ಬೀದರ್ | ಹುಮನಾಬಾದ್ ಮನೆ ಕುಸಿತ: ಸಂತ್ರಸ್ತರಿಗೆ ತಲುಪಿದ ಸರ್ಕಾರದ ಪರಿಹಾರ

humnabad
  • ಬೀದರ್ ಜಿಲ್ಲೆಯಲ್ಲಿ ಜುಲೈ 23ರಂದು ಸುರಿದಿದ್ದ ಧಾರಾಕಾರ ಮಳೆ
  • ಮನೆಗಳು ಬಿದ್ದಿದ್ದ ಬಗ್ಗೆ ವರದಿ ಮಾಡಿದ್ದ ಈ ದಿನ.ಕಾಮ್

ಬೀದರ್ ಜಿಲ್ಲೆಯಲ್ಲಿ ಕಳೆದ ಜುಲೈ 23ರಂದು ಸುರಿದ ಧಾರಾಕಾರ ಮಳೆಯಾಗಿ ಹುಮನಾಬಾದ್ ತಾಲೂಕು ಒಂದರಲ್ಲಿಯೇ 74.10 ಮಿಮೀ ಮಳೆಯಾಗಿ ನಾನಾ ಕಡೆ ಐದು ಮನೆಗಳು ಕುಸಿದಿದ್ದವು. ಆ ಎಲ್ಲ ಮನೆಗಳಿಗೆ ಸರ್ಕಾರದ ವತಿಯಿಂದ ಜಿಲ್ಲಾಡಳಿತ ಪರಿಹಾರ ನೀಡಿದೆ. 

ಹುಮನಾಬಾದ್ ತಾಲೂಕಿನ ಮದರಗಾವ್ ಗ್ರಾಮದ ಬಸಯ್ಯ ಸ್ವಾಮಿ ಎಂಬುವರ ಮನೆಯ ಮಹಾದ್ವಾರದ ಛಾವಣಿ ಕುಸಿದು ಬೈಕ್ ಜಖಂ ಗೊಂಡಿತ್ತು. ಈ ಸುದ್ದಿಯನ್ನು ಈ ದಿನ.ಕಾಮ್ ಜುಲೈ 24 ರಂದು "ಬೀದರ್ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ಕುಸಿದ ಮನೆಗಳು" ಎನ್ನುವ ಸುದ್ದಿಯ ವರದಿಯೊಂದನ್ನು ಕುಸಿದ ಮನೆಯ ಛಾವಣಿಯ ಫೋಟೋದೊಂದಿಗೆ ವರದಿ ಮಾಡಿತ್ತು.

ಈ ಸುದ್ದಿ ಓದಿದ್ದೀರಾ?; ಬೀದರ್ | ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ಕುಸಿದ ಮನೆಗಳು

"ನಾವು ಬಡ ಕೃಷಿಕರು, ಮಳೆಯಿಂದಾಗಿ ಮನೆಯ ಮೇಲ್ಚಾವಣಿ ಕುಸಿದು ಬೈಕ್ ಸಂಪೂರ್ಣ ಜಖಂಗೊಂಡಿದೆ. ಬೀದರ್ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಿ" ಎಂದು 'ಈ ದಿನ.ಕಾಮ್' ಜೊತೆಗೆ ಮಾತನಾಡಿ ಬಸಯ್ಯ ಸ್ವಾಮಿ ಮನವಿ ಮಾಡಿದ್ದರು.

ಮನೆ ಮಹಾದ್ವಾರದ ಛಾವಣಿ ಬಿದ್ದು ಬೈಕ್‌ ಜಖಂ ಆಗಿರುವ ಸುದ್ದಿ ತಿಳಿದು ಸ್ಥಳೀಯ ತಾಲೂಕಾಡಳಿತ ಪರಿಶೀಲನೆ ನಡೆಸಿ ಬಸಯ್ಯ ಸ್ವಾಮಿ ಅವರಿಗೆ ಸರ್ಕಾರದ ವತಿಯಿಂದ 50 ಸಾವಿರ ರೂಪಾಯಿ ಪರಿಹಾರವನ್ನು ವಿತರಿಸಿದೆ. 

ಈ ಕುರಿತು ಸುದ್ದಿ ಮಾಡಿದ ಈ ದಿನ.ಕಾಮ್‌ನ ಕಲಬುರಗಿ ವಲಯ ಸಂಯೋಜಕ ಬಾಲಾಜಿ ಕುಂಬಾರ ಅವರಿಗೆ ಬಸಯ್ಯ ಸ್ವಾಮಿ ದೂರವಾಣಿ ಕರೆ ಮಾಡಿ ಧನ್ಯವಾದ ತಿಳಿಸಿ, ಪರಿಹಾರ ಸಿಕ್ಕ ಸಂತಸವನ್ನು ಹಂಚಿಕೊಂಡಿದ್ದಾರೆ.

ಮಾಸ್ ಮೀಡಿಯಾ ಕಲಬುರಗಿ ವಲಯ ಸಂಯೋಜಕ ಬಾಲಾಜಿ ಕುಂಬಾರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180