ಹಾಲಿ ಪ್ರಧಾನಿ ಮೋದಿಯನ್ನು 'ಮಾಜಿ' ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ!

Modi
  • ಪಠ್ಯ ಪರಿಷ್ಕರಣೆ ವಿಚಾರ ಕುರಿತು ಮಾತನಾಡುವಾಗ ಬಾಯಿ ತಪ್ಪಿ ನುಡಿದ ಬೊಮ್ಮಾಯಿ 
  • 'ಮಾಜಿ ಪ್ರಧಾನಿ ನರೇಂದ್ರ..' ಎಂದು ಹೇಳಿ, ತಕ್ಷಣ ಎಚ್ಚೆತ್ತುಕೊಂಡು, 'ದೇವೇಗೌಡರು' ಎಂದರು

"ಮಾಜಿ ಪ್ರಧಾನಿಗಳಾದಂತಹ ನರೇಂದ್ರ... ಸಾರಿ... ಸಾರಿ..."
ಹೀಗೆ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಮಾಜಿ' ಎಂದು ಹೇಳಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು! 

ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿ ನಿವಾಸದೆದುರು ಮಾಧ್ಯಮವನ್ನುದ್ದೇಶಿಸಿ ಮಾತನಾಡುವ ವೇಳೆ ವರದಿಗಾರರು ಪಠ್ಯ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಶನಿವಾರ ನಡೆದ ಪ್ರತಿಭಟನೆಯನ್ನು ಕುರಿತು ಪ್ರಶ್ನಿಸಿದರು. 

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬೊಮ್ಮಾಯಿ, "ಹಲವಾರು ಸಾಹಿತಿಗಳು" ಎಂದ ಬಳಿಕ 'ಮಾಜಿ ಪ್ರಧಾನಿ ನರೇಂದ್ರ...' ಎಂದವರೆ ತಕ್ಷಣ ಎಚ್ಚೆತ್ತುಕೊಂಡು, 'ದೇವೇಗೌಡರು' ಎಂದು ಹೆಸರನ್ನು ಪೂರ್ಣಗೊಳಿಸಿದರು.  

ತಪ್ಪಾಗಿ ಹೇಳಿದ ಮಾತನ್ನು ಸರಿಪಡಿಸಿಕೊಂಡು ಮುಂದುವರಿದ ಮುಖ್ಯಮಂತ್ರಿಗಳು, "ಇತರ ಹಿರಿಯರಿಂದ, ಸ್ವಾಮೀಜಿಗಳಿಂದ ಮನವಿ ತರಿಸಿಕೊಂಡು, ಏನೆಲ್ಲಾ ಬದಲಾವಣೆಯನ್ನು ಮಾಡಬೇಕು, ಅವೆಲ್ಲಕ್ಕೂ ಸರ್ಕಾರ ಮುಕ್ತ ಮನಸ್ಸಿನಿಂದ ಸ್ಪಂದಿಸುತ್ತಿದೆ. ಯಾವುದನ್ನು ಪ್ರತಿಷ್ಠೆ ಎಂದು ಭಾವಿಸಿಲ್ಲ. ಈಗಾಗಲೇ ಪಠ್ಯವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ. ತಕರಾರು ಇದ್ದಲ್ಲಿ ಅದನ್ನು ನಿವಾರಣೆ ಮಾಡಲು ಸಿದ್ಧರಿದ್ದೇವೆ" ಎಂದು ಹೇಳಿದರು. 

ಈ ಸುದ್ದಿ ಓದಿದ್ದೀರಾ? ಪ್ರಧಾನಿ ನರೇಂದ್ರ ಮೋದಿ ಮುತ್ತಿಗೆಗೆ ಕರ್ನಾಟಕ ಕಿಸಾನ್‌ ಕಾಂಗ್ರೆಸ್‌ ನಿರ್ಧಾರ

ಪ್ರಧಾನಿ ನರೇಂದ್ರ ಮೋದಿಯವರು ಭೇಟಿಯ ಮುನ್ನಾ ದಿನ ಅವರನ್ನು 'ಮಾಜಿ' ಎಂದು ಸಂಬೋಧಿಸಿದ ವಿಡಿಯೋ ಈಗ ವೈರಲ್‌ ಆಗಿದೆ. 

ಇದಕ್ಕೂ ಮುನ್ನ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ್ದ ಬೊಮ್ಮಾಯಿ ಅವರು, 'ಅಗ್ನಿಪಥ್‌' ಯೋಜನೆಯ ಬಗ್ಗೆ ಸ್ಪಷ್ಟನೆ ನೀಡುವ ಜೊತೆಗೆ, ಬೆಳಗಾವಿ, ಧಾರವಾಡದಲ್ಲಿ ನಡೆದ ಹಿಂಸಾಚಾರ ಕುರಿತು ಬೇಸರ ವ್ಯಕ್ತಪಡಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್