ಬಾಗಲಕೋಟೆ | ಕೌಟುಂಬಿಕ ಕಲಹ: ಮಹಿಳೆಯ ಸಹೋದರನಿಂದ ಯೋಧನ ಬರ್ಬರ ಹತ್ಯೆ

  • ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ
  • ನಾಲ್ಕು ದಿನದ ಹಿಂದೆ ರಜೆಯ ಮೇಲೆ ಬಂದಿದ್ದ ಯೋಧ

ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಯೋಧ ಮತ್ತು ಆತನ ಪತ್ನಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದ್ದು, ಯೋಧನನ್ನು ಹತ್ಯೆಗೈದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ನಡೆದಿದೆ. 

ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಕರಿಸಿದ್ದಪ್ಪ ಕಳಸದ (25) ಎಂಬ ಯೋಧ ತನ್ನ ಹುಟ್ಟೂರು ಬದಾಮಿ ತಾಲೂಕಿನ ನೀರಲಕೇರಿ ಗ್ರಾಮಕ್ಕೆ ಬಂದಿದ್ದರು. ಗುರುವಾರ ರಾತ್ರಿ ಕಳಸದ ಮತ್ತು ಅವರ ಪತ್ನಿ ವಿದ್ಯಾ ನಡುವೆ ಕ್ಷುಲ್ಲಕ ಜಗಳ ನಡೆದಿದೆ.

ಜಗಳದಿಂದ ಕೋಪಗೊಂಡ ವಿದ್ಯಾ ತನ್ನ ಸಹೊದರ ಸಿದ್ದನಗೌಡ ದೂಳಪ್ಪನಿಗೆ ಕರೆ ಮಾಡಿ ಕಲಹದ ಬಗ್ಗೆ ಹೇಳಿಕೊಂಡಿದ್ದಾರೆ. ಇದರಿಂದ ಉದ್ರಿಕ್ತಗೊಂಡ ದೂಳಪ್ಪ, ತನ್ನ ಅಕ್ಕನ ಮನೆಗೆ ಬಂದು, ಯೋಧನನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. 

ಎನ್ನುವ ಯೋಧ ಹಾಗೂ ಇವರ ಪತ್ನಿ ವಿದ್ಯಾ ಎಂಬುವವರು ಕಳೆದ ಎರಡು ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. 

 

ಈ ಸುದ್ದಿ ಓದಿದ್ದೀರಾ? : ಉತ್ತರ ಕನ್ನಡ | ಹಿಂದು ಕಾರ್ಯಕರ್ತ ಕೊಲೆ ಆರೋಪಿಗೆ ಬಿಜೆಪಿ ಉಪಾಧ್ಯಕ್ಷ ಸ್ಥಾನ 

ಸ್ಥಳಕ್ಕೆ ಭೇಟಿ ನೀಡಿದ ಕೆರೂರು ಪೋಲಿಸರು ಆರೋಪಿ ಸಿದ್ದನಗೌಡ ದೂಳಪ್ಪ ಹಾಗೂ ಇವನ ಸಹೋದರಿ ವಿದ್ಯಾಳನ್ನು ವಶಕ್ಕೆ ಪಡೆದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್