ಆದಿವಾಸಿಗಳ ಕೊಲೆ | ಭಜರಂಗದಳದವರನ್ನು ಶಿಕ್ಷಿಸುವಂತೆ ಮಧ್ಯಪ್ರದೇಶದಲ್ಲಿ ಬೃಹತ್ ಪ್ರತಿಭಟನೆ

  • ಭಜರಂಗದಳದವರಿಂದ ಮನೆಗೆ ನುಗ್ಗಿ ಆದಿವಾಸಿಗಳ ಕೊಲೆ
  • ಮಹಿಳೆಯರು, ಪುರುಷರು ಹಾಗೂ ಯುವಕರಿಂದ ಸಿವನಿಯಲ್ಲಿ ಪ್ರತಿಭಟನೆ  

ಭಜರಂಗದಳದ ಗುಂಪಿನ ಕುರುಡು ಕೌರ್ಯಕ್ಕೆ ಬಲಿಯಾದ ಇಬ್ಬರು ಆದಿವಾಸಿಗಳ ಜೀವಕ್ಕೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಹಲವಾರು ಮಹಿಳೆಯರು, ಪುರುಷರು ಹಾಗೂ ಯುವಕರು ಮಧ್ಯಪ್ರದೇಶದ ಸಿವನಿಯಲ್ಲಿ ಪ್ರತಿಭಟನೆ  ನಡೆಸಿದ್ದಾರೆ.

ಮೇ 4ರಂದು ಗೋಹತ್ಯೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸಿಮರಿಯಾ ಗ್ರಾಮದ ಧನ್ ಶಾ ಇನವತಿ ಹಾಗೂ ಸಾಗರದ ಸಂಪತ್ ಬಟ್ಟಿ ಅವರ ಮನೆಗೆ ಸುಮಾರು 15 ಮಂದಿ  ಭಜರಂಗದಳದವರು ನುಗ್ಗಿ ಇಬ್ಬರನ್ನು ಹೊಡೆದು ದಾರುಣವಾಗಿ ಹತ್ಯೆ ಮಾಡಿದ್ದರು.

 

ಕೇಸರಿ ಸಂಘಟನೆಯ 15 ಜನರ ವಿರುದ್ಧ ಪರಿಶಿಷ್ಟ ಜಾತಿ ಮತ್ತು  ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಗಲಭೆ, ಕೊಲೆ, ಸ್ವಯಂ ಪ್ರೇರಿತ ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ಕೊಲೆಯಲ್ಲಿ ಭಾಗಿಯಾದ ಆರು ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ದೇಶದಲ್ಲಿ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್