ಬೀದರ್| ದೇಶಕ್ಕೆ ಸ್ವಾತಂತ್ರ್ಯ ಪುಕ್ಕಟೆಯಾಗಿ ಸಿಗಲಿಲ್ಲ, ಅಸಂಖ್ಯರ ಬಲಿದಾನಗಳ ಫಲ; ಈಶ್ವರ್‍‌ ಖಂಡ್ರೆ

indepedense day
  • ‘ಮಹಾನ್ ದೇಶಭಕ್ತರ ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ’
  • ‘ತಿರಂಗಾ ಯಾತ್ರೆ ನಡಿಗೆ’ಯಲ್ಲಿ ಸಾವಿರಾರು ಜನರು ಭಾಗಿ

“ಭಾರತ ದೇಶಕ್ಕೆ ಸ್ವಾತಂತ್ರ್ಯ ಪುಕ್ಕಟೆ ಸಿಗಲಿಲ್ಲ. ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನದಿಂದ ಲಭಿಸಿದೆ. ಅಂತಹ ಮಹಾನ್ ದೇಶಭಕ್ತರನ್ನು ಸ್ಮರಿಸಿಕೊಂಡು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹೇಳಿದ್ದಾರೆ.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಜರುಗಿದ ‘ತಿರಂಗಾ ಯಾತ್ರೆ ನಡಿಗೆ’ಯ ನೇತೃತ್ವ ವಹಿಸಿ ಮಾತನಾಡಿದ ಈಶ್ವರ್‍‌ ಖಂಡ್ರೆ, ”ಭಾರತ ದೇಶದ ಅಸಂಖ್ಯಾತ ಹೋರಾಟಗಾರರನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿ ರಕ್ತ ಹರಿಸಿ, ಜೈಲಿಗೆ ಹೋಗಿದ್ದಾರೆ. ಜೀವ ಪಣಕ್ಕಿಟ್ಟು ಹೋರಾಟ ನಡೆಸಿದ ವೀರರ ಬಲಿದಾನಗಳನ್ನು ಸ್ಮರಿಸಿ ಗೌರವಿಸಬೇಕು” ಎಂದರು.

ಈ ಸುದ್ದಿ ಓದಿದ್ದೀರಾ?: ಬಿಜೆಪಿ-ಆರ್‌ಎಸ್‌ಎಸ್ ಮುಖಂಡರು ದೇಶಕ್ಕಾಗಿ ಯಾವುದೇ ತ್ಯಾಗ ಮಾಡಿಲ್ಲ: ಮಾಜಿ ಸ್ಪೀಕರ್ ರಮೇಶ್ ಕುಮಾರ್

ಭಾಲ್ಕಿಯ ಬಿಕೆಐಟಿ ಕಾಲೇಜಿನಿಂದ ಪ್ರಾರಂಭವಾದ ತಿರಂಗಾ ನಡಿಗೆ ಯಾತ್ರೆಯು  ಭೋಮಗೊಂಡೇಶ್ವರ್ ವೃತ, ಅಗಸಿ, ಜ್ಯೋತಿಬಾ ಫುಲೆ ವೃತ್ತ, ಗಾಂಧಿ ಚೌಕ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಧಾವಿಸಿ ಗಾಂಧಿ ವೃತ್ತಕ್ಕೆ ತಲುಪಿದೆ.

Image
Bidar

"ಇಂದು ನಾವೇನು ಸ್ವಾತಂತ್ರ್ಯ ಹೋರಾಟ ಮಾಡಬೇಕಾಗಿಲ್ಲ, ಆದರೆ ಮಹಾತ್ಮರು ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಬಹುದೊಡ್ಡ ಜವಾಬ್ದಾರಿ" ಎಂದು ಖಂಡ್ರೆ ಹೇಳಿದರು.

ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ದುಡಿದು ಸತ್ಯ, ನ್ಯಾಯ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರೆ ಸಾಕು ಅದೇ ನಿಜವಾದ ದೇಶಪ್ರೇಮ, ಸ್ವಾತಂತ್ರ್ಯ ಹೋರಾಟಗಾರರಿಗೆ ಸಲ್ಲಿಸುವ ಗೌರವ ನಮನಗಳು ಎಂದು ಹೇಳಿದರು. 

ತಿರಂಗಾ ಯಾತ್ರೆ ನಡಿಗೆಯಲ್ಲಿ ನಾನಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು,  ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಮಾಸ್‌ ಮೀಡಿಯಾ ಕಲ್ಬುರ್ಗಿ ವಲಯ ಸಂಯೋಜಕ ಬಾಲಾಜಿ ಕುಂಬಾರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್