ಬೀದರ್ | ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಆಗಸ್ಟ್‌ 15ಕ್ಕೆ ‘ಬಸವ ಮ್ಯಾರಥಾನ್’

Bidar
  • ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಕಾರ್ಯಕ್ರಮ
  • ಬಸವ ಪರ ಸಂಘಟನೆಗಳಿಂದ ಕಾರ್ಯಕ್ರಮ ಆಯೋಜನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಬೀದರ್‍‌ ಜಿಲ್ಲೆಯ ಬಸವಕಲ್ಯಾಣದಲ್ಲಿ ಯುವ ಸಮೂಹ ಹಾಗೂ ವಿವಿಧ ಬಸವಪರ ಸಂಘಟನೆಗಳು ಸೇರಿ ಆಗಸ್ಟ್ 15 ರಂದು ಸಂಜೆ 5ಕ್ಕೆ ‘ಬಸವ ಮ್ಯಾರಥಾನ್’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಬೀದರ್‌ನಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ‘ಬಸವ ಮ್ಯಾರಥಾನ್’ ಭಿತ್ತಿ ಪತ್ರ ಹಾಗೂ ಪೋಸ್ಟರ್‍‌ನ್ನು ನಗರಸಭೆ ಅಧ್ಯಕ್ಷೆ ಶಹಜಹಾನ್ ಶೇಖ್ ತನ್ವೀರ್ ಹಾಗೂ ಬಿಡಿಪಿಸಿ ಕೋಶಾಧ್ಯಕ್ಷ  ಸುಭಾಷ್ ಹೋಳಕುಂದೆ ಬಿಡುಗಡೆ ಮಾಡಿದರು.

"ಬಸವೇಶ್ವರ ಚೌಕದಿಂದ ಪ್ರಾರಂಭವಾಗುವ ಮ್ಯಾರಥಾನ್ - ಹರಳಯ್ಯ ಚೌಕ್, ತ್ರಿಪುರಾಂತ, ಅನುಭವ ಮಂಟಪ ಕ್ರಾಸ್, ಬಂಗ್ಲಾ ಗೇಟ್ ಮಾರ್ಗದ ಮೂಲಕ ಸಾಗಿ ಬಸವೇಶ್ವರ ವೃತ್ತಕ್ಕೆ ಹಿಂದಿರುಗಲಿದೆ" ಎಂದು ಆಯೋಜಕರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ರಾಯಚೂರು | ರಾಷ್ಟ್ರಧ್ವಜಕ್ಕೆ ಅಪಮಾನ: ಕ್ಷಮೆ ಯಾಚಿಸಿದ ಬಿಜೆಪಿ ಶಾಸಕ

ಆಗಸ್ಟ್‌ 15ರಂದು ನಡೆಯುವ ‘ಬಸವ ಮ್ಯಾರಥಾನ್’ನಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲು ನಿರ್ಧರಿಸಲಾಗಿದೆ. ಬಹುಮಾನ ವಿತರಣೆಯ ಪ್ರಾಯೋಜಕತ್ವವನ್ನು ಬಿಡಿಪಿಪಿ, ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ, ಪಾಟೀಲ್ ಆಸ್ಪತ್ರೆ ಸೇರಿದಂತೆ ಒಟ್ಟು ಹತ್ತು ತಂಡಗಳು ವಹಿಸಿಕೊಂಡಿವೆ.

ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಕುರುಕೋಟೆ, ಮಲ್ಲಿಕಾರ್ಜುನ ಚಿರಡೆ, ಬಸವರಾಜ ತೊಂಡಾರೆ, ಜಗನ್ನಾಥ ಖುಬಾ, ಧನರಾಜ ತಾಳಂಪಳ್ಳಿ, ಆನಂದ ದೇವಪ್ಪ, ರವಿ ಕೋಳಕೂರ್, ನೀಲಕಂಠ ರಾಠೋಡ್, ಪ್ರದೀಪ ವಾತಾಡೆ, ಡಾ.ಸದಾನಂದ ಪಾಟೀಲ್ ಮತ್ತಿತ್ತರು ಉಪಸ್ಥಿತರಿದ್ದರು.

ಮಾಸ್‌ ಮೀಡಿಯಾ ಕಲ್ಬುರ್ಗಿ ವಲಯ ಸಂಯೋಜಕ ಬಾಲಾಜಿ ಕುಂಬಾರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್