ಜಾಹಿಧಾ ಕೊಡಗು

Jahidha Kodagu

ನೀನಾಸಮ್ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿ ಆಗಿದ್ದವರು. ಸಮಾಜ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಮೈಸೂರಿನ ಸಂಕಲ್ಪ ಯೋಜನೆಗೆ ಸಂಬಂಧಿಸಿದಂತೆ 'Possiblities of Using Theatre as a Tool in Correctional Social Work' ವಿಷಯದ ಸಂಶೋಧನಾ ವಿದ್ಯಾರ್ಥಿ. ತಿಪಟೂರಿನ 'ಭೂಮಿ ರಂಗಶಿಕ್ಷಣ ಕೇಂದ್ರ' ಮತ್ತು ಮೈಸೂರಿನ 'Demonstration Multipurpose'ನಲ್ಲಿ ರಂಗಶಿಕ್ಷಕಿಯಾಗಿ ಕೆಲಸ. 'ಸೂರ್ಯನ ಕುದುರೆ,' 'ವೆನ್ನಿಸ್ಸಿನ ವ್ಯಾಪಾರ,' 'ಆಕಾಶಭೇರಿ,' 'ಕಥೆ ಕಥೆ ಕಾರಣ,' 'ಆ ಊರು ಈ ಊರು,' 'ಐ ಡ್ರೀಮ್ ಬಿಫೋರ್ ಐ ಟೇಕ್ ದ ಸ್ಟ್ಯಾಂಡ್' ಮೊದಲಾದ ನಾಟಕಗಳಲ್ಲಿ ಅಭಿನಯ.