ಬೆಂಗಳೂರು | ಕೇಂದ್ರ-ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ಬೆಳೆ ಹಾನಿ ಪರಿಹಾರ: ಸಿಎಂ ಬೊಮ್ಮಾಯಿ

  • ಬೆಳೆ ಹಾನಿ ಪರಿಹಾರ ಶೀಘ್ರ: ಮುಖ್ಯಮಂತ್ರಿ ಬೊಮ್ಮಾಯಿ
  • ಕೇಂದ್ರ-ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ಪರಿಹಾರ

ಅಕಾಲಿಕ ಮಳೆಯಿಂದ ರಾಜ್ಯದಲ್ಲಾದ ಬೆಳೆ ಹಾನಿಗೆ ಸಂಬಂಧಿಸಿದಂತೆ ಶೀಘ್ರವಾಗಿ ಪರಿಹಾರ ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಸೆ.12ರಂದು ಮಾತನಾಡಿರುವ ಅವರು, "ಜುಲೈ ಮತ್ತು ಅಗಸ್ಟ್ ಮೊದಲನೇ ವಾರದಲ್ಲಿ ಆದ ಬೆಳೆ ನಾಶಕ್ಕೆ ಪರಿಹಾರ ಪಾವತಿಸಲು ಕಂದಾಯ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಪರಿಹಾರ ಹಣ ಕೆಲವೇ ದಿನಗಳಲ್ಲಿ ರೈತರ ಖಾತೆಗಳಿಗೆ ಜಮೆಯಾಗಲಿದೆ" ಎಂದು ತಿಳಿಸಿದರು. 

Eedina App

"ರೈತರ ಖಾತೆಗೆ ಸೆ.12 ಕ್ಕೆ ಪರಿಹಾರ ಹಣ ಬಿಡುಗಡೆಯಾಗಲಿದೆ" ಎಂದು ಕೃಷಿ ಸಚಿವ ಬಿ ಸಿ ಪಾಟೀಲ್‌ ಹೇಳಿದ್ದರು. "ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಅಪೂರ್ಣವಾಗಿರುವುದರಿಂದ ಬೆಳೆ ಹಾನಿ ಸಮೀಕ್ಷೆ ಹಾಗೂ ಪೋರ್ಟಲ್‌ಗೆ ಎಂಟ್ರಿ ಮಾಡಲು ಇನ್ನೂ ಸ್ವಲ್ಪ ಸಮಯ ಹಿಡಿಯಲಿದೆ. ಜಂಟಿ ಸರ್ವೆ ಆಗಿದ್ದು ಈಗಾಗಲೇ 50% ಎಂಟ್ರಿ ಆಗಿದೆ. ಸರಿಯಾಗಿ ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದು ಸಚಿವರು ತಿಳಿಸಿದರು. 

"ಕಳೆದ ಬಾರಿ ಅತಿವೃಷ್ಟಿ ಪರಿಹಾರ ಕೊಟ್ಟಿದ್ದೇವೆ. ಅದೇ ರೀತಿ ಈ ಬಾರಿಯೂ ರೈತರಿಗೆ ಬೆಳೆ ಹಾನಿ ಪರಿಹಾರ ನೀಡುತ್ತಿದ್ದು, ಒಂದು ತಿಂಗಳೊಳಗೆ 2,000 ಕೋಟಿ ರೂಗಳಿಗಿಂತ ಹೆಚ್ಚಿನ ಹಣವನ್ನು ರಾಜ್ಯದ ರೈತರ ಖಾತೆಗೆ ಹಾಕುವ ಪ್ರಕ್ರಿಯೆ ನಡೆದಿದೆ. ಅಲ್ಲದೆ, ಮನೆ ಹಾನಿ ಪರಿಹಾರವಾಗಿ ₹ 10,000 ಪರಿಹಾರ ಹಾಗೂ ಹದಿನೈದು ದಿನಗಳಿಗೆ ಫುಡ್ ಕಿಟ್ ಕೊಡಲು ಸೂಚಿಸಲಾಗಿದೆ.

AV Eye Hospital ad

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿದ್ಯುತ್‌ ಖಾಸಗೀಕರಣ ವಿರೋಧಿಸಿ ರೈತರಿಂದ ಪ್ರತಿಭಟನೆ

ಯಾವ ಬೆಳೆಗೆ ಎಷ್ಟು ಪರಿಹಾರ
 13,600 ಮಳೆ ಹಾನಿಗೆ ಒಳಗಾದ ಒಣ ಬೇಸಾಯ ಬೆಳೆಗಳಿಗೆ, ₹25,000 ನೀರಾವರಿ ಬೆಳೆಗಳಿಗೆ, ತೋಟಗಾರಿಕಾ ಬೆಳೆಗಳಿಗೆ ₹ 28,000 ಪರಿಹಾರವನ್ನು ಕೇಂದ್ರ-ರಾಜ್ಯ ಸರ್ಕಾರಗಳಿಂದ ಘೋಷಿಸಲಾಗಿದೆ. ಇದನ್ನು ಕಂದಾಯ ಇಲಾಖೆ ಮೂಲಕ ಸರ್ವೇ ಮಾಡಿದ ನಂತರ ಹಾನಿಗೊಳಗಾದ ಪ್ರತಿಶತದ ಮೇಲೆ ನೇರವಾಗಿ ರೈತರ ಖಾತೆಗೆ ವಿತರಣೆ ಮಾಡಲಾಗುತ್ತದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app