ಕನ್ನಡ ವಿರೋಧಿ ಸರ್ಕಾರ| ಬಿಜೆಪಿ ವಿರುದ್ಧ ನೆಟ್ಟಿಗರ ಆಕ್ರೋಶ

  • ​ಗೃಹ ಸಚಿವರ ಕಾರ್ಯಕ್ರಮಗಳಲ್ಲಿ ಕನ್ನಡ ನಿರ್ಲಕ್ಷ್ಯ
  • ಕನ್ನಡ ಪರ ಹೋರಾಟಗಾರರು, ಸಂಘಟನೆಗಳಿಂದ ಆಕ್ರೋಶ
  • ಕನ್ನಡಿಗರನ್ನು ಗುಲಾಮ ಗಿರಿಗೆ ಒಡ್ಡುವ ಯತ್ನ: ಆರೋಪ

ಪ್ರತಿ ಬಾರಿಯಂತೆ ಈ ಬಾರಿಯೂ ಕನ್ನಡ ಬಳಕೆಯ ವಿಷಯದಲ್ಲಿ ಬಿಜೆಪಿ ವರಿಷ್ಠ ಹಾಗೂ ಗೃಹ ಸಚಿವ ಅಮಿತ್‌ ಶಾ ಭೇಟಿ ವಿವಾದ ಹುಟ್ಟುಹಾಕಿದೆ.

ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರದ ತಮ್ಮ ಕರ್ನಾಟಕ ಪ್ರವಾಸದ ವೇಳೆ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಆಸ್ಪತ್ರೆ ಉದ್ಘಾಟನೆ ಮತ್ತು ಬೆಂಗಳೂರಿನ ಸಹಕಾರ ಸಮ್ಮೇಳನದ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಗಳ ವೇದಿಕೆ ಮತ್ತು ಉದ್ಘಾಟನಾ ಫಲಕಗಳಲ್ಲಿ ಇಂಗ್ಲೀಷ್ ಮತ್ತು ಹಿಂದಿ ಭಾಷೆ ಬಳಸಿದ್ದು, ಕನ್ನಡವನ್ನು ಸಂಪೂರ್ಣ ಉಪೇಕಿಸಲಾಗಿದೆ ಎಂದು ಕನ್ನಡಪರ ಹೋರಾಟಗಾರರು ಮತ್ತು ಲೇಖಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕರ್ನಾಟಕದಲ್ಲಿ ಕನ್ನಡ ಕೈಬಿಟ್ಟು, ಕನ್ನಡಿಗರು ಹಿಂದಿ ಹೇರಿಕೆ ಅಂತ ಕೂಗುವುದನ್ನು ನೋಡೋದ್ರಲ್ಲಿ ಅಮಿತ್ ಶಾ ಅವರಿಗೆ ಕಿಕ್ ಸಿಗುತ್ತೆ ಅನ್ನಿಸುತ್ತೆ," ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್ ಪ್ರತಿಕ್ರಿಯಿಸಿದ್ದಾರೆ.

 

ರಾಜ್ಯಕ್ಕೆ ಪ್ರತಿ ಬಾರಿ ಕೇಂದ್ರ ಬಿಜೆಪಿ ನಾಯಕರು ಆಗಮಿಸಿದಾಗಲೂ ಕನ್ನಡದ ವಿಷಯದಲ್ಲಿ ಇಂತಹ ನಿರ್ಲಕ್ಷ್ಯ ಮತ್ತು ಉದಾಸೀನ ಧೋರಣೆ ಸಾಬೀತಾಗುತ್ತಲೇ ಇದೆ. ದೆಹಲಿಯ ಬಿಜೆಪಿ ನಾಯಕರು ರಾಜ್ಯದಲ್ಲಿ ಭಾಗವಹಿಸುವ ಕಾರ್ಯಕ್ರಮಗಳ ಉದ್ಘಾಟನೆ ಫಲಕ, ಬ್ಯಾನರ್, ಕಟೌಟ್ ಸೇರಿದಂತೆ ಪ್ರತಿಯೊಂದರಲ್ಲೂ ಒಂದೋ ಕನ್ನಡವನ್ನು ಸಂಪೂರ್ಣ ಕೈಬಿಟ್ಟು ಹಿಂದಿಯನ್ನು ಮೆರೆಸಲಾಗುತ್ತದೆ. ಅಥವಾ ಕನ್ನಡವನ್ನು ಚಿಕ್ಕದಾಗಿ ಎಲ್ಲೋ ಮೂಲೆಗೆ ತಳ್ಳಿ, ಹಿಂದಿಯನ್ನು ಪ್ರಧಾನವಾಗಿ ಬಳಸಲಾಗುತ್ತಿದೆ. ಇದು ಬಿಜೆಪಿ ನಾಯಕರು ಕನ್ನಡ ಭಾಷೆ ಮತ್ತು ಕನ್ನಡಿಗರ ಬಗ್ಗೆ ಹೊಂದಿರುವ ಗೌರವಕ್ಕೆ ಸಾಕ್ಷಿ ಎಂಬ ಟೀಕೆಗಳು ಕೇಳಿಬಂದಿವೆ.

ಇದನ್ನೂ ಒದಿದ್ದೀರಾ? ಅಧಿಕ ಕಸ ವಿಲೇವಾರಿ: ಅಪಾರ್ಟ್‌ಮೆಂಟ್‌, ಹೋಟೆಲ್‌ಗಳಿಗೇ ಹೊಣೆ

ಕನ್ನಡಿಗರನ್ನು ಗುಲಾಮಗಿರಿಗೆ ಒಡ್ಡುವ ಯತ್ನ

ಈ ವಿಚಾರವಾಗಿ 'ಈದಿನ.ಕಾಂ' ಮಾಧ್ಯಮವು ಕರವೇ ಮುಖಂಡ ಶಿವನಾಂದ್ ಗುಂಡಾನವರ ಸಂಪರ್ಕಿಸಿದಾಗ "ಇದು ಬಹಳ ದೊಡ್ಡ ತಪ್ಪು, ಬಿಜೆಪಿ ನಾಯಕರು ತಮಿಳುನಾಡಿಗೆ ಹೋದರೆ ತಮಿಳು ಭಾಷೆ ಪ್ರಧಾನವಾಗಿ ಇರುತ್ತೆ. ಗುಜರಾತಿಗೆ ಹೋದರೆ ಗುಜರಾತಿ ಭಾಷೆ ಇರುತ್ತೆ, ಮಹರಾಷ್ಟ್ರಕ್ಕೆ ಹೋದರೆ ಮರಾಠಿ ಭಾಷೆ ಬಳಕೆ ಮಾಡುತ್ತಾರೆ. ಆದರೆ ಬಿಜೆಪಿಯವರು ಕರ್ನಾಟಕಕ್ಕೆ ಬಂದರೆ ಮಾತ್ರ ಕನ್ನಡ ಕಡೆಗಣಿಸಿ ಹಿಂದಿ ಮೆರೆಸುತ್ತಾರೆ. ಬೇರೆ ಭಾಷೆಗಳಿಗೆ ಬಿಜೆಪಿ ನಾಯಕರು ನೀಡುವ ಮರ್ಯಾದೆಯನ್ನು ಕನ್ನಡಕ್ಕೆ ಯಾಕೆ ನೀಡುತ್ತಿಲ್ಲ ?" ಎಂದು ಪ್ರಶ್ನಿಸಿದರು.

ಇದನ್ನು ಓದಿದ್ದೀರಾ? ಸಭಾಂಗಣ ಬಾಡಿಗೆ ದುಪ್ಪಟ್ಟು ಹೆಚ್ಚಿಸಿದ ಸರ್ಕಾರ| ಕಲಾವಿದರ ಆಕ್ರೋಶ

"ಇದು ಕನ್ನಡಿಗರನ್ನು ಗುಲಾಮಗಿರಿಗೆ ಒಡ್ಡುವ ಪ್ರಯತ್ನವಾಗಿದೆ. ನಮ್ಮನ್ನು ತುಳಿಯುತ್ತಿದ್ದಾರೆ. ಇಂದು ಹಿಂದೆ ಭಾಷೆ ಹೇರಿಕೆ ಮಾಡುತ್ತಿದ್ದಾರೆ. ಮುಂದೆ ಸಾಂಸ್ಕೃತಿಕ ಹೇರಿಕೆ ಮಾಡುತ್ತಾರೆ. ಮತ್ತು ಮುಂದೆ ಹೀಗೆ ವಿವಿಧ ಉತ್ತರಭಾರತೀಯ ವಿಷಯಗಳನ್ನು ನನ್ನ ಮೇಲೆ ಹೇರುತ್ತಾರೆ. ಇದನ್ನು ನಾವು ಸಹಿಸಿಕೊಳ್ಳಬೇಕೆ?" ಎಂದು ಅವರು ಪ್ರಶ್ನಿಸಿದರು. 

ಕನ್ನಡ ವಿರೋಧಿ ಸರ್ಕಾರ

"ನಾವು ಕನ್ನಡ ವಿರೋಧ ಮಾಡುವವರನ್ನು ಪ್ರತಿಬಾರಿಯೂ ವಿರೋಧಿಸುತ್ತಾ ಬಂದಿದ್ದೇವೆ" ಎಂದ ಶಿವಾನಂದ ಅವರು, ""ನಾವು ಹಲವು ಹೋರಾಟ ಮಾಡಿದ್ದೇವೆ. ಹಿಂದೆ ಕನ್ನಡಪರ ಪ್ರತಿಭಟನೆ ನಡೆಸಿದಾಗ ಬಂಧಿಸಿ ಸಂಜೆ ವೇಳೆ ಬಿಡುತ್ತಿದ್ದರು. ಇತ್ತೀಚಿಗೆ ಪ್ರತಿಭಟನೆ ಮಾಡಿದಾಗೆಲ್ಲಾ ದೊಡ್ಡ ಮಟ್ಟದ ಕೇಸು ಹಾಕಿ, ಬಂಧನ ಮಾಡುತ್ತಾರೆ. ಇದು ಈ ಸರ್ಕಾರದ ಕನ್ನಡದ ವಿಷಯದಲ್ಲಿ ಹೊಂದಿರುವ ಭಾವನೆಗೆ ಸಾಕ್ಷಿ" ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app