ಹೇಳಿಕೊಳ್ಳಲು ಸಾಧನೆ ಇಲ್ಲದ ಬಿಜೆಪಿ ಜನೋತ್ಸವ ಕೈಬಿಟ್ಟು ಸಾವರ್ಕರ್‌ ಉತ್ಸವ ಮಾಡುತ್ತಿದೆ: ಪ್ರಿಯಾಂಕ್‌ ಖರ್ಗೆ ಟೀಕೆ

Priyank Kharge
  • ವಿ ಡಿ ಸಾವರ್ಕರ್‌ ಕುರಿತು ಇತಿಹಾಸದ ಸತ್ಯಗಳನ್ನು ಬಿಚ್ಚಿಟ್ಟ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ
  • ಬಾಡಿಗೆ ಬಾಷಣಕಾರ ಹೇಳಿದ್ದೆಲ್ಲವೂ ಸತ್ಯವಲ್ಲ, ವಾಟ್ಸಾಪ್ ವಿವಿಯಿಂದ ಹೊರಬನ್ನಿ: ಕಿವಿಮಾತು

"ಜನೋತ್ಸವ ಬಿಟ್ಟು ಸಾವರ್ಕರ್‌ ಉತ್ಸವ ಮಾಡಲು ಬಿಜೆಪಿ ಹೊರಟಿದೆ. ಇದರ ಮೇಲೆ ತಿಳಿಯುತ್ತೆ ರಾಜ್ಯ ಸರ್ಕಾರಕ್ಕೆ ಹೇಳಿಕೊಳ್ಳಲು ಸಾಧನೆಗಳೇ ಇಲ್ಲ" ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಟೀಕಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಬ್ರಿಟಿಷ್‌ರಿಗೆ ಸಾವರ್ಕರ್‌ ಬರೆದ ಕ್ಷಮಾಪಣೆ ಪತ್ರಗಳನ್ನು ಬಿಜೆಪಿಯವರು ಮಾಸ್ಟರ್‌ಸ್ಟ್ರೋಕ್‌ ಎಂದು ಕರೆಯುತ್ತಿದ್ದಾರೆ. ಹೇಡಿ ಮಾಡಿದ ಕೆಲಸ ಇವರಿಗೆ ಮಾಸ್ಟರ್‌ಸ್ಟ್ರೋಕ್‌ ತರ ಕಾಣುತಿರುವುದು ವಿಪರ್ಯಾಸ” ಎಂದರು. 

“ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್‌ ಎಳ್ಳಷ್ಟೂ ಭಾಗಿಯಾಗಿಲ್ಲ. ಬ್ರಿಟಿಷ್‌ ಅಧಿಕಾರಿಯೊಬ್ಬನ ಹತ್ಯೆಯಲ್ಲಿ ಎರಡನೇ ಆರೋಪಿಯಾಗಿ ಜೈಲು ಸೇರುತ್ತಾರೆ. ನಂತರ ಕ್ಷಮಾಪಣೆ ಕೇಳಿ ಹೊರಬಂದು, ಬ್ರಿಟಿಷರ್‌ ಪಿಂಚಣಿ ಹಣದಲ್ಲಿ ಬದುಕು ನಡೆಸುತ್ತಾರೆ. ಇಂಥ ರಣಹೇಡಿಯನ್ನು ಬಿಜೆಪಿವರು ʼವೀರ್ʼ ಎಂದು ಕರೆಯುತ್ತಾರೆ. ಇದು ಕ್ರಾಂತಿಕಾರಿಗಳಿಗೆ ಮಾಡಿದ ಅವಮಾನ” ಎಂದು ಕುಟುಕಿದರು.

“ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್‌ ಪಾತ್ರ ಏನು ಎಂಬುದನ್ನು ಬಿಜೆಪಿ ಬಹಿರಂಗವಾಗಿ ಹೇಳಲಿ. ಭಾರತಕ್ಕೆ ಅವರ ಸಾಧನೆಗಳು ಏನು ಎಂಬುದನ್ನು ತಿಳಿಸಲಿ. 1923ರಲ್ಲಿ ಚಿತ್ರಗುಪ್ತ ಹೆಸರಲ್ಲಿ ʼವೀರ್‌ ಸಾವರ್ಕರ್‌ʼ ಪುಸ್ತಕ ಪ್ರಕಟವಾಗುತ್ತದೆ. ಸಾವರ್ಕರ್‌ ಅವರು ಸಾವನ್ನಪ್ಪಿದಾಗ ಈ ಚಿತ್ರಗುಪ್ತ ಬೇರೆ ಯಾರು ಅಲ್ಲ   ವಿ ಡಿ ಸಾವರ್ಕರ್‌ ಎಂಬುದು ತಿಳಿಯುತ್ತದೆ. ತನ್ನನ್ನು ತಾನೇ ʼವೀರ್ʼ ಎಂದು ಕರೆದುಕೊಂಡ ಕ್ರಾಂತಿಕಾರಿಗಳಿಗೆ ಸಾವರ್ಕರ್‌ ದ್ರೋಹ ಬಗೆದಿದ್ದಾರೆ” ಎಂದು ದೂರಿದರು. 

ಈ ಸುದ್ದಿ ಓದಿದ್ದೀರಾ?  ಕೆಂಪಣ್ಣ ಆರೋಪ ನಿರಾಧಾರ, ಬೇಕಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ: ಸಿಎಂ ಬೊಮ್ಮಾಯಿ

“ಸಾವರ್ಕರ್‌ ಬಗ್ಗೆ ಬಿಜೆಪಿ ಅವರು ಇತಿಹಾಸದ ನೈಜತೆ ಅರಿಯಲಿ. ಬಾಡಿಗೆ ಬಾಷಣಕಾರ ಹೇಳಿದ್ದೆಲ್ಲವೂ ಸತ್ಯವಲ್ಲ. ವಾಟ್ಸಾಪ್ ವಿವಿಯಿಂದ ಹೊರಬಂದು ಅವರ ನಾಯಕರ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು. ಇದೇ  ಸಾವರ್ಕರ್‌ ಗೋವುಗಳನ್ನು ಪೂಜಿಸಬಾರದು. ಗೋವು ಪವಿತವಲ್ಲ. ಅದೊಂದು ಉಪಯುಕ್ತ ಪ್ರಾಣಿ ಎಂದಿದ್ದಾರೆ. ಅಲ್ಲದೇ ಅವರು ದೇವರನ್ನು ನಂಬುತ್ತಿರಲಿಲ್ಲ. ಅಂತ ವ್ಯಕ್ತಿಯನ್ನು ಈಗ ಗಣೇಶ್‌ ಪಕ್ಕದಲ್ಲಿ ಇಡಲು ಹೊರಟಿದ್ದಾರೆ. ಸಾವರ್ಕರ್‌ ಬಗ್ಗೆ ಅಭಿಮಾನ ಇದ್ದರೆ ಗೋ ಮಾತೇ ಪೂಜೆ ಬೇಡ ಅನ್ನುತ್ತಾರಾ? ಗೋ ಹತ್ಯೆ ಕಾಯ್ದೆ ವಾಪಸ್ ಪಡೆಯುತ್ತಾರಾ? ಎಂದು ಸವಾಲು ಹಾಕಿದರು.

“ದೇಶ ವಿಭಜನೆ ವಿಷಯದಲ್ಲಿ ನೆಹರೂ, ಗಾಂಧಿ ಹಾಗೂ ಕಾಂಗೆಸ್ ಎಂದು ಬಿಜಿಪಿಯವರು ಅಪಪ್ರಚಾರ ಮಾಡುತ್ತಾರೆ. ವಾಸ್ತವದಲ್ಲಿ ಧರ್ಮದ ಮೇಲೆ ದೇಶ ವಿಭಜನೆಯಾಗಬೇಕು ಎಂದು ಆಗ್ರಹಿಸಿದವರು ಸಾವರ್ಕರ್. ಇದನ್ನು ಅಂಬೇಡ್ಕರ್‌ ಕೂಡ ವಿರೋಧಿಸಿದ್ದರು” ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್