ಬೆಂಗಳೂರು | ಕುಶಲಕರ್ಮಿಗಳಿಗೆ ಸರ್ಕಾರದ ನೆರವು; ₹50 ಸಾವಿರ ಸಹಾಯಧನ

ಕುಶಲಕರ್ಮಿಗಳಿಗೆ ಸಹಾಯಧನ
  • ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
  • ವಾಣಿಜ್ಯ, ಸಹಕಾರ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ

ರಾಜ್ಯದ ಕಮ್ಮಾರ, ಕುಂಬಾರ, ಚಮ್ಮಾರ, ಬಡಗಿ-ಶಿಲ್ಪಿ ಸೇರಿದಂತೆ ಹಲವು ಬಗೆಯ ಕುಶಲಕರ್ಮಿಗಳಿಗೆ ₹50,000 ಸಹಾಯಧನ ಕೊಡುವ ಹೊಸ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಸರ್ಕಾರ ಪರಿಚಯಿಸಿರುವ ಹೊಸ ಯೋಜನೆಯಲ್ಲಿ ₹35 ಸಾವಿರ ಮೊತ್ತವನ್ನು ಸಾಲ ರೂಪದಲ್ಲಿ ₹ 15 ಸಾವಿರ ಮೊತ್ತವನ್ನು ಸಹಾಯಧನದ ರೂಪದಲ್ಲಿ ನೀಡಲಾಗುತ್ತದೆ. ಕ್ಷೌರಿಕರು, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು ಮುಂತಾದ ಅತಿ ಸಣ್ಣ ಕುಶಲಕರ್ಮಿಗಳಿಗೆ ಬ್ಯಾಂಕ್‌ಗಳ ಮೂಲಕ ಈ ಸಾಲ ಸೌಲಭ್ಯವನ್ನು ಒದಗಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

Eedina App

ಕೇಂದ್ರ ಸರ್ಕಾರದ ಅಭಿವೃದ್ಧಿ ಆಯುಕ್ತರ ಮಾಹಿತಿಯಂತೆ ರಾಜ್ಯದ ಸುಮಾರು 35,000ಕ್ಕೂ ಹೆಚ್ಚಿನ ಹಾಗೂ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಲ್ಲಿ ಸುಮಾರು 2,500 ಕುಶಲಕರ್ಮಿಗಳು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ, ಇದುವರೆಗೂ ನೋಂದಣಿಯಾಗದಿರುವ ಕುಶಲಕರ್ಮಿಗಳಿಗೂ ಈ ಯೋಜನೆ ಸೌಲಭ್ಯ ದೊರೆಯಲಿದೆ. ನೋಂದಣಿಯಾಗದವರು ಹೊಸದಾಗಿ ನೋಂದಣಿ ಮಾಡಿಸಲು ಅವಕಾಶವಿದೆ. ₹50,000 ಸಹಾಯಧನ ಕೊಡುವ ಯೋಜನೆ 2022-23ನೇ ಸಾಲಿನಿಂದ ಚಾಲ್ತಿಗೆ ಬರಲಿದೆ. ಅದಕ್ಕಾಗಿ ಪ್ರತಿ ವರ್ಷ ₹15 ಕೋಟಿ ಹಣ ಖರ್ಚಾಗಲಿದೆ.

ಬಹುತೇಕ ಬಡ ಕುಶಲಕರ್ಮಿಗಳು ಸಾಲ ಸೌಲಭ್ಯ ಸಿಗದಿರುವುದು, ಬಂಡವಾಳ ಕೊರತೆ, ಸಮಾಜದ ಬೆಳವಣಿಗೆಗೆ ತಕ್ಕಂತೆ ಹೊಸ ವಿನ್ಯಾಸಗಳ ಅಳವಡಿಕೆ, ಕಡಿಮೆ ಆದಾಯ, ಮಾರುಕಟ್ಟೆ ಕೊರತೆಯಂತಹ ಸಮಸ್ಯೆಗಳಿಂದ ಬೇಸತ್ತಿದ್ದಾರೆ. ಅವರುಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಮೇಲೆತ್ತುವ ದೃಷ್ಟಿಯಿಂದ ಪತ್ತಿಗೆ ಸಹಕಾರ ಸಂಘಗಳನ್ನು ಹೊರತುಪಡಿಸಿ ವಾಣಿಜ್ಯ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಂದ ಕುಶಲಕರ್ಮಿಗಳ ₹50,000 ಮೊತ್ತದ ಸಹಾಯಧನ, ಸಾಲಸೌಲಭ್ಯ ಯೋಜನೆಯನ್ನು ಪಡೆದುಕೊಳ್ಳಬಹುದು.

AV Eye Hospital ad

ಯಾರಿಗೆಲ್ಲ ಸಿಗಲಿದೆ ಸೌಲಭ್ಯ?

ಬೆತ್ತ, ಬಿದಿರು, ಶ್ರೀಗಂಧದ ಉತ್ಪನ್ನಗಳ ತಯಾರಕರು, ಬುಟ್ಟಿ ಹೆಣೆಯುವವರು, ರಾಮನಗರ ಜಿಲ್ಲೆ ಚನ್ನಪಟ್ಟಣ ಹಾಗೂ ಕಿನ್ಹಾಳ್‌ ಆಟಿಕೆ ವಸ್ತುಗಳ ತಯಾರಕರು, ಕಲ್ಲಿನ ಮತ್ತು ಮರದ ಕೆತ್ತನೆ ಮಾಡುವವರು, ಸಾಂಪ್ರದಾಯಿಕ ಚಿತ್ರಕಲೆ, ಕಸೂತಿ, ಸಂಡೂರು ಲಂಬಾಣಿ ಕಸೂತಿ, ಕಂಬಳಿ-ಚಾಪೆ ಹೆಣೆಯುವವರು, ಲೋಹದ ಕರಕುಶಲ ಸೇರಿದಂತೆ ಹಲವರು ಈ ಯೋಜನೆಗೆ ಒಳಪಡುತ್ತಾರೆ.

ಕುಂಬಾರ-ಸರ್ಕಾರದ ಸಹಾಯಧನ ಯೋಜನೆ

ಯೋಜನೆಗೆ ಬೇಕಾದ ಅರ್ಹತೆಗಳು?

  1. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಥವಾ ಅಭಿವೃದ್ಧಿ ಆಯುಕ್ತರ (ಕರಕುಶಲ) ಕಚೇರಿಯಲ್ಲಿ ನೋಂದಣಿ ಆಗಿರಬೇಕು.
  2. ಅರ್ಜಿ ಸಲ್ಲಿಸುವ ಕುಶಲಕರ್ಮಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಒಬ್ಬ ಕುಶಲಕರ್ಮಿಗೆ ಒಮ್ಮೆ ಮಾತ್ರ ಈ ಯೋಜನೆ ಸೌಲಭ್ಯ ಸಿಗಲಿದೆ.
  3. ಕರಕುಶಲ ವೃತ್ತಿಗಾಗಿ ಬ್ಯಾಂಕಿನಿಂದ ಪಡೆದ ಸಾಲ ಸೌಲಭ್ಯಕ್ಕೆ ಮಾತ್ರ ಸರ್ಕಾರದಿಂದ ₹15,000 ಸಹಾಯಧನ ದೊರೆಯುವುದು.
  4. ಗ್ರಾಮೀಣ ಕೈಗಾರಿಕೆ ವಿಭಾಗದ ಉಪ ನಿರ್ದೇಶಕರು ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಯಿಂದ ದೃಢೀಕರಣ ಪತ್ರ ಪಡೆದುಕೊಂಡಿರಬೇಕು.

ಈ ಸುದ್ದಿ ಓದಿದ್ದೀರಾ? ಕೃಷ್ಣಾ ಮೇಲ್ದಂಡೆ ಯೋಜನೆ | ಹಿಂಗಾರು ಹಂಗಾಮು ಬೆಳೆಗೆ ನೀರು ಪೂರೈಕೆ: ಸಚಿವ ಸಿ ಸಿ ಪಾಟೀಲ್

ಸೌಲಭ್ಯ ಪಡೆಯುವ ವಿಧಾನ?

ಈ ಯೋಜನೆಯ ಸಂಪೂರ್ಣ ಉಸ್ತುವಾರಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ನಿರ್ದೇಶಕರದ್ದಾಗಿದೆ. ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.‌ ನಂತರ ಈ ಅರ್ಜಿಗಳನ್ನು ಕೇಂದ್ರದ ಜಂಟಿ ನಿರ್ದೇಶಕರ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅನುಮೋದಿಸಿ ಸಂಬಂಧಿಸಿದ ಬ್ಯಾಂಕುಗಳಿಗೆ ಶಿಫಾರಸು ಮಾಡುತ್ತದೆ.

ಕುಶಲಕರ್ಮಿಗಳಿಗೆ ಸಾಲ ಮಂಜೂರಾದ ಬಳಿಕ ಸಹಾಯಧನದ ಕ್ಲೈಮ್‌ ಸ್ವೀಕರಿಸಿ ಬ್ಯಾಂಕುಗಳಿಗೆ ಸಾಲದ ಮೇಲೆ ಶೇ.30ರಷ್ಟು ಅಂದರೆ ₹15,000 ಸಹಾಯಧನ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡುತ್ತದೆ. ಅರ್ಹ ಕುಶಲಕರ್ಮಿಗಳಿಗೆ ಸಾಲ ಸೌಲಭ್ಯ ಪ್ರಕ್ರಿಯಾ ಶುಲ್ಕ, ದಾಖಲಾತಿ ಹಾಗೂ ಮುಂಗಡ ಶುಲ್ಕಗಳಿಗೆ ವಿನಾಯಿತಿ ದೊರೆಯಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app