ಸ್ವಾತಂತ್ರ್ಯ ದಿನಾಚರಣೆಯಂದು ಪೌರ ಕಾರ್ಮಿಕರಿಗೆ ರಜೆ ನೀಡಲು ಎಐಸಿಸಿಟಿಯು ಆಗ್ರಹ

  • ಒಂದು ದಿನವೂ ರಜೆಯಿಲ್ಲದೇ ದುಡಿಯುವ ಪೌರ ಕಾರ್ಮಿಕರು
  • ಇಡೀ ರಾಷ್ಟ್ರವೇ ಸಂಭ್ರಮದಲ್ಲಿರುವಾಗ ಪೌರ ಕಾರ್ಮಿಕರಿಗೇಕೆ ಕೆಲಸ?

ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 15ರಂದು ಪೌರಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಎಐಸಿಸಿಟಿಯು ಪೌರ ಕಾರ್ಮಿಕರಿಗೆ ರಜೆ ನೀಡಲು ಆಗ್ರಹಿಸಿದೆ.

‘ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಚಾಲಕರು, ಸಹಾಯಕರು ಒಳಗೊಂಡಂತೆ ಎಲ್ಲ ಪೌರ ಕಾರ್ಮಿಕರು ವರ್ಷದ 365 ದಿನವೂ ಒಂದು ದಿನ ರಜೆ ಸೌಲಭ್ಯವಿಲ್ಲದೆ ದುಡಿಯುತ್ತಾರೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿ೦ದಲೇ ಕೆಲಸ ಪ್ರಾರಂಭಿಸುತ್ತಾರೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ಆಗಸ್ಟ್‌ 15 ಸ್ವಾತಂತ್ರ್ಯ ದಿನೋತ್ಸವದಂದು ಇಡೀ ರಾಷ್ಟ್ರವೇ ಸಂಭ್ರಮ ಸಡಗರದಿಂದ ರಾಷ್ಟ್ರೀಯ ಹಬ್ಬವನ್ನು ಆಚರಿಸುತ್ತಿದ್ದರೆ, ಪೌರ ಕಾರ್ಮಿಕರು ಮಾತ್ರ, ಒತ್ತಾಯಪೂರ್ವಕ ಕೆಲಸಕ್ಕೆ ಹಾಜರಾಗಿ, ಸ್ವತಂತ್ರ್ಯ ಎಂಬ ಪರಿಕಲ್ಪನೆಯೇ ತಿಳಿಯದೆ ಸರ್ಕಾರ ಸೃಷ್ಟಿಸಿರುವ ಗುಲಾಮಿ ಪದ್ಧತಿಯೊಳಗಡೆ ಬದುಕು ಸಾಗಿಸಬೇಕಾಗಿದೆ ಎಂದು ಟ್ವೀಟ್ ಮಾಡಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ಇಲಾಖೆಯಲ್ಲ: ಸುಪ್ರೀಂ ಕೋರ್ಟ್

ಸ್ವಾತಂತ್ರ್ಯ ದಿನೋತ್ಸವಕ್ಕೆ ಕಡ್ಡಾಯವಾಗಿ ನೀಡಲೇಬೇಕಾದ ಸರ್ಕಾರಿ ರಜೆ ಸೌಲಭವನ್ನು ಪೌರ ಕಾರ್ಮಿಕರಿಗೆ ವೇತನ ಸಹಿತವಾಗಿ ನೀಡಬೇಕೆಂದು ಎಐಸಿಸಿಟಿಯು ಒತ್ತಾಯಿಸಿದೆ. 

ಎಐಸಿಸಿಟಿಯು ಬಿಬಿಎಂಪಿ ಪೌರಕಾರ್ಮಿಕರ ಸಂಘ, ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘ ಮತ್ತು ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಹಾಗೂ ಸಹಾಯಕರ ಸಂಘಗಳನ್ನು ಒಳಗೊಂಡಿದೆ

ನಿಮಗೆ ಏನು ಅನ್ನಿಸ್ತು?
0 ವೋಟ್