ಚಿತ್ರದುರ್ಗ| ಯಲಹಂಕ ಇಒ ವಿರುದ್ಧ ನಕಲಿ ಖಾತೆ ಸೃಷ್ಟಿ ಆರೋಪ; ಸಿಒಡಿ ತನಿಖೆಗೆ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಇಒ ಆಗಿದ್ದ ಹಾಗೂ ಹಾಲಿ ಯಲಹಂಕ ತಾಲೂಕು ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇ.ಪ್ರಕಾಶ್ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಸಿಒಡಿ ತನಿಖೆ ನಡೆಸಬೇಕು ಎಂದು ರೈತ ಸಂಘ ಆಗ್ರಹಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮೊಳಕಾಲ್ಮೂರು ತಾಲೂಕು ಪಂಚಾಯತ್‌ ಎದುರು ಪ್ರತಿಭಟನೆ ನಡೆಸಿದ ರೈತ ಮುಖಂಡರು, ಕಾರ್ಯನಿರ್ವಾಹಕ ಅಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. "ಮೊಳಕಾಲ್ಮೂರಿನ ತಾಲೂಕು ಪಂಚಾಯತ್‌ನಲ್ಲಿ ದಿನಾಂಕ 23-11-2019ರಿಂದ 26-04-20221ರವರೆಗೆ ಪಡೆದಿರುವ ಭಷ್ಟಚಾರದ ಬಗ್ಗೆ ಈ ಹಿಂದೆ ರೈತ ಸಂಘ, ದಲಿತ ಸಂಘ, ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ಭಾರೀ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪರಿಣಾಮ, ಇಒ ಪ್ರಕಾಶ್ ಅವರನ್ನು ವರ್ಗಾವಣೆ ಮಾಡಲಾಗಿದೆ, ಉಳಿದಂತೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ಈ ಹಿಂದೆ ಕಾರ್ಯನಿರ್ವಹಿಸಿದ ದಿನದಿಂದ ಮೊಳಕಾಲ್ಮೂರಿನಿಂದ ವರ್ಗಾವಣೆ ಆಗುವವರೆಗೂ ಮಾಡಿರುವ ಭ್ರಷ್ಟಾಚಾರವನ್ನು ಸಿಒಡಿ ಅಧಿಕಾರಿಂದ ತನಿಖೆ ಮಾಡಿಸಬೇಕು" ಎಂದು ಒತ್ತಾಯಿಸಿದರು.

"ಹಾಲಿ ಯಲಹಂಕ ತಾಲೂಕು ಪಂಚಾಯತಗಗನಲ್ಲಿ ಕಾರ್ಯನಿರ್ವಹಿಸುತ್ತಿರುವ ಇ.ಪ್ರಕಾಶ್, ಅಲ್ಲಿಯೂ 1,000 'ಇ' ಸ್ವತ್ತು ನಕಲಿ ಖಾತೆ ಸೃಷ್ಟಿಸಿದ್ದಾರೆಂದು ಸಾರ್ವಜನಿಕರು ಮೇಲಾಧಿಕಾರಿಗೆ ದೂರು ನೀಡಿದ್ದಾರೆ. ಅವರ ವಿರುದ್ಧದ ಎಲ್ಲ ಭ್ರಷ್ಟಾಚಾರದ ಆರೋಪಗಳನ್ನು ಸಿಒಡಿ ತನಿಖೆ ವಹಿಸಬೇಕು" ಎಂದು ಒತ್ತಾಯಿಸಿದ್ದಾರೆ. 

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ರವಿಕುಮಾರ್, ರಾಜ್ಯ ರೈತಸಂಘ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಮಲ್ಲೇಶಪ್ಪ, ರಾಮಕೃಷ್ಣ ಮತ್ತಿತರ ರೈತ ಮುಖಂಡರು ಭಾಗವಹಿಸಿದ್ದರು.

ಪ್ರಮುಖ ಹಕ್ಕೊತ್ತಾಯಗಳು:

1. ಪಿಡಿಒಗಳನ್ನು ಅವರವರ ಮೂಲಸ್ಥಾನಕ್ಕೆ  ಖಾಯಂ ಆಗಿ ನೇಮಿಸಬೇಕು.  

2. ಬಡವರಿಗೆ ಮನೆ ಹಂಚಿಕೆಯಲ್ಲಿ ಗ್ರಾಮ ಪಂಚಾಯತ್‌ ಗಳಲ್ಲಿ ಭ್ರಷ್ಟಾಚಾರದ ವಾಸನೆ ಬರುತ್ತಿದ್ದು, ತಕ್ಷಣವೇ ಅರ್ಹ ಫಲಾನುಭವಿಗಳಿಗೆ ಕೊಡಬೇಕು.  

3. ಗುಂಡೂರು ಗೊಲ್ಲರಹಟ್ಟಿ' (ದಾಸಪ್ಪನಹಟ್ಟಿ) ಗ್ರಾಮಕ್ಕೆ ಹೋಗುವ ರಸ್ತೆಯನ್ನು ತಕ್ಷಣವೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. 

 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180