
- ಪರೇಶ್ ಮೇಸ್ತಾ ಸಾವು ಆಕಸ್ಮಿಕ ಎಂದು ನ್ಯಾಯಾಲಯಕ್ಕೆ ಸಿಬಿಐ ವರದಿ
- ಬಿಜೆಪಿ ಸುಳ್ಳುಗಳು ಅವರದ್ದೇ ಆಡಳಿತದಲ್ಲಿ ಬೆತ್ತಲಾಗುತ್ತಿವೆ: ಕಾಂಗ್ರೆಸ್
"ಮೈ ಪರಚಿ, ಬೀದಿಯಲ್ಲಿ ಅರಚಿ, ರಂಪಾಟ-ರಾದ್ಧಾಂತ ಮಾಡಿ ಸ್ವಾರ್ಥ ಅಧಿಕಾರದ ಬೇಳೆ ಬೇಯಿಸಿಕೊಂಡ ಬಿಜೆಪಿಗರೇ ಜನರೆದರು ಕ್ಷಮೆ ಕೇಳುವ ಮುಖ ಇದೆಯಾ?" ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
'ಸಂಘ-ಪರಿವಾರದ ಕಾರ್ಯಕರ್ತ' ಎಂದು ಬಿಂಬಿತವಾಗಿ ರಾಜ್ಯಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ 'ಪರೇಶ್ ಮೇಸ್ತಾ ಸಾವು ಆಕಸ್ಮಿಕ' ಎಂದು ಹೇಳಿ ಸಿಬಿಐ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಈ ಬೆಳವಣಿಗೆ ಕುರಿತು ಟ್ವೀಟ್ ಮಾಡಿರುವ ಅವರು ಬಿಜೆಪಿಯನ್ನು ಕುಟುಕಿದ್ದಾರೆ.
“ಡಿ ಕೆ ರವಿ ಕೊಲೆಯಾಗಿದೆ-ಬಿಜೆಪಿ; ಅದೊಂದು ಆತ್ಮಹತ್ಯೆ-ಸಿಬಿಐ ವರದಿ, ತೀರ್ಥಹಳ್ಳಿ ನಂದಿತಾ ಪ್ರಕರಣದಲ್ಲಿ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ- ಬಿಜೆಪಿ, ಇದೊಂದು ಆತ್ಮಹತ್ಯೆ-ಸಿಐಡಿ ವರದಿ, ಪರೇಶ್ ಮೇಸ್ತಾ ಪ್ರಕರಣ; ಅದೊಂದು ಕೊಲೆ-ಬಿಜೆಪಿ, ಆಕಸ್ಮಿಕ ಸಾವು-ಸಿಬಿಐ ವರದಿ” ಎಂದು ಟ್ವೀಟ್ ಮಾಡಿದ್ದಾರೆ.
ಡಿಕೆ ರವಿ ಕೊಲೆಯಾಗಿದೆ-ಬಿಜೆಪಿ
— Hariprasad.B.K. (@HariprasadBK2) October 4, 2022
ಅದೊಂದು ಆತ್ಮಹತ್ಯೆ-CBI ವರದಿ.
ತೀರ್ಥಹಳ್ಳಿ ನಂದಿತಾ ಕೊಲೆ-ಬಿಜೆಪಿ,
ಇದೊಂದು ಆತ್ಮಹತ್ಯೆ-CID ವರದಿ
ಪರೇಶ್ ಮೆಸ್ತಾ ಕೊಲೆ-ಬಿಜೆಪಿ,
ಆಕಸ್ಮಿಕ ಸಾವು-CBI ವರದಿ.
ಮೈ ಪರಚಿ,ಬೀದಿಯಲ್ಲಿ ಅರಚಿ, ರಂಪಾಟ-ರಾದ್ದಾಂತ ಮಾಡಿ ಸ್ವಾರ್ಥ ಅಧಿಕಾರದ ಬೇಳೆ ಬೆಳೆಸಿಕೊಂಡ ಬಿಜೆಪಿಗರೇ ಜನರೆದರು ಕ್ಷಮೆ ಕೇಳುವ ಮುಖ ಇದ್ಯಾ?
ಇತ್ತ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದ್ದು, “ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ. ಡಿ.ಕೆ ರವಿ ಪ್ರಕರಣ - ವೈಯುಕ್ತಿಕ ಕಾರಣಗಳಿಗೆ ಆತ್ಮಹತ್ಯೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ - ಸರ್ಕಾರಕ್ಕೆ ಸಂಬಂಧವಿಲ್ಲ, ಪರೇಶ್ ಮೇಸ್ತಾ ಪ್ರಕರಣ- ಸಹಜ ಸಾವು. ಸುಳ್ಳು ಹೇಳಿದ್ದ ಬಿಜೆಪಿ ರಾಜ್ಯದ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದೆ.
ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ.
— Karnataka Congress (@INCKarnataka) October 4, 2022
⭕ ಡಿ.ಕೆ ರವಿ ಪ್ರಕರಣ - ವೈಯುಕ್ತಿಕ ಕಾರಣಗಳಿಗೆ ಆತ್ಮಹತ್ಯೆ
⭕ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ - ಸರ್ಕಾರಕ್ಕೆ ಸಂಬಂಧವಿಲ್ಲ
⭕ಪರೇಶ್ ಮೇಸ್ತಾ ಪ್ರಕರಣ - ಸಹಜ ಸಾವು
ಸುಳ್ಳು ಹೇಳಿದ್ದ @BJP4Karnataka ರಾಜ್ಯದ ಕ್ಷಮೆ ಕೇಳಬೇಕು.