ಕೊರೊನಾ ಸೋಂಕು ಹೆಚ್ಚಳಕ್ಕೆ ಹವಾಮಾನ ವೈಪರೀತ್ಯವೂ ಕಾರಣ; ಅಧ್ಯಯನ ವರದಿ | 10 ಮುಖ್ಯ ಅಂಶ

ನಗರೀಕರಣದ ಪ್ರಭಾವದಿಂದ ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ; ಇದು ಜಾಗತಿಕವಾಗಿ ಕೊರೊನಾ ಮತ್ತು ಅದರ ಉಪ ತಳಿಗಳ ಮೇಲೆ ಪ್ರಭಾವ ಬೀರುತ್ತಿದ್ದು, ಸೋಂಕು ಹರಡಲು ಕಾರಣವಾಗಿದೆ ಎಂದಿದೆ ವಿಜ್ಞಾನಿಗಳ ತಂಡ
covid19
  • ನಗರೀಕರಣದ ಪ್ರಭಾವದಿಂದ ಉಂಟಾಗುತ್ತಿರುವ ಹವಾಮಾನ ಬದಲಾವಣೆಯು ಜಾಗತಿಕವಾಗಿ ಕೊರೊನಾ ವೈರಸ್ ಮತ್ತು ಅದರ ಉಪ ತಳಿಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದು ಅಧ್ಯಯನವೊಂದು ಕಂಡುಕೊಂಡಿದೆ. 
  • ಅಂತಾರಾಷ್ಟ್ರೀಯ ಜರ್ನಲ್ ʼಎನ್ವಿರಾನ್‌ಮೆಂಟಲ್ ಮೈಕ್ರೋಬಯಾಲಜಿʼಯಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಉಲ್ಲೇಖ. ಬ್ರೆಜಿಲ್, ಭಾರತ ಹಾಗೂ ಅಮೆರಿಕ ವಿಜ್ಞಾನಿಗಳ ತಂಡ ಕೈಗೊಂಡ ಅಧ್ಯಯನವಿದು. 
  • ಕೋವಿಡ್-19ಕ್ಕೆ ಸೋಂಕಿಗೆ ಕಾರಣವಾದ ಸಾರ್ಸ್ ಕೋವಿಡ್-2ಗೆ ವೈರಸ್‌ಗೆ ಸೇರಿದ ʼಬೆಟಾ ಕೊರೊನಾʼ ಉಪತಳಿಯನ್ನು ಬೇರೆ-ಬೇರೆ ಪ್ರದೇಶಗಳಲ್ಲಿ ಪತ್ತೆಹಚ್ಚಲಾಗಿದೆ.
  • ಹೆಚ್ಚುತ್ತಿರುವ ಜನಸಾಂದ್ರತೆ, ಮಾನವ ಅಭಿವೃದ್ಧಿ ಸೂಚ್ಯಂಕ (ಬೆಳೆಯುತ್ತಿರುವ ನಗರಗಳು), ಇಂಗಾಲದ ಡೈ ಆಕ್ಸೈಡ್ ಹೆಚ್ಚಳ, ಇತರೆ ಮಾಲಿನ್ಯಗಳು, ಮಳೆಯ ಬದಲಾದ ವೇಳಾಪಟ್ಟಿಯಿಂದಾಗಿ ಸೋಂಕು ಹರಡಲು ಪೂರಕ ವಾತಾವರಣ ನಿರ್ಮಾಣವಾಗಿದೆ ಎಂಬುದು ಅಧ್ಯಯನ ತಂಡದ ಟಿಪ್ಪಣಿ.
  • ಕೊರೊನಾ ವೈರಸ್‌ನ ಕುಟುಂಬಕ್ಕೆ ಸೇರಿದ ʼಆರ್ಥೋ ಕೊರೊನಾ ವೈರಿನೆʼ ಎಂಬ ವೈರಸ್‌ನ ಉಪತಳಿಗಳನ್ನು ಬಳಸಿ ಅಧ್ಯಯನ ಕೈಗೊಳ್ಳಲಾಗಿತ್ತು. 
  • ಪರಿಸರದ ಅಂಶಗಳು ವೈರಾಣು ಹರಡುವಲ್ಲಿ ಪ್ರಭಾವ ಬೀರುತ್ತವೆಯೇ ಎಂದು ತಿಳಿದುಕೊಳ್ಳಲು ಜಾಗತಿಕವಾಗಿ ಎಂಟು ಪ್ರದೇಶಗಳ ಬೇರೆ-ಬೇರೆ ರೀತಿಯ ಪರಿಸರವನ್ನು ಆಯ್ಕೆ ಮಾಡಲಾಗಿತ್ತು.
  • ಹೆಚ್ಚು ಜನಸಂಖ್ಯೆ ಇರುವ, ಹೆಚ್ಚು ಇಂಗಾಲ ಸೂಸುವ, ವಾರ್ಷಿಕ ಮಳೆ ಪ್ರಮಾಣದಲ್ಲಿ ವ್ಯತ್ಯಾಸ ಇದ್ದ ಜಾಗಗಳಲ್ಲಿ ಸಂಶೋಧನೆ ನಡೆಸಲಾಗಿತ್ತು. ಈ ಪ್ರದೇಶಗಳಲ್ಲಿ ಸೋಂಕು ಹರಡುವ ಪ್ರಮಾಣ ಹೆಚ್ಚಾಗಿದ್ದು ಕಂಡುಬಂದಿತು.
  • ನಗರದಿಂದ ದೂರ ಇರುವ, ನಗರೀಕರಣಕ್ಕೊಳಗಾಗದ ಅರಣ್ಯ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ವೈರಸ್‌ ಹರಡುವ ಪ್ರಮಾಣ ಕಡಿಮೆ ಇತ್ತು ಎಂದು ಕಂಡುಕೊಳ್ಳಲಾಗಿದೆ.
  • "ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅತಿಯಾದ ಅವಲಂಬನೆಯಿಂದ ಅರಣ್ಯ ನಾಶ, ನಗರಗಳ ಅವೈಜ್ಞಾನಿಕ ಬೆಳವಣಿಗೆ, ಮಾನವನ ಇತರೆ ಚಟುವಟಿಕೆಗಳು ಕೊರೊನಾ ವೈರಸ್‌ ಹರಡುವಿಕೆಗೆ ಕಾರಣವಾಗಿದೆ," ಎನ್ನುತ್ತಾರೆ ಅಧ್ಯಯನಕಾರರು.
  • "ನಮ್ಮ ಎದುರು ಇರುವುದು ಎರಡು ಆಯ್ಕೆಗಳು; ಒಂದು, ಜಾಗತಿಕ ಪರಿಸರದ ಪುನರ್ ಸ್ಥಾಪನೆ. ಇನ್ನೊಂದು, ಸಾಮೂಹಿಕ ಆತ್ಮಹತ್ಯೆಗೆ ಸಿದ್ಧರಾಗುವುದು," ಎನ್ನುವುದು ಅಧ್ಯಯನಕಾರರ ಖಚಿತ ಅಭಿಪ್ರಾಯ.

ಈ ಸುದ್ದಿ ಓದಿದ್ದೀರಾ?: ಕರ್ನಾಟಕದಲ್ಲಿ ಮಂಕಿಪಾಕ್ಸ್; ಇದುವರೆಗೂ ಆಗಿದ್ದೇನು? | 10 ಮುಖ್ಯ ಅಂಶ

ನಿಮಗೆ ಏನು ಅನ್ನಿಸ್ತು?
0 ವೋಟ್
eedina app