ಬೀದರ್: ಒಂಟಿತನದಿಂದ ಬೇಸತ್ತ ಮಹಿಳೆ; ನದಿಗೆ ಹಾರಿ ಆತ್ಮಹತ್ಯೆ

  • ಕೌಠಾ(ಬಿ) ಗ್ರಾಮದ ಹತ್ತಿರವಿರುವ ಮಾಂಜ್ರಾ ನದಿಗೆ ಹಾರಿ ಅತ್ಮಹತ್ಯೆ
  • ಮದುವೆ ಹೊಂದಾಣಿಕೆ ಆಗದ ಹಿನ್ನಲೆ ಗಂಡನನ್ನು ಬಿಟ್ಟು ಒಂಟಿ ಜೀವನ 

ಬದುಕಿನಲ್ಲಿ ಎದುರಾದ ಒಂಟಿತನದ ಮಾನಸಿಕ ಒತ್ತಡದಿಂದ ಬೇಸತ್ತ ಮಹಿಳೆಯೊಬ್ಬರು ನದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. 

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಟ್ನಾಳ ಗ್ರಾಮದ ವಚಲಾಬಾಯಿ ರಾಮಣ್ಣ ಉಪ್ಪಾರ (65) ಎಂಬ ಮಹಿಳೆ ಕೌಠಾ(ಬಿ) ಗ್ರಾಮದ ಹತ್ತಿರ ಇರುವ ಮಾಂಜ್ರಾ ನದಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. 

ಮೃತ ವಚಲಾಬಾಯಿಗೆ ಪಕ್ಕದ ಮಸ್ಕಲ್ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಗಂಡನೊಂದಿಗೆ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಗಂಡನನ್ನು ಬಿಟ್ಟು 35-40 ವರ್ಷದಿಂದ ತವರೂರು ಚಟ್ನಾಳ ಗ್ರಾಮದಲ್ಲಿ ವಾಸವಾಗಿದ್ದರು.

ಈ ಸುದ್ದಿ ಓದಿದ್ದೀರಾ?; ವಿಜಯನಗರ | ನಿರ್ಲಕ್ಷ್ಯಕ್ಕೆ ಒಳಗಾದ ಭೀಮಸಮುದ್ರದ ದಲಿತ ಕಾಲೊನಿ

ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ವಚಲಾಬಾಯಿ ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಕ್ಕಳು ಇರದ ಕಾರಣ ಒಬ್ಬರೇ ಜೀವನ ಸಾಗಿಸುತ್ತಿದ್ದ ಅವರಿಗೆ ಮುಂದಿನ ಬದುಕು ಹೇಗೆ ಎಂಬ ಚಿಂತೆಗೆ ಒಳಗಾಗಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ವಿಧವಾ ವೇತನ ಪಡೆಯಲು ಎಂದು ಸಂತಪೂರ ಗ್ರಾಮದ ಅಂಚೆ ಕಚೇರಿಗೆ ತೆರಳಿದ್ದಳು. ಅಲ್ಲಿಂದ ನೇರವಾಗಿ ಕೌಠಾ(ಬಿ) ಗ್ರಾಮಕ್ಕೆ ಹೋಗಿ ಮಾಂಜ್ರಾ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.

ಈ ಕುರಿತು ಮೃತಳ ಸಹೋದರ ಗಣಪತಿ ಉಪ್ಪಾರ ನೀಡಿದ ದೂರಿನ ಅನ್ವಯ ಸಂತಪೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.
ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180