ಕೊಡಗು| ಹಿಂದೂ ಹುಡುಗಿಯರ ಜೊತೆ ಬಂದ ಮೂವರ ಯುವಕರ ಮೇಲೆ ಹಲ್ಲೆ; ಪ್ರಕರಣ ದಾಖಲು

Mandalpatti
  • ಪ್ರವಾಸಿತಾಣಕ್ಕೆ ಬಂದ ಯುವಕರ ಮೇಲೆ ಹಲ್ಲೆ
  • ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಇಬ್ಬರು ಹಿಂದೂ ಯುವತಿಯರ ಜೊತೆ ಬಂದ ಮೂವರು ಯುವಕರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯ ಪ್ರವಾಸಿತಾಣ ಮಂದಲ್‌ಪಟ್ಟಿಯಲ್ಲಿ ನಡೆದಿದೆ.

ಸಮನ್‌ ಸಾಜಿದ್‌, ಸಂಶೀರ್ ಮತ್ತು ನಂದಕಿಶೋರ್ ಎಂಬ ಯುವಕರು ಇಬ್ಬರು ಯುವತಿಯೊರೊಂದಿಗೆ ಪ್ರವಾಸಿತಾಣಕ್ಕೆ ಬಂದಿದ್ದರು. ಇವರೆಲ್ಲರೂ ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಡ್ಮಿಂಟನ್‌ ಕ್ಲಬ್‌ನ ಸದಸ್ಯರಾಗಿದ್ದಾರೆ.

ಅಬ್ಬಿ ಫಾಲ್ಸ್‌ ವೀಕ್ಷಿಸಿ ಮಂದಲ್‌ ಪಟ್ಟಿಗೆ ಐವರು ಹೋದಾಗ ಮೊದಲಿಗೆ ಐವರ ಗುಂಪೊಂದು ಬಂದು ಯುವಕರ ಮೇಲೆ ದಾಳಿ ನಡೆಸಿದೆ. ನಂತರ ಮತ್ತೊಂದಿಷ್ಟು ಯುವಕರು ಬಂದು ಮೂವರು ಯುವಕರನ್ನು ಸುತ್ತುವರೆದು ಹಲ್ಲೆ ನಡೆಸಿದರು ಎಂದು ವರದಿಯಾಗಿದೆ.

ಈ ಸುದ್ದಿ ಓದಿದ್ದೀರಾ?: ಮಂಗಳೂರು | ಲೇಡಿಹಿಲ್ ನಗರ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಸಿಪಿಐಎಂ ಒತ್ತಾಯ

ಯುವಕನ್ನು ಗುಂಪೊಂದು ದಾಳಿ ನಡೆಸುತ್ತಿರುವ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರು ಬರುತ್ತಿದ್ದಂತೆಯೇ ಹಲ್ಲೆಗೈದ ಗುಂಪು ಪರಾರಿಯಾಗಿದ್ದಾರೆ.

ಹಿಂದೂ ಹುಡುಗಿಯರ ಜೊತೆ ಮುಸ್ಲಿಂ ಹುಡುಗರು ಇದ್ದಾರೆ ಎಂಬ ಕಾರಣಕ್ಕೆ ಹಲ್ಲೆ ನಡೆಸಿರಬಹುದು ಎಂಬ ಅನುಮಾನವನ್ನು ಸ್ಥಳೀಯರು ಹೊರಹಾಕಿದ್ದಾರೆ. ತನಿಖೆಯ ನಂತರವಷ್ಟೇ ನಿಜವಾದ ಕಾರಣ ತಿಳಿಯಲಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಫೋಟೊ: ಮಂದಲ್ ಪಟ್ಟಿ
ನಿಮಗೆ ಏನು ಅನ್ನಿಸ್ತು?
0 ವೋಟ್