ಶಿಕ್ಷಕರ ನೇಮಕಾತಿ ಅಕ್ರಮ ಆರೋಪ | ವಿಜಯಪುರ ಜಿಲ್ಲೆಯ ಶಿಕ್ಷಕನ ಬಂಧನ

  • ನೇಮಕಾತಿ ಪರೀಕ್ಷೆ ತೆಗೆದುಕೊಳ್ಳದೆ ನೇಮಕಗೊಂಡಿದ್ದ ಶಿಕ್ಷಕ
  • ಶಿಕ್ಷಕರ ನೇಮಕಾತಿ ಅಕ್ರಮದಲ್ಲಿ ಈಗಾಗಲೇ ಜಿಲ್ಲೆಯ ಇಬ್ಬರು ಶಿಕ್ಷಕರ ಬಂಧನ

2014-15ರಲ್ಲಿ ನಡೆದಿದ್ದ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆ (ಸಿಐಡಿ) ಪೊಲೀಸರು ಇದೀಗ ಮತ್ತೊಬ್ಬ ಆರೋಪಿಯಾಗಿ ವಿಜಯಪುರದ ಮತ್ತೊಬ್ಬ ಶಿಕ್ಷಕನನ್ನು ಬಂಧಿಸಲಾಗಿದೆ.

ಅಶೋಕ್ ಚೌಹಾಣ್ ಬಂಧಿತ ಶಿಕ್ಷಕ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕು ಭೈರವಾಡಗಿ ಗ್ರಾಮದ ಪ್ರೌಢಶಾಲೆ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿರುವ ಈತ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯದೇ ನೇಮಕಗೊಂಡು ಜಿಲ್ಲೆಗೆ ವರ್ಗಾವಣೆಯಾಗಿದ್ದ. ಈತ ಅಕ್ರಮವಾಗಿ ನೇಮಕಗೊಂಡಿದ್ದಾನೆ ಎಂಬ ಆರೋಪದ ಮೇಲೆ ಬುಧವಾರ (ಸೆ.21) ಈತನನ್ನು ಬಂಧಿಸಲಾಗಿದೆ.

ಅಶೋಕ್ ಚೌಹಾಣ್ ಮೊದಲು ಚಿತ್ರದುರ್ಗ ಜಿಲ್ಲೆಯ ಜಗಳೂರಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ. ಬಳಿಕ ವಿಜಯಪುರ ಜಿಲ್ಲೆಗೆ ವರ್ಗಾವಣೆಯಾಗಿದ್ದ. ಅಶೋಕ್ ಚೌಹಾಣ್ ನೇಮಕಾತಿಯಲ್ಲಿ ಬಂಧನವಾದ ಜಿಲ್ಲೆಯ ಮೂರನೇ ಆರೋಪಿ ಶಿಕ್ಷಕ.

ಈ ಸುದ್ದಿ ಓದಿದ್ದೀರಾ? ನಿರುದ್ಯೋಗದಿಂದ ಪದವಿ ಪಡೆದ ಯುವಕರು ತಪ್ಪುದಾರಿ ಹಿಡಿಯುತ್ತಿದ್ದಾರೆ: ಮೊಹಮ್ಮದ್ ಹ್ಯಾರಿಸ್ ನಲಪಾಡ್

ಈಗಾಗಲೇ ಜಿಲ್ಲೆಯ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ. ಚಡಚಣ ತಾಲುಕಿನ ಹತ್ತಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಮಹೇಶ ಸೂಸಲಾದಿ. ಕಪನಿಂಬರಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಸಿದ್ರಾಮಪ್ಪ ಬಿರಾದಾರ್ ಇತರ ಬಂಧಿತ ಶಿಕ್ಷಕರು.

ಇವರನ್ನು ಅಮನಾತು ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿಡಿಪಿಐ) ಉಮೇಶ್ ಶೀರಹಟ್ಟಿಮಠ ಆದೇಶ ಹೊರಡಿಸಿದ್ದಾರೆ.

ಅಶೋಕ್ ಚೌಹಾಣ್ 2012-13 ಮತ್ತು 2014-15ರ ಸಾಲಿನಲ್ಲಿ ನಡೆಸಿದ್ದ, ಶಿಕ್ಷಕರ ನೇಮಕಾತಿಯ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಹಾಜರಾಗಿರಲಿಲ್ಲ. ನೇಮಕಾತಿಯಾಗಿ ಸೇವೆಗೆ ಹೋಗದವರ ಸ್ಥಾನಕ್ಕೆ ಅಕ್ರಮವಾಗಿ ನೇಮಕವಾಗಿರುವ ಆರೋಪ ಕೇಳಿ ಬಂದಿತ್ತು.  

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180