ಒಂದು ನಿಮಿಷದ ಓದು | ಸೋಂಕಿತರ ರಕ್ತದಲ್ಲಿ ಒಂದು ವರ್ಷದವರೆಗೆ ಇರಲಿದೆ ಕೊರೊನಾ ವೈರಸ್

Covid Test

ರಕ್ತಕಣಗಳಲ್ಲಿ ಕೋವಿಡ್-19ರ ಸೋಂಕಿನ ಅಂಶ ದೀರ್ಘಕಾಲ ಉಳಿಯಬಹುದು ಎಂದು ಅಧ್ಯಯನ ವರದಿಯೊಂದು ಸಾರಿದೆ.

ಬೋಸ್ಟನ್ ಮೂಲದ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸಿದ್ದು, ʼಜರ್ನಲ್ ಆಫ್ ಕ್ಲಿನಿಕಲ್ ಇನ್ಫೆಕ್ಷಿಯಸ್ ಡಿಸೀಸ್‌'ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ. ಸೋಂಕಿಗೆ ತುತ್ತಾದ ಒಂದು ವರ್ಷದ ನಂತರವೂ ಕೋವಿಡ್-19ರ ರೋಗಿಗಳಲ್ಲಿ ಉಳಿದಿರುವ ಸೋಂಕಿನ ಕಣಗಳು ರೋಗ ಲಕ್ಷಣವನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.

Eedina App

ಕೊರೊನಾ ಸೋಂಕಿತ 63 ಮಂದಿಯ ಪ್ಲಾಸ್ಮಾ ಮಾದರಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ 37 ಜನರಲ್ಲಿ ದೀರ್ಘಕಾಲದ ನಂತರವೂ ಕೋವಿಡ್-19ರ ಸೋಂಕು ಪತ್ತೆಯಾಗಿತ್ತು. ಮೊದಲ ಬಾರಿಗೆ ಸೋಂಕು ಪತ್ತೆಯಾದ ನಂತರ ಒಂದು ವರ್ಷದ ಅವಧಿಯಲ್ಲಿ ಈ ರೋಗಿಗಳಿಂದ ಎರಡು ಬಾರಿ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು.

ಸೋಂಕು ತೀವ್ರವಾದ 12 ತಿಂಗಳ ನಂತರ ರಕ್ತದ ಮಾದರಿಗಳನ್ನು ವಿಶ್ಲೇಷಿಸಿದಾಗ, ಬಹುಪಾಲು ಕೊರೊನಾ ರೋಗಿಗಳ ರಕ್ತದ ಮಾದರಿಯಲ್ಲಿ 'ಸ್ಪೈಕ್ ಪ್ರೋಟಿನ್' ಇರುವುದು ಮತ್ತು ದೇಹದಲ್ಲಿ ಸಕ್ರಿಯ ವೈರಸ್‌ನ ಕಣಗಳಿರುವುದು ಅಧ್ಯಯನದಲ್ಲಿ ಪತ್ತೆಯಾಗಿದೆ.

AV Eye Hospital ad

ಕೊರೊನಾಗೆ ನೀಡುವ ಔಷಧಿ ದೇಹದಲ್ಲಿ ಇರುವ ವೈರಸ್‌ಗಳ ಪ್ರಮಾಣವನ್ನು ಅಳಿಸಿಹಾಕಲು ಮತ್ತು ರಕ್ತದಿಂದ ಸ್ಪೈಕ್ ಪ್ರೋಟಿನ್ ಅನ್ನು ತಟಸ್ಥ ಮಾಡಲು ಸಹಾಯ ಮಾಡುತ್ತದೆಯೇ ಎಂಬುದನ್ನು ಕಂಡುಕೊಳ್ಳಲು ಅಧ್ಯಯನ ಕೈಗೊಳ್ಳಲಾಗಿತ್ತು.

"ಕೊರೊನಾ ಸೋಂಕಿತರಲ್ಲಿ ಇರುವ ಸೋಂಕಿನ ಕಣಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಈಗ ನೀಡುತ್ತಿರುವ ಚಿಕಿತ್ಸಾ ವಿಧಾನ ಸಾಕಾಗದು. ವೈರಸ್ ಸಂಪೂರ್ಣ ಇಲ್ಲವಾಗಬೇಕಾದರೆ ರೋಗನಿರೋಧಕಗಳಿಗೆ ಹೆಚ್ಚು ಕಾಲ ಒಗ್ಗಿಕೊಳ್ಳಬೇಕಾಗಬಹುದು," ಎಂದಿದ್ದಾರೆ ಅಧ್ಯಯನದಲ್ಲಿ ಭಾಗಿಯಾಗಿದ್ದ ವಿಜ್ಞಾನಿಗಳು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app