ಬುಡಕಟ್ಟು ಸಮುದಾಯದ ಇಬ್ಬರ ದೊಂಬಿಹತ್ಯೆ; ಕೇಸರಿ ಪಡೆ ಮೇಲೆ ದೂರು ದಾಖಲು

  • ಬಲಪಂಥೀಯ ಗುಂಪಿನಿಂದ ಪೈಶಾಚಿಕ ಕೃತ್ಯ
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ಪ್ರಕರಣ ದಾಖಲು

ಗೋಹತ್ಯೆ ಮಾಡಿದ್ದಾರೆಂದು ಇಬ್ಬರು ಬುಡಕಟ್ಟು ವ್ಯಕ್ತಿಗಳ ಮೇಲೆ ಬಲಪಂಥೀಯ ಗುಂಪೊಂದು ಹಲ್ಲೆ ಮಾಡಿದೆ ಎಂದು ಆರೋಪಿಸಲಾದ ಘಟನೆ ಮಧ್ಯಪ್ರದೇಶದ ಸಿವನಿ ಜಿಲ್ಲೆಯ ಸಿಮರಿಯಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಸುಮಾರು 15 ಮಂದಿಯ ಬಲಪಂಥೀಯ ಪಡೆ ಆದಿವಾಸಿಗಳ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದು , ಇಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತ ಪಟ್ಟಿದ್ದಾರೆ. ಒಬ್ಬ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿದ್ದೀರಾ?  ರಾಜಕೀಯ ಪ್ರತ್ಯೇಕೀಕರಣ ದೇಶಕ್ಕೆ ಮಾರಕ: ಮಮತಾ ಬ್ಯಾನರ್ಜಿ

ಮೃತರನ್ನು ಸಿಮರಿಯಾ ಗ್ರಾಮದ ಧನ್ ಶಾ ಇನವತಿ ಹಾಗೂ ಸಾಗರದ ಸಂಪತ್ ಬಟ್ಟಿ ಎಂದು  ಗುರುತಿಸಲಾಗಿದೆ ಎಂದು ಕುರಲಿ ಪೊಲೀಸ್ ಠಾಣಾದ ಗಣಪತ್ ಸಿಂಗ್ ಉಕೆ ತಿಳಿಸಿದ್ದಾರೆ.

ಕೇಸರಿ ಸಂಘಟನೆಯ 15 ಜನರ ವಿರುದ್ಧ ಪರಿಶಿಷ್ಟ ಜಾತಿ ಮತ್ತು  ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಗಲಭೆ, ಕೊಲೆ, ಸ್ವಯಂ ಪ್ರೇರಿತ ಹಲ್ಲೆ  ಪ್ರಕರಣ ದಾಖಲಿಸಲಾಗಿದೆ. ಆರು ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಜಬಲ್ಪುರ- ನಾಗಪುರ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಸಂತ್ರಸ್ತರ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್