ್ಟೇ ಹೊಣೆ ಹೊರಬೇಕಾದ ಅವಶ್ಯಕತೆ ಇದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app