ಬಳ್ಳಾರಿ | ರೈತರನ್ನು ಆರ್ಥಿಕವಾಗಿ ಸಬಲಗೊಳಿಸಲು, ಕೃಷಿ ಕೆಲಸ ಸುಲಭ ಮಾಡಲು ಡ್ರೋಣ್ ಪರಿಚಯ: ಶೋಭಾ ಕರಂದ್ಲಾಜೆ

Shobha Karandlaje
  • ಭಾರತದ ಕೃಷಿಯಲ್ಲಿ ಸುಧಾರಿತ ಕೃಷಿ ಮಾದರಿಯನ್ನು ಅನುಸರಿಸಿ
  • ಕೃಷಿ ಸಮಾವೇಶದಲ್ಲಿ ಡ್ರೋಣ್‌ ಹಾರಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆಯಿಂದ ರೈತರು ಲಾಭ ಪಡೆದುಕೊಳ್ಳಬಹುದು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. 

ಬಳ್ಳಾರಿಯಲ್ಲಿ ಸೋಮವಾರ ನೂತನವಾಗಿ ನಿರ್ಮಾಣಗೊಳ್ಳಲಿರುವ 'ರೈತ ವಸತಿ ನಿಲಯ'ದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಶೋಭಾ ಕರಂದ್ಲಾಜೆ ಭಾಗವಹಿಸಿದ್ದರು. ಬಳಿಕ ಮಾತನಾಡಿದ ಅವರು, "ಕೃಷಿ ವಿಜ್ಞಾನ ಕೇಂದ್ರವು ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕುರಿತು ಅಗತ್ಯ ತಾಂತ್ರಿಕ ಸಲಹೆಗಳನ್ನು ನೀಡುತ್ತಿದೆ. ನೂತನ ರೈತ ವಸತಿ ಕೇಂದ್ರವು ಈ ಪ್ರದೇಶದ ರೈತರಿಗೆ ಸಹಕಾರಿಯಾಗಲಿದೆ. ಅಲ್ಲದೆ, ರೈತರು ತಮ್ಮ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಬೇಕು. ಹಾಗಾಗಿ ವಿವಿಧ ಸಂಸ್ಥೆಗಳು ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುತ್ತಿವೆ" ಎಂದರು.

Eedina App

ಬಳಿಕ ಕೃಷಿ ಬೆಳೆಗೆ ಸಂಬಂಧಿಸಿದಂತೆ ಡ್ರೋಣ್‌ ಬಳಕೆ ಕುರಿತು ನಡೆದ ಪ್ರಾತ್ಯಕ್ಷಿಕೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವೀಕ್ಷಣೆ ಮಾಡಿ, ತಾವೂ ಡ್ರೋಣ್‌ ಹಾರಿಸಿ ಸಂಭ್ರಮಿಸಿದರು. ಬಳಿಕ ಈ ವಿಚಾರವನ್ನು ಟ್ವೀಟ್‌ ಮೂಲಕ ಅವರು ಹಂಚಿಕೊಂಡರು.

"ಬಳ್ಳಾರಿಯ ಹಗರಿಯಲ್ಲಿ ಕಿಸಾನ್‌ ಡ್ರೋಣ್ ಅನ್ನು ಪ್ರಾಯೋಗಿಕವಾಗಿ ಬಳಸಲಾಯಿತು. ಕೃಷಿ ಕೆಲಸಕ್ಕಾಗಿ ಪರಿಚಯಿಸಲಾದ ಹೊಸ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿದರು. ಭಾರತದ ಕೃಷಿಯಲ್ಲಿ ಸುಧಾರಿತ ಕೃಷಿ ಮಾದರಿಯನ್ನು ಅನುಸರಿಸಿ ಪುನಶ್ಚೇತನಗೊಳಿಸಲು, ರೈತರನ್ನು ಆರ್ಥಿಕವಾಗಿ ಸಬಲಗೊಳಿಸಲು ಹಾಗೂ ಕೃಷಿ ಕೆಲಸಗಳನ್ನು ಸುಲಭ ಮಾಡಲು ಈ ಡ್ರೋಣ್ ಪರಿಚಯಿಸಲಾಗಿದೆ" ಎಂದು ಶೋಭಾ ಕರಂದ್ಲಾಜೆ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. 

ಈ ಸುದ್ದಿ ಓದಿದ್ದೀರಾ? : ಬೆಂಗಳೂರು | ಕೃಷಿ ಭೂಮಿಯಲ್ಲಿ ಕುಕ್ಕುಟೋದ್ಯಮ; ಭೂ ಪರಿವರ್ತನೆಯಿಂದ ವಿನಾಯ್ತಿ ನೀಡಿದ ಸರ್ಕಾರ

ಶಂಕು‍ಸ್ಥಾಪನೆ ಬಳಿಕ ಸಚಿವೆ ಶೋಭಾ ಕರಂದ್ಲಾಜೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ಉತ್ಪನ್ನಗಳ ಪ್ರದರ್ಶನ ಮಳಿಗೆಗೆ ಭೇಟಿ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app