
- ʼಸ್ತ್ರೀ ಪೀಡಕರ ಸಾಮ್ರಾಜ್ಯವಾದ ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಗೌರವವಿಲ್ಲʼ
- ʼಶಾಸಕ ಬೆಲ್ಲದ್ ಮಾಡಿದ ಅವಮಾನದಿಂದ ದಲಿತ ಮಹಿಳೆ ಆತ್ಮಹತ್ಯೆ ಯತ್ನʼ
"ಸ್ತ್ರೀ ಪೀಡಕರ ಸಾಮ್ರಾಜ್ಯವಾಗಿರುವ ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಗೌರವವಿಲ್ಲವೇಕೆ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅವರೇ? ಇದರ ವಿರುದ್ಧ ನಿಮ್ಮ ಕ್ರಮವೇನು?" ಎಂದು ಕಾಂಗ್ರೆಸ್ ಟೀಕಿಸಿದೆ.
ʼಪೇ ಸಿಎಂʼ ಹ್ಯಾಷ್ಟ್ಯಾಗ್ ನಡಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ಮಹಿಳೆಯರ ಮೇಲೆ ಬಿಜೆಪಿಗರ ದರ್ಪ, ದೌರ್ಜನ್ಯ ಮಿತಿ ಮೀರುತ್ತಿದೆ. ಶಾಸಕ ಅರವಿಂದ್ ಬೆಲ್ಲದ್ ಅವರು ಸಮಸ್ಯೆ ಹೇಳಿಕೊಳ್ಳಲು ಹೋದ ಮಹಿಳೆಯನ್ನು ಅವಮಾನಿಸಿದ ಕಾರಣ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ” ಎಂದು ದೂರಿದೆ.
“ಶಾಸಕ ಅರವಿಂದ್ ಬೆಲ್ಲದ್ ಮಾಡಿದ ಅವಮಾನದಿಂದಾಗಿ ದಲಿತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಾಸಕರ ದುರ್ವರ್ತನೆಯೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂಬುದು ಮಹಿಳೆ ಬರೆದ ಡೆತ್ನೋಟ್ನಲ್ಲಿ ಸ್ಪಷ್ಟವಾಗಿದೆ. ಬೊಮ್ಮಾಯಿ ಅವರೇ, ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಿರಾ ಅಥವಾ ಸಿದ್ದು ಸವದಿ ಪ್ರಕರಣದಂತೆ ಮುಚ್ಚಿ ಹಾಕುವಿರಾ” ಎಂದು ಪ್ರಶ್ನಿಸಿದೆ.
“ಶಾಸಕ ಅರವಿಂದ್ ಲಿಂಬಾವಳಿಯಿಂದ ಮಹಿಳೆಗೆ ನಿಂದನೆ, ಸಚಿವ ವಿ. ಸೋಮಣ್ಣರಿಂದ ಮಹಿಳೆಯ ಮೇಲೆ ಹಲ್ಲೆ ಹಾಗೂ ಶಾಸಕ ಅರವಿಂದ್ ಬೆಲ್ಲದ್ರಿಂದ ಮಹಿಳೆಗೆ ನಿಂದನೆ. ಇತ್ತೀಚಿನ ಕೆಲವೇ ದಿನಗಳಲ್ಲಿ ನಡೆದ ಈ ಮೂರು ಘಟನೆಗಳು ಬಿಜೆಪಿಯ ಮಹಿಳಾ ವಿರೋಧಿ ಧೋರಣೆಯನ್ನು ಬೆತ್ತಲಾಗಿಸಿವೆ. ಬೊಮ್ಮಾಯಿ ಅವರೇ ಮಹಿಳೆಯರ ಘನತೆ ನಿಮ್ಮ ಆದ್ಯತೆಯಲ್ಲವೇ?” ಎಂದು ಟೀಕಿಸಿದೆ.
ಈ ಸುದ್ದಿ ಓದಿದ್ದೀರಾ? ಪತ್ರಕರ್ತರಿಗೆ ಲಂಚ | ಗಿಫ್ಟ್ ವಿವಾದ ಕಾಂಗ್ರೆಸ್ಸಿನ ಟೂಲ್ ಕಿಟ್ ಪರಿಣಾಮ: ಸಿಎಂ ಬೊಮ್ಮಾಯಿ
“40 ಪರ್ಸೆಂಟ್ ಸರ್ಕಾರದ ರಸ್ತೆ ಗುಂಡಿಗೆ ಒಂದೇ ತಿಂಗಳಲ್ಲಿ ಮೂವರು ಬಲಿಯಾಗಿದ್ದಾರೆ. ನಿರಂತರ ಸಾವುಗಳಾದರೂ, ಹೈಕೋರ್ಟ್ ಪದೇಪದೆ ಚಾಟಿ ಬೀಸಿದರೂ ಎಚ್ಚರಾಗದ ಈ ಸರ್ಕಾರದ್ದು ಎಮ್ಮೆಗಿಂತಲೂ ದಪ್ಪ ಚರ್ಮ! ಸಿಎಂ, ಸಚಿವರುಗಳು ಮೈಕ್ ಮುಂದೆ ನಿಂತು ಗಂಡಸ್ತನ, ದಮ್ಮು, ತಾಕತ್ತುಗಳ ಮಾತುಗಳಲ್ಲಿ ತೋರುವ ಪೌರುಷ ಆಡಳಿತದಲ್ಲಿ ಇಲ್ಲದಾಗಿರುವುದೇಕೆ?” ಎಂದು ಕಾಲೆಳೆದಿದೆ.
ಶಾಸಕ ಅರವಿಂದ್ ಬೆಲ್ಲದ್ ಮಾಡಿದ ಅವಮಾನದಿಂದಾಗಿ ದಲಿತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
— Karnataka Congress (@INCKarnataka) October 30, 2022
ಶಾಸಕರ ದುರ್ವರ್ತನೆಯೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂಬುದು ಮಹಿಳೆ ಬರೆದ ಡೆತ್ನೋಟ್ನಲ್ಲಿ ಸ್ಪಷ್ಟವಾಗಿದೆ,@BSBommai ಅವರೇ, ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಿರಾ ಅಥವಾ ಸಿದ್ದು ಸವದಿ ಪ್ರಕರಣದಂತೆ ಮುಚ್ಚಿ ಹಾಕುವಿರಾ?#SayCM