ಮಾಣಿಕ್ ಷಾ ಮೈದಾನದಲ್ಲಿ ರಾಣಿ ಚೆನ್ನಮ್ಮ, ಟಿಪ್ಪು ಸುಲ್ತಾನ್ ಹೆಸರು ಕೈಬಿಟ್ಟ ಬೊಮ್ಮಾಯಿ ಸರ್ಕಾರ

Maneksha
  • ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡ ಬಿಜೆಪಿ ಸರ್ಕಾರ 
  • ರಾಜ್ಯದ ಮಹನೀಯರ ಏಕಿಷ್ಟು ನಿಮಗೆ ಅಸಹನೆ?: ಕಾಂಗ್ರೆಸ್‌ ಟೀಕೆ

ಇತಿಹಾಸದ ವಿಷಯದಲ್ಲಿ ಸದಾ ವಿವಾದಗಳನ್ನು ಹುಟ್ಟುಹಾಕುವ ಮತ್ತು ಮೈಮೇಲೆ ಎಳೆದುಕೊಳ್ಳುವ ಬಿಜೆಪಿ ಈಗ ಮತ್ತೊಂದು ವಿವಾದವನ್ನು ಸೃಷ್ಟಿಸಿದೆ. 

ಮಣೆಕ್ ಶಾ ಮೈದಾನದಲ್ಲಿ ಎರಡು ದ್ವಾರಗಳಿಗೆ ಇದ್ದ ರಾಣಿ ಚೆನ್ನಮ್ಮ ಮತ್ತು ಟಿಪ್ಪು ಸುಲ್ತಾನ್ ಹೆಸರುಗಳನ್ನು ಅಳಿಸಿ ಹಾಕಿರುವ ಬಗ್ಗೆ ವರದಿಯಾಗಿದೆ.

ಈ ಕುರಿತು ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮಾಡಿ, “ಧ್ವಜಾರೋಹಣಕ್ಕೂ ಮೊದಲಿದ್ದ ರಾಣಿ ಚೆನ್ನಮ್ಮ ಮತ್ತು ಟಿಪ್ಪು ಸುಲ್ತಾನ್ ಹೆಸರುಗಳನ್ನು ಅಳಿಸಿ ಹಾಕಿದ್ದೇಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರೇ? ರಾಜ್ಯದ ಮಹನೀಯರ ಬಗ್ಗೆ ನಿಮಗೆ ಏಕಿಷ್ಟು ಅಸಹನೆ?” ಎಂದು ಟೀಕಿಸಿದೆ.

“ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವನಿಗಿರುವ ಪ್ರಾಮುಖ್ಯತೆ ರಾಜ್ಯದ ಹೋರಾಟಗಾರರಿಗೆ ಏಕಿಲ್ಲ” ಎಂದು ಪ್ರಶ್ನಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್