ಬೀದರ್| ಪರಿಶಿಷ್ಟ ಜಾತಿ-ಪಂಗಡಗಳಿಗೆ ಮೀಸಲಾತಿ ಹೆಚ್ಚಿಸಲು ಆಗ್ರಹ

Bidar
  • ವಿವಿಧ ಸಂಘಟನೆಯಿಂದ ಪ್ರತಿಭಟನಾ ಮೆರವಣಿಗೆ
  • ‘ವರದಿಯ ಅಂಶಗಳನ್ನು ಪರಿಗಣಿಸಿ ಮೀಸಲಾತಿ ಹೆಚ್ಚಿಸಿ’

ನ್ಯಾ ಎಚ್ ಎಸ್ ನಾಗಮೋಹನದಾಸ್ ಆಯೋಗದ ವರದಿಯ ಶಿಫಾರಸ್ಸಿನ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ಎಂದು ಒತ್ತಾಯಿಸಿ ಬೀದರ್‌ನಲ್ಲಿ ಸೋಮವಾರ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಮೂಲಕ  ಮುಖ್ಯಮಂತ್ರಿಗಳಿಗೆ  ಮನವಿ ಪತ್ರ ಸಲ್ಲಿಸಿದರು. 

ದೇಶದ ಮೂಲ ನಿವಾಸಿಗಳಿಗೆ ಸಂವಿಧಾನ ಬದ್ಧವಾಗಿಯೇ ಮೀಸಲಾತಿ ಒದಗಿಸಲಾಗಿದೆ. ಜಾತಿಗಳ ಸಂಖ್ಯಾಬಲ ಆಧರಿಸಿ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಸಮಾನತೆ ಕಲ್ಪಿಸಲು ಮೀಸಲಾತಿ ಒದಗಿಸಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಇವುಗಳನ್ನು ಪರಿಗಣಿಸಿ ಸರ್ಕಾರ ಮೀಸಲಾತಿ ಜಾರಿಗೊಳಿಸಬೇಕೆಂದು ಈ ವೇಳೆ ಪ್ರತಿಭಟನಕಾರರು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ?: ಬೀದರ್ | ವಂಚನೆ ಪ್ರಕರಣ; ಸಚಿವ ಪ್ರಭು ಚವ್ಹಾಣ್‌ರನ್ನು ಸಂಪುಟದಿಂದ ಕೈಬಿಡಲು ಆಗ್ರಹ

2011ರಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗವು ಅಧ್ಯಯನ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಕೊಟ್ಟಿದೆ. ಈ ವರದಿಯ ಎಲ್ಲ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು. 

ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಸತೀಷ ಶಿಂಧೆ, ಹಿರಿಯ ಮುಖಂಡ ರಾಜಕುಮಾರ ಮೂಲಭಾರತಿ, ಕದಸಂಸ ಜಿಲ್ಲಾ ಸಂಚಾಲಕ ಉಮೇಶಕುಮಾರ ಸ್ವಾರಳಿಕರ್, ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಸುಬ್ಬಣ್ಣ ಕರಕನಳ್ಳಿ, ಪ್ರಕಾಶ ಸಾಗರ, ಸಂಜು ಭೋಸ್ಲೆ, ದಶರಥ ರತ್ನಾಕರ, ನಾಗೇಂದ್ರ ಅಮಲಾಪೂರ, ಅಶೋಕ ಅಮಲಾಪೂರ, ಗೋವಿಂದ ಬಡಿಗೇರ್, ಬಾಬುರಾವ್ ಜ್ಯೋತಿ ಹಾಗೂ ತುಕರಾಮ ಸಿಂಧೆ ಪ್ರತಿಭಟನೆಯಲ್ಲಿದ್ದರು.

ಮಾಸ್‌ ಮೀಡಿಯಾ ಕಲ್ಬುರ್ಗಿ ವಲಯ ಸಂಯೋಜಕ ಬಾಲಾಜಿ ಕುಂಬಾರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180