ಬೀದರ್ | ಬಸವಕಲ್ಯಾಣದಲ್ಲಿ ಬಸವ ಮ್ಯಾರಾಥಾನ್‌: ವಿಜೇತರಿಗೆ ಬಹುಮಾನ ಪ್ರದಾನ

Bidar
  • ಬಸವಕಲ್ಯಾಣ ನಗರದಲ್ಲಿ ಆಯೋಜಿಸಿದ್ದ ಬಸವ ಮ್ಯಾರಾಥಾನ್ ಓಟ
  • ಮ್ಯಾರಾಥಾನ್ ಓಟ ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಬಸವ ಮ್ಯಾರಾಥಾನ್‌ ನಡೆದಿದ್ದು, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗಿದೆ. 

75ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯ ಭಾಗವಾಗಿ ಬಸವಪರ ಸಂಘಟನೆಗಳ ಮುಖಂಡರು ಬಸವ ಮ್ಯಾರಾಥಾನ್‌ ಆಯೋಜಿಸಿದ್ದರು. ಮ್ಯಾರಾಥಾನ್‌ನಲ್ಲಿ ಸಾವಿರಕ್ಕೂ ಹೆಚ್ಚು ಯುವಜನರು ಭಾಗಿಯಾಗಿ ಸುರಿಯುವ ಮಳೆಯಲ್ಲೇ ಉತ್ಸಾಹದಿಂದ ಓಡಿದ್ದಾರೆ.

ಬಸವ ಮ್ಯಾರಥಾನ್ ಓಟವು ಬಸವೇಶ್ವರ ವೃತ್ತದಿಂದ ಸಸ್ತಾಪುರ ಬಂಗ್ಲಾವರೆಗೆ ತರೆಳಿ ಪುನಃ ಬಸವೇಶ್ವರ ವೃತ್ತಕ್ಕೆ ಮರಳಿದೆ. ಒಟ್ಟು 12 ಕಿ.ಮೀ. ಓಟದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ಮಳೆಯ ಮಧ್ಯೆಯೂ ಯುವಜನರು ಓಡುವ ಮೂಲಕ ಮ್ಯಾರಥಾನ್‌ಗೆ ಉತ್ಸಾಹ ತೋರಿದರು. ಮ್ಯಾರಥಾನ್ ಓಟ ವೀಕ್ಷಿಸಲು ಸೇರಿದ ಜನರು ಸ್ಪರ್ಧಾಳುಗಳ ಮೇಲೆ ಹೂವುಗಳನ್ನು ಎಸೆಯುವ ಮೂಲಕ ಹಾರೈಸಿದರು.

ಈ ಸುದ್ದಿ ಓದಿದ್ದೀರಾ?; ಯಾದಗಿರಿ | ಶಿವಮೊಗ್ಗ ಗಲಭೆ; ಬಜರಂಗದಳದ ಮೇಲೆ ಕ್ರಮಕ್ಕೆ ಬಿಎಸ್‌ಪಿ ಆಗ್ರಹ

ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿ

ಬಸವ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ತಡೋಳ ರಾಜೇಶ್ವರ ಶಿವಾಚಾರ್ಯರು ವಿತರಿಸಿದರು.

ಪುರುಷರ ವಿಭಾಗದಲ್ಲಿ ನಿವೃತ್ತಿ ಲಾತೂರ (ಪ್ರಥಮ), ಗಣೇಶ ಸೂರ್ಯವಂಶಿ (ದ್ವಿತೀಯ), ನಿಲಂಗದ ಪ್ರಶಾಂತ ಪಾಟೀಲ್ (ತೃತೀಯ) ಸ್ಥಾನ ಗಳಿಸಿದರು. ಮಹಿಳಾ ವಿಭಾಗದಲ್ಲಿ ಗೀತಾ ಗಣಪತಿ (ಪ್ರಥಮ), ಭಾಗ್ಯಶ್ರೀ ಪ್ರಭಾಕರ್ (ದ್ವಿತೀಯ), ಪುಷ್ಪಾ ನೆಹರು (ತೃತೀಯ ಸ್ಥಾನ) ಪಡೆದರು. ವಿಜೇತರಿಗೆ ಕ್ರಮವಾಗಿ 11000, 5000, 3000 ನಗದು ಬಹುಮಾನ ವಿತರಿಸಿದರು.

ಮಾಸ್ ಮೀಡಿಯಾ ಕಲಬುರಗಿ ವಲಯ ಸಂಯೋಜಕ ಬಾಲಾಜಿ ಕುಂಬಾರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್