ದಕ್ಷಿಣ ಕನ್ನಡ | ಚರ್ಚ್ ಗೋಪುರದ ಶಿಲುಬೆ ಕಿತ್ತು ಕೇಸರಿ ಧ್ವಜ ಹಾರಿಸಿದ ದುಷ್ಕರ್ಮಿಗಳು

  • ಚರ್ಚ್‌ ಬಾಗಿಲು ಒಡೆದು ಹನುಮಾನ್ ಫೋಟೋ ಇಟ್ಟ ದುಷ್ಕರ್ಮಿಗಳು
  • ಮಲಯಾಳಂ ಭಾಷೆಯಲ್ಲಿರುವ ವಿಡಿಯೋ ಜಾಲತಾಣದಲ್ಲಿ ವೈರಲ್‌

ಕಿಡಿಗೇಡಿಗಳು ಚರ್ಚ್‌ನ ಗೋಪುರದ ಮೇಲಿದ್ದ ಶಿಲುಬೆಯನ್ನು ಕಿತ್ತು, ಕೇಸರಿ ಧ್ವಜವನ್ನು ಹಾರಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ. 

ತಾಲೂಕಿನ ಪೇರಡ್ಕ ಸಮೀಪದ ಇಮ್ಮಾನ್ಯೂವೆಲ್ ಎ ಜಿ ಚರ್ಚ್‌ನಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ. ಚರ್ಚ್‌ ಮೇಲೆ ಕೇಸರಿ ಬಾವುಟ ಹಾಕಿಸಿರುವ ದುಷ್ಕರ್ಮಿಗಳು, ಚರ್ಚ್‌ ಒಳಗೆ ಹನುಮಾನ್‌ ಫೋಟೋ ಇಟ್ಟು ಹೋಗಿದ್ದಾರೆ. 

ಧರ್ಮಸ್ಥಳ-ಸುಬ್ರಮಣ್ಯ ರಾಜ್ಯ ಹೆದ್ದಾರಿಯ ಸಮೀಪವೇ ಇರುವ ಇಮ್ಯಾನುವೇಲ್ ಎ ಜಿ ಚರ್ಚ್‌ನ ದುರಸ್ತಿ ಕಾಮಗಾರಿಗಳು ನಡೆಯುತ್ತಿದೆ. ಹೀಗಾಗಿ ರಾತ್ರಿ ಸಮಯ ಚರ್ಚ್‌ನಲ್ಲಿ ಯಾರೂ ಉಳಿಯುತ್ತಿರಲಿಲ್ಲ. ಈ ವೇಳೆ, ದುಷ್ಕರ್ಮಿಗಳೇ ಚರ್ಚ್ ಬಾಗಿಲು ಒಡೆದು, ಕೇಸರಿ ಬಾವುಟ ಹಾಕಿಸಿ, ಹನುಮಾನ್‌ ಫೋಟೊ ಇಟ್ಟಿದ್ದಾರೆ. ಮಾತ್ರವಲ್ಲದೇ, ಚರ್ಚ್‌ನಲ್ಲಿ ಮದ್ಯದ ಬಾಟಲಿಗಳನ್ನೂ ಎಸೆದುಹೋಗಿದ್ದಾರೆ.

ಘಟನೆಗೆ ಸಂಬಂಧಿಸಿದ ಮಲಯಾಳಂ ಭಾಷೆಯಲ್ಲಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರೇ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. 

ಆರೋಪದ ಹಿನ್ನಲೆಯಲ್ಲಿ ಭಜರಂಗದಳದ ಮುಖಂಡ ಮುರುಳಿಕೃಷ್ಣ ಹಸಂತಡ್ಕ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆರೋಪವನ್ನು ಅಲ್ಲಗಳೆದಿದ್ದಾರೆ. 

ಸದ್ಯ, ಘಟನೆಯಿಂದಾಗಿ ಹೆಚ್ಚಿನ ಸಮಸ್ಯೆಗಳು ತಲೆದೂರಬಾರದು ಎಂಬ ಮುಂದಾಲೋಚನೆಯಿಂದ ಫೋಟೋ ಮತ್ತು ಬಾವುಟವನ್ನು ಚರ್ಚ್‌ ಮುಖಂಡರೇ ತೆರವುಗೊಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
3 ವೋಟ್
Image
av 930X180