ಬಾಗಲಕೋಟೆ | ಮಹಾಲಿಂಗಪುರ ತಾಲೂಕು ಹೋರಾಟ; ಬಂದ್ ಯಶಸ್ವಿ

mahalingapura
  • ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿಸುವಂತೆ ಒತ್ತಾಯ
  • ತಾಲೂಕು ರಚನೆಗಾಗಿ 126 ದಿನಗಳಿಂದ ನಿರಂತರ ಹೋರಾಟ 

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಿ ಮಹಾಲಿಂಗಪುರ ತಾಲೂಕು ಕೇಂದ್ರ ಹೋರಾಟ ಸಮಿತಿ ಬುಧವಾರ (ಆಗಸ್ಟ್‌ 17) ರಂದು ಹಮ್ಮಿಕೊಂಡಿದ್ದ  ಬಂದ್ ಯಶಸ್ವಿಯಾಯಿತು.

ಬುಧವಾರ ಮುಂಜಾನೆ ಪಟ್ಟಣದ ಬಸವ ವೃತ್ತದಲ್ಲಿ ತಾಲೂಕು ಹೋರಾಟ ಸಮಿತಿ ಸದಸ್ಯರ, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ನಾನಾ ಗ್ರಾಮಗಳ ಮುಖಂಡರು, ಹೋರಾಟಗಾರರು ಹಾಗೂ ರೈತರು ಭಾಗವಹಿಸಿ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಮೂಲಕ ಬಂದ್‌ಗೆ ಚಾಲನೆ ನೀಡಿದರು.

ಸಂಗನಾಟ್ಟಿಯ ಹಲಗೆಮೇಳ, ಮಹಾಲಿಂಗಪುರದ ಡೊಳ್ಳಿನ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು. ಬಂದ್ ನಿಮಿತ್ತ ಮಹಾಲಿಂಗಪುರದ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು.

ಈ ಸುದ್ದಿ ಓದಿದ್ದೀರಾ?; ಡಿ ದೇವರಾಜ ಅರಸು ಹೆಸರಿನಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಪ್ರಶಸ್ತಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ತಾಲೂಕು ರಚನೆಗಾಗಿ 126 ದಿನಗಳಿಂದ ನಿರಂತರ ಹೋರಾಟ ನಡೆದಿದ್ದು, ಬಂದ್‌ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ  ಸಂಪೂರ್ಣವಾಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಪಕ್ಷಾತೀತವಾಗಿ ನಡೆದ ಹೋರಾಟದಲ್ಲಿ ಮಹಾಲಿಂಗಪುರವನ್ನು ತಾಲೂಕು ಕೇಂದ್ರವಾಗಿ ಘೋಷಿಸಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ಮಹಾಲಿಂಗಪುರ ತಾಲೂಕು ರಚನೆಗೆ ಆಗ್ರಹಿಸಿ ಪಟ್ಟಣದ ಪುರಸಭೆಯ ಕಾಂಗ್ರೆಸ್‌ನ ಒಂಬತ್ತು ಮತ್ತು ಬಿಜೆಪಿಯ ಮೂರು ಬಂಡಾಯ ಸದಸ್ಯರು ಸೇರಿ 12 ಜನ ರಾಜೀನಾಮೆ ಘೋಷಿಸಿ ತಾಲೂಕು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್