ಕೊಪ್ಪಳ | ಆಕಸ್ಮಿಕವಾಗಿ ಬೆಂಕಿ ಬಿದ್ದು ಕಬ್ಬಿನ ಬೆಳೆ ಭಸ್ಮ; ಕಂಗಾಲಾದ ರೈತ

  • 2 ಲಕ್ಷ ರೂ. ಮೌಲ್ಯದ ಕಬ್ಬಿನ ಬೆಳೆ ಭಸ್ಮ
  • ಪರಿಹಾರಕ್ಕೆ ಸಂತ್ರಸ್ತ ರೈತ ಒತ್ತಾಯ

ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ 2 ಲಕ್ಷ ರೂ. ಮೌಲ್ಯದ ಕಬ್ಬಿನ ಬೆಳೆ ಮತ್ತು ಜಾನುವಾರುಗಳಿಗೆ ಕೂಡಿಟ್ಟಿದ್ದ ಒಣ ಮೇವು ಸುಟ್ಟು ಭಸ್ಮವಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಸಹಂಚಿನಾಳ ಗ್ರಾಮದಲ್ಲಿ ನಡೆದಿದೆ.

Image

"ಕಬ್ಬಿನ ತೋಟಕ್ಕೆ ಬುಧವಾರ ಬೆಂಕಿ ಬಿದ್ದು, ಅಪಾರ ನಷ್ಟ ಉಂಟಾಗಿದೆ. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು ನಂದಿಸದರು. ಆದರೆ, ಅಷ್ಟೊತ್ತಿಗಾಗಲೇ ಬಹುತೇಕ ಕಬ್ಬಿನ ಬೆಳೆ ಹಾಗೂ ಜಾನುವಾರುಗಳಿಗಾಗಿ ಕೂಡಿಟ್ಟಿದ್ದ ಒಣಮೇವು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ಅನಿರೀಕ್ಷಿತವಾಗಿ ಬಂದೆರಗಿದ ಈ ಸಮಸ್ಯೆಯಿದ ನಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ" ಎಂದು ಸಂತ್ರಸ್ತ ರೈತ ರಮೇಶ್ ಬನ್ನಿಗೋಳ ಅಳಲು ತೋಡಿಕೊಂಡಿದ್ದಾರೆ.

"ಸಾಲ ಮಾಡಿ ಬೆಳೆದ ಕಬ್ಬಿನ ಬೆಳೆ ಭಸ್ಮವಾಗಿದ್ದು, ಸುಮಾರು 2 ಲಕ್ಷ ರೂ. ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಸರಕಾರದಿಂದ ಬೆಳೆ ಹಾನಿಗೆ ಸೂಕ್ತ ಪರಿಹಾರ ಕೊಡಿಸಬೇಕು" ಎಂದು ರೈತ ರಮೇಶ್‌ ಬನ್ನಿಗೋಳ ಮನವಿ ಮಾಡಿದ್ದಾರೆ.

ಮಾಸ್‌ ಮೀಡಿಯಾ ಕೊಪ್ಪಳ ಮಾಧ್ಯಮ ಸಂಯೋಜಕ ಭೀಮಾ ಶಂಕರ್ ಮಾಹಿತಿ ಆಧಾರಿತ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180