ಬೀದರ್ | ಮೊದಲು ರಾಷ್ಟ್ರ ಪ್ರೇಮ, ನಂತರ ಧರ್ಮ:  ಬಸವಲಿಂಗ ಪಟ್ಟದೇವರು

Bidar
  • ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ‘ಭಾವೈಕ್ಯತೆ ನಡಿಗೆ’
  • ‘ಜಾತಿ ಧರ್ಮ ಮತ ಬೇಧವಿಲ್ಲದೆ ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಬೇಕು’

ನಾವೆಲ್ಲರೂ ಒಂದಾಗಿದ್ದೇವೆ. ಮುಂದೆಯೂ ಒಂದಾಗಿ ಇರಬೇಕು. ಮೊದಲು ರಾಷ್ಟ್ರ, ನಂತರ ಧರ್ಮ. ರಾಷ್ಟ್ರ ಉಳಿದರೆ ಧರ್ಮ ಉಳಿಯಲು ಸಾಧ್ಯ ಎಂದು ಭಾಲ್ಕಿಯ ಡಾ. ಬಸವಲಿಂಗ ಪಟ್ಟದೇವರು ಹೇಳಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಬೀದರ್ ನಗರದಲ್ಲಿ ಆಯೋಜಿಸಿದ ರಾಷ್ಟ್ರೀಯ ‘ಭಾವೈಕ್ಯತೆ ನಡಿಗೆ’ಗೆ ಚಾಲನೆ ನೀಡಿ ಮಾತನಾಡಿದ ಬಸವಲಿಂಗ ಪಟ್ಟದೇವರು “ಇವನಾರವ ಎನ್ನದೆ ಇವನಮ್ಮವ ಎನ್ನುವಂತೆ ನಾವೆಲ್ಲರೂ ಜಾತಿ ಧರ್ಮ ಮತ ಬೇಧವಿಲ್ಲದೆ ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಬೇಕು” ಎಂದರು.

‘ಭಾವೈಕ್ಯತೆ ನಡಿಗೆ’ಯು ಬೀದರ್ ನಗರದ ಜಾಮಿಯಾ ಮಸೀದಿಯಿಂದ ಪ್ರಾರಂಭವಾಗಿ - ಗವಾನ್ ಚೌಕ್, ಡಾ. ಬಿ.ಆರ್ ಅಂಬೇಡ್ಕರ್ ವೃತ್ತ, ಭಗತ್ ಸಿಂಗ್ ವೃತ್ತ ಮಾರ್ಗವಾಗಿ ವಿಶ್ವಗುರು ಬಸವಣ್ಣನವರ ವೃತ್ತದಲ್ಲಿ ಮುಕ್ತಾಯಗೊಂಡಿದೆ.

ಈ ಸುದ್ದಿ ಓದಿದ್ದೀರಾ?: ಕನ್ನಡದ ಖ್ಯಾತ ವಿಮರ್ಶಕ, ಪ್ರೊ. ಎಂ ಎಚ್ ಕೃಷ್ಣಯ್ಯ ನಿಧನ

“ರಾಷ್ಟ್ರಧ್ವಜ - ಜಾತಿ, ಮತ, ಪಂಥ ಧರ್ಮಕಿಂತ ಶ್ರೇಷ್ಠವಾಗಿದೆ. ಎಲ್ಲರೂ ರಾಷ್ಟ್ರಧ್ವಜವನ್ನು ಅಭಿಮಾನ ಹಾಗೂ ಶ್ರದ್ಧೆಯಿಂದ ಗೌರವಿಸಬೇಕು” ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.

“ಆಗಸ್ಟ್ 13ರಿಂದ 15ರವರೆಗೆ ಎಲ್ಲರೂ ಮನೆಯಲ್ಲಿ ರಾಷ್ಟ್ರಧ್ವಜವನ್ನು ಕಡ್ಡಾಯವಾಗಿ ಹಾರಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಬೌದ್ಧ ವಿಹಾರದ ಭಂತೆ ಜ್ಞಾನಸಾಗರ,  ಡಾ. ಸಿದ್ದರಾಮ ಶರಣರು ಬೆಲ್ದಾಳ, ಹುಲಸೂರು ಶಿವಾನಂದ ಮಹಾಸ್ವಾಮಿ, ಅಕ್ಕ ಅನ್ನಪೂರ್ಣ, ರೆವರೆಂಡ್ ದೇವದಾನಂ, ಮೌಲನಾ ಅಬ್ದುಲ್ ಗಫಾರ್  ಮುಫ್ತಿ ನಡಿಗೆಯಲ್ಲಿ ಭಾಗವಹಿಸಿದ್ದರು.

ಮಾಸ್‌ ಮೀಡಿಯಾ ಕಲ್ಬುರ್ಗಿ ವಲಯ ಸಂಯೋಜಕ ಬಾಲಾಜಿ ಕುಂಬಾರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್