ಇಪಿಎಫ್ಒ ಪ್ರಕರಣ | ಪಿಂಚಣಿಗೆ ಪರಿಗಣಿಸುವ ವೇತನದ ತಿದ್ದುಪಡಿ ವಿವಾದದ ತೀರ್ಪನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

  • ಇಪಿಎಫ್ಒ ಸಲ್ಲಿಸಿದ ಮೇಲ್ಮನವಿಯನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
  • ಪಿಂಚಣಿಗೆ ಪರಿಗಣಿಸಬಹುದಾದ ವೇತನಕ್ಕೆ ಸಂಬಂಧಿಸಿದ ವ್ಯಾಜ್ಯ

1995ರ ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಪಿಂಚಣಿಗೆ ಪರಿಗಣಿಸಬಹುದಾದ ವೇತನಕ್ಕೆ ಸಂಬಂಧಿಸಿದ ತಿದ್ದುಪಡಿಗಳನ್ನು ರದ್ದುಗೊಳಿಸುವ ಕೇರಳ ಹೈಕೋರ್ಟ್ ನಿರ್ಧಾರವನ್ನು ತನ್ನ ಕಾನೂನು ವ್ಯಾಪ್ತಿಯಿಂದ ಹೊರಗಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ. 

ಈ ವಿವಾದದಲ್ಲಿ ಇಪಿಎಸ್-1995ರ ಷರತ್ತು 11(3)ಗೆ ಮಾಡಿದ ವಿವಾದಾತ್ಮಕ ತಿದ್ದುಪಡಿಗಳ ಸುತ್ತ ಚರ್ಚೆ ನಡೆಯುತ್ತಿದೆ. ಪೂರ್ಣ ವೇತನವನ್ನು ಆಧರಿಸಿದ ಪಿಂಚಣಿ ನೀಡುವಂತೆ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್‌ಗೆ ಇಪಿಎಫ್ಒ ಮತ್ತೆ ಅರ್ಜಿ ಸಲ್ಲಿಸಿತ್ತು.

ಕೇರಳ ಹೈಕೋರ್ಟ್‌ನ ತೀರ್ಪಿನ ಪ್ರಕಾರ, ಉದ್ಯೋಗಿಯ ಪೂರ್ಣ ವೇತನವನ್ನು ಆಧರಿಸಿ ಪಿಂಚಣಿಯನ್ನು ನಿಗದಿ ಪಡಿಸಬೇಕು. ಇದರಿಂದಾಗಿ ಉದ್ಯೋಗಿಗಳ ನಿವೃತ್ತಿ ನಂತರದ ಜೀವನದಲ್ಲಿ ಹೆಚ್ಚಿನ ಪಿಂಚಣಿ ಪಡೆಯಲು ಅವಕಾಶವಿತ್ತು. “ಕೇರಳ ಹೈಕೋರ್ಟ್ ನೀಡಿದ ತೀರ್ಪನ್ನು ಕಾರ್ಯರೂಪಕ್ಕೆ ತರಲು ಅನುಮತಿಸಿದರೆ, ಪಿಂಚಣಿ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯುತ್ತದೆ” ಎಂದು ನ್ಯಾಯಮೂರ್ತಿ ಯು ಯು ಲಲಿತ್ ಅವರ ನೇತೃತ್ವದ ಪೀಠದ ಮುಂದೆ ಇಪಿಎಫ್ಒ ಪರ ಹಿರಿಯ ವಕೀಲ ಆರ್ಯ ಸುಂದರಂ ಮತ್ತು ವಕೀಲೆ ರೋಹಿಣಿ ಮೂಸಾ ತಿಳಿಸಿದ್ದಾರೆ.

ಪ್ರತಿ ಖಾಸಗಿ ವಲಯದ ಉದ್ಯೋಗಿಗಳ ವೇತನ ಮಿತಿಯನ್ನು ಲೆಕ್ಕಿಸದೆ ಪಿಂಚಣಿ ನೀಡಬೇಕು ಎಂಬ ಹೈಕೋರ್ಟ್ ತೀರ್ಪು ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಸುಂದರಂ ಅವರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೇಂದ್ರೀಯ ಪಿಂಚಣಿ ವಿತರಣೆ ವ್ಯವಸ್ಥೆ ಸ್ಥಾಪನೆಗೆ ಪ್ರಸ್ತಾವನೆ ಇಟ್ಟ ಕಾರ್ಮಿಕ ಸಚಿವಾಲಯ

ಪ್ರತಿಯೊಬ್ಬ ಖಾಸಗಿ ವಲಯದ ಉದ್ಯೋಗಿಯೂ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ. ಖಾಸಗಿ ಕಂಪನಿಗಳಲ್ಲಿ ಇಪಿಎಫ್ಒಗೆ ಕೊಡುಗೆ ನೀಡದಿದ್ದರೂ, ಅವರು ಕೆಲಸ ಬಿಡುವಾಗ ಇರುವ ಕೊನೆ ಸಂಬಳದ ಆಧಾರದ ಮೇಲೆ ಪಿಂಚಣಿ ವೇತನದ ಶೇ. 50ರಷ್ಟು ಮೊತ್ತವನ್ನು ಕ್ಲೈಮ್ ಮಾಡುತ್ತಾರೆ.

ಆದರೆ, “2004ರಿಂದ ಸರ್ಕಾರಿ ನೌಕರರಿಗೆ ಸರ್ಕಾರಿ ಪಿಂಚಣಿ ಯೋಜನೆಯಲ್ಲಿ ಅವರ ಕೊನೆಯ ಸಂಬಳದ ಶೇ. 50ರಷ್ಟು ಪಿಂಚಣಿ ನೀಡುವುದಿಲ್ಲ. ಯಾಕೆಂದರೆ, ಈ ಯೋಜನೆಯು ಕಾರ್ಯರೂಪಕ್ಕೆ ತರುವುದು ಕಷ್ಟ. ಈಗ ನೌಕರರ ಇಪಿಎಫ್ಒಗೆ ನೀಡಿರುವ ಕೊಡುಗೆ ಆಧಾರದ ಮೇಲೆ ಮಾತ್ರ ಪಿಂಚಣಿ ಪಡೆಯುತ್ತಿದ್ದಾರೆ” ಎಂದು ಸುಂದರಂ ವಾದಿಸಿದ್ದಾರೆ. 

“ಇಪಿಎಸ್ ಯೋಜನೆ ಕೇವಲ ಬಡ ಕಾರ್ಮಿಕರಿಗೆ ಮಾತ್ರ ಸಿಗಬೇಕಾದ ಲಾಭದಾಯಕ ಯೋಜನೆಯಾಗಿದೆ. ವ್ಯವಸ್ಥೆ ಕುಸಿಯದಂತೆ ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಿ” ಎಂದು ಸುಂದರಂ ಅರ್ಜಿಯಲ್ಲಿ ಹೇಳಿದ್ದಾರೆ.

“ಕಡಿಮೆ ಸಂಬಳ ಹೊಂದಿರುವ, ಇಪಿಎಸ್ ಸೌಲಭ್ಯ ಪಡೆಯುವ ಬಡ ಕಾರ್ಮಿಕರು, ಬೀಡಿ ಕಟ್ಟುವವರು, ಕಟ್ಟಡ ಕಾರ್ಮಿಕರು, ನೈರ್ಮಲ್ಯ ಕಾರ್ಮಿಕರು, ದೈಹಿಕ ಕಾರ್ಮಿಕರು, ತೋಟದ ಕಾರ್ಮಿಕರು, ಇಟ್ಟಿಗೆ ಗೂಡು ಕಾರ್ಮಿಕರು, ಗಣಿಗಾರರು ಹಾಗೂ ಭದ್ರತಾ ಸಿಬ್ಬಂದಿಗಳು ಇದರ ಲಾಭ ಪಡೆಯಬೇಕು ಎನ್ನುವ ಉದ್ದೇಶವಿದೆ” ಎಂದು ಸುಂದರಂ ಅವರು ಹೇಳಿದ್ದಾರೆ. 

“ಇಪಿಎಸ್ ಯೋಜನೆ ಕುಸಿಯುವ ಸಾಧ್ಯತೆಯಿಲ್ಲ. ಈ ಯೋಜನೆಯಲ್ಲಿ ಮೂಲಧನದಿಂದ ಪಡೆದ ಬಡ್ಡಿಯಿಂದ ಪಿಂಚಣಿ ಪಾವತಿಸಲಾಗುತ್ತಿದೆ. ಮೂಲಧನವನ್ನು ಬಳಕೆ ಮಾಡಿಕೊಂಡಿಲ್ಲ. ವಾಸ್ತವವಾಗಿ ಹೇಳುವುದಾದರೆ, ಇಪಿಎಫ್ಒ ನಮ್ಮ ಬಳಿ ಹಣವಿಲ್ಲ ಎಂದು ದೇಶದ ಉದ್ಯೋಗಿಗಳಿಗೆ ಹೇಳುತ್ತಿದೆ. ಆದರೆ, ಒಮ್ಮೆಯೂ ಅದು ಮೂಲಧನವನ್ನು ಬಳಸಿಲ್ಲ” ಎಂದು ಪಿಂಚಣಿದಾರರು ಮತ್ತು ನೌಕರರ ಪರ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ವಾದಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್