ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಟೆಕ್ವಾಂಡೊ ಚಾಂಪಿಯನ್ಶಿಪ್ (Taekwondo Championship)ನಲ್ಲಿ ಉಡುಪಿ ಜಿಲ್ಲೆಯ ನಕ್ರೆ ಕುಕ್ಕುಂದೂರು ಗ್ರಾಮದ ಪವನ್ ನಕ್ರೆ ಬೆಳ್ಳಿ ಪದಕ ಗೆದ್ದಿದ್ದಾರೆ. ರಾಷ್ಟ್ರಮಟ್ಟದ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ.
ಚಿಕ್ಕಂದಿನಿಂದಲೇ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಪವನ್ ತಂದೆಯ ಒತ್ತಾಯದ ಮೇರೆಗೆ ಟೆಕ್ವಾಂಡೊನಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ. ನಂತರ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಟೆಕ್ವಾಂಡೊ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ, ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೆ ಶಿವಮೊಗ್ಗದಲ್ಲಿ ನಡೆದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ ಹಾಗೂ ತಮ್ಮ ಹುಟ್ಟೂರಿಗೆ ಹೆಮ್ಮೆ ತಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಪ್ರೊ ಕಬಡ್ಡಿ ಲೀಗ್ | ಹ್ಯಾಟ್ರಿಕ್ ಜಯದೊಂದಿಗೆ ಅಗ್ರಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್
ಅಕ್ಟೋಬರ್ 15 ಮತ್ತು 16ರಂದು 'ಅಖಿಲ ಕರ್ನಾಟಕ ಕ್ರೀಡಾ ಮತ್ತು ಕಲಾ ಅಕಾಡೆಮಿ' ಬೆಂಗಳೂರಿನಲ್ಲಿ ಆಯೋಜಸಿದ್ದ 'ವೆಸ್ಟಾರ್ಟ್ಸ್ ಕಪ್' ಒಂದನೇ ರಾಷ್ಟ್ರೀಯ ಮುಕ್ತ 'ಸೂಮ್ಮೆ' ಹಾಗೂ 'ಕೋರುಗು' ಟೇಕ್ವಾಂಡೋ ಚಾಂಪಿಯನ್ ಶಿಪ್ನ ಸೀನಿಯರ್ ವಿಭಾಗದ ಫೈಟ್ನಲ್ಲಿ ಪವನ್ ಭಾಗವಹಿಸಿದ್ದರು. ಸೂಮ್ಮೆಯಲ್ಲಿ ಎರಡು ಬೆಳ್ಳಿಯ ಪದಕವನ್ನು ಪಡೆದಿದ್ದಾರೆ.

ತಮ್ಮ ಸ್ವ-ರಕ್ಷಣೆಗಾಗಿ ಟೆಕ್ವಾಂಡೊ ಕಲಿತರೆ ಒಳ್ಳೆಯದು. ಈ ವಿದ್ಯೆ ಶತ್ರುಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ ಎಂದು ಪವನ್ ಈ ದಿನ.ಕಾಮ್ಗೆ ಹೇಳಿದ್ದಾರೆ.
ಪವನ್ ತಂದೆ ಆನಂದ್ ನಕ್ರೆ ಅವರು ದಸಂಸ ಕಾಕ೯ಳ ತಾಲೂಕು ಸಂಚಾಲಕರಾಗಿದ್ದಾರೆ. ತಾಯಿ ದುರ್ಗಿ ನಕ್ರೆ ಮಹಿಳಾ ಸಂಘಟನಾ ಸಂಚಾಲಕಿಯಾಗಿದ್ದಾರೆ. ಪವನ್ ದೂಪದಕಟ್ಟೆ ಸುರೇಶ್ ದೇವಾಡಿಗ ಅವರಲ್ಲಿ ಟೆಕ್ವಾಂಡೊ ತರಬೇತಿ ಪಡೆಯುತ್ತಿದ್ದಾರೆ.