ಬೆಳಗಾವಿ | ಬಿಜೆಪಿ ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ: ಮಾಜಿ ಶಾಸಕ ರಮೇಶ ಕುಡಚಿ

  • ‘ಸಂವಿಧಾನ ಹಾಗೂ ಪ್ರಜಾ ಪ್ರಭುತ್ವ ಅಪಾಯದಲ್ಲಿದೆ’ ವಿಚಾರ ಸಂಕಿರಣ
  • ಸಂವಿಧಾನವನ್ನು ಓದಿ, ಅದರ ಒಳಗಿರುವ ಅಂಶವನ್ನು ದಲಿತರು ತಿಳಿದುಕೊಳ್ಳಬೇಕು 

“ಬಿಜೆಪಿ ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸಮಾನ ನಾಗರಿಕ ಸಂಹಿತೆಯ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಇದರ ಮೂಲಕ ದಲಿತ ಸಮಾಜದ ಎಲ್ಲ ಮಿಸಲಾತಿಗಳನ್ನು ತೆಗೆದು ಹಾಕಲು ಪ್ರಯತ್ನಿಸುತ್ತಿದೆ” ಎಂದು ಬೆಳಗಾವಿ ಮಾಜಿ ಶಾಸಕ ರಮೇಶ ಕುಡಚಿ ಹೇಳಿದರು.

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ‘ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂಬ ವಿಚಾರ ಸಂಕಿರಣವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

Eedina App

“ಕೇಂದ್ರ ಮತ್ತು ರಾಜ್ಯ ಸರ್ಕಾರವು ತಮ್ಮ ಸರ್ಕಾರದ ವಿರುದ್ಧ ಮಾತನಾಡುವ ವ್ಯಕ್ತಿಗಳನ್ನು ಜೈಲಿಗೆ ಕಳುಹಿಸುತ್ತಿದ್ದು, ಇವರ ಆಡಳಿತ ಅವಧಿಯಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ” ಎಂದು ಕಿಡಿಕಾರಿದರು.

ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ ಚಂದ್ರಶೇಖರ ವಾಘಮಾರೆ ಮಾತನಾಡಿ, “ದೇಶದಲ್ಲಿ ದಲಿತರೆಂದು ಕರೆಸಿಕೊಳ್ಳುತ್ತಿರುವ ನಾವುಗಳು ಸಂವಿಧಾನವನ್ನು ಓದಿ, ಅದರ ಒಳಗಿರುವ ಅಂಶವನ್ನು ತಿಳಿದುಕೊಳ್ಳದೇ ಹೋದರೆ, ಈ ಹಿಂದೆ ದಲಿತರು ಕೊರಳಿಗೆ ಗಡಿಗೆ ಕಟ್ಟಿಕೊಂಡು ಓಡಾಡುವ ಪರಿಸ್ಥಿತಿ ಮತ್ತೆ ಬರಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.

AV Eye Hospital ad

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡರಾದ ಕಲ್ಲಪ್ಪ ಕಾಂಬ್ಲೆ ಮಾತನಾಡಿ, “ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನವಾದ ಸಂವಿಧಾನವನ್ನು ಜಾರಿಗೆ ತಂದಿದ್ದು, ಬಿಜೆಪಿಯೇತರ ಪಕ್ಷಗಳಿಗೆ ಮತ ನೀಡಿ ಸಂವಿಧಾನ ಉಳಿಸಬೇಕೆಂದು” ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? : ಉತ್ತರ ಪ್ರದೇಶ | ದಲಿತ ಅಪ್ರಾಪ್ತೆ ಮೇಲೆ ಅತ್ಯಾಚಾರ ಸಜೀವ ದಹನಕ್ಕೆ ಯತ್ನ ಪ್ರಕರಣ; ಸಂತ್ರಸ್ತೆ ಸಾವು

ಮುಖಂಡರಾದ ಶ್ರೀಕಾಂತ ತಳವಾರ ಮಾತನಾಡಿ, “ಪ್ರಧಾನಿ ಮೋದಿಯವರ ಬಹು ನೀರಿಕ್ಷಿತ ಉಜ್ವಲ ಗ್ಯಾಸ್ ಯೋಜನೆಯು ಸಂಪೂರ್ಣ ವಿಫಲವಾಗಿದ್ದು, ಇದನ್ನು ಪಡೆದ ಮಹಿಳೆಯರು ಪ್ರತಿ ತಿಂಗಳು ಸಿಲಿಂಡರ್ ಕೊಂಡುಕೊಳ್ಳಲು ಕಷ್ಟಪಡುತ್ತಿದ್ದಾರೆಂದು” ಹೇಳಿದರು.

ಕಾರ್ಯಕ್ರಮದಲ್ಲಿ ಬಸವರಾಜ ತಳವಾರ, ದುರಗಪ್ಪ ಮೇಲಿನಮನಿ, ಎಚ್ ಎನ್ ನೀಲ ನಾಯಕ್, ಶಿವಾಜಿ ಬನವಾಸಿ, ಮಲ್ಲಿಕಾರ್ಜುನ ಮಲ್ಲಾಪೂರಿ, ಬಸವರಾಜ ಮುದೋಳ, ರವೀಂದ್ರ ಸಣ್ಣಕ್ಕಿ, ಬಾಬು ಕಾಂಬಲೆ, ಮಲ್ಲೆಶ ಕಾಂಬ್ಲೆ, ರಮೇಶ ಮುಶನ್ನವರ, ಶಿವರಾಮ ತಳವಾರ ರುದ್ರಪ್ಪ ನಿಂಗಣ್ಣವರ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app