ಮೀಸಲಾತಿ ಕ್ಷೇತ್ರದಲ್ಲೂ ಅನ್ಯಾಯ: ಪಂಚಾಯತಿ ಅಧ್ಯಕ್ಷ ಸ್ಥಾನಕ್ಕಾಗಿ ಮಹಿಳೆ ಹೋರಾಟ

  • 19 ಸದಸ್ಯರ ಸಂಖ್ಯಾ ಬಲವಿರುವ ಬೂಕನಕೆರೆ ಪಂಚಾಯತ್‌
  • ಹಿಂದುಳಿದ ವರ್ಗ-ಬಿ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲು

ಕೆ.ಆರ್ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ-ಬಿ ಮಹಿಳೆಗೆ ಮೀಸಲಾಗಿದೆ. ಪಂಚಾಯತಿಯಲ್ಲಿ ಆ ವರ್ಗವನ್ನು ಪ್ರತಿನಿಧಿಸುವ ಸದಸ್ಯೆ ತಾವೊಬ್ಬರೇ ಆಗಿದ್ದು, ಅಧ್ಯಕ್ಷ ಸ್ಥಾನವನ್ನು ನನಗೆ ನೀಡಬೇಕು ಎಂದು ಪಂಚಾಯತ್ ಸದಸ್ಯೆ ರಾಜೇಶ್ವರಿ ಅವರು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದರು.

ಕೆ.ಆರ್‌ ಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "2020ರ ಡಿಸೆಂಬರ್ ತಿಂಗಳಲ್ಲಿ ನಡೆದ ಬೂಕನಕೆರೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಾನು ಬೂಕನಕೆರೆ ಮೊದಲನೇ ಬ್ಲಾಕ್‌ನಲ್ಲಿ ಹಿಂದುಳಿದ ವರ್ಗ-ಬಿ ಮಹಿಳೆ (ಮೀಸಲಾತಿ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಅವಿರೋಧವಾಗಿ ಅಯ್ಕೆಯಾಗಿದ್ದೇನೆ. 19 ಸದಸ್ಯರ ಸಂಖ್ಯಾ ಬಲವಿರುವ ಪಂಚಾಯತ್‌ನಲ್ಲಿ ಆ ವರ್ಗವನ್ನು ಪ್ರತಿನಿಧಿಸುವ ಏಕೈಕ ಸದಸ್ಯಯಾಗಿದ್ದೇನೆ" ಎಂದು ಹೇಳಿದ್ದಾರೆ. 

Eedina App

"ಈ ಹಿಂದೆ ಅಧ್ಯಕ್ಷರಾಗಿದ್ದ ಭಾಗ್ಯಮ್ಮ ಅವರು ರಾಜೀನಾಮೆ ಸಲ್ಲಿಸಿರುವ ಕಾರಣ ಜೂನ್ 27ರಂದು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ನಡೆಯಲಿದೆ. ಪಂಚಾಯತಿಯ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ-ಬಿ ಮಹಿಳೆಗೆ ಮೀಸಲಿದೆ. ಹೀಗಾಗಿ, ಆ ವರ್ಗವನ್ನು ಪ್ರತಿನಿಧಿಸುವವರು ತಾವೊಬ್ಬರೇ ಆಗಿದ್ದು, ತಮ್ಮನ್ನು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕಿತ್ತು. ಆದರೆ, ನನ್ನ ವಿರುದ್ಧ ಪ್ರವರ್ಗ-3ಎ ಮಹಿಳೆ ನಾಮಪತ್ರ ಸಲ್ಲಿಸಿದ್ದಾರೆ. ಅವರ ನಾಮಪತ್ರವನ್ನು ಅಂಗೀಕರಿಸಿರುವ ಚುನಾವಣಾಧಿಕಾರಿಗಳು, ಸಂವಿಧಾನ ಬದ್ದವಾದ ಮೀಸಲಾತಿಗೆ ಅನ್ಯಾಯ ಮಾಡಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.

"ಅನ್ಯಾಯವನ್ನು ಪ್ರಶ್ನಿಸಿ ಕೆ.ಆರ್‌ ಪೇಟೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ. ಪ್ರಕರಣವು ವಿಚಾರಣೆ ಹಂತದಲ್ಲಿದೆ" ಎಂದು ಅವರು ಹೇಳಿದ್ದಾರೆ.

AV Eye Hospital ad
ನಿಮಗೆ ಏನು ಅನ್ನಿಸ್ತು?
0 ವೋಟ್
eedina app