ಚಾಮರಾಜನಗರ | ಎಲ್ಲ ದೇವಸ್ಥಾನಗಳಲ್ಲೂ ಮುಸ್ಲಿಮರಿಗೆ ಬಹಿಷ್ಕಾರ ಹಾಕಬೇಕು; ಪ್ರಮೋದ್ ಮುತಾಲಿಕ್ ಪ್ರಚೋದನಕಾರಿ ಹೇಳಿಕೆ

CHAMARAJANAGARA
  • ‘ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ನಿರ್ಧಾರ ಸ್ವಾಗತಾರ್ಹ’
  • ‘ಭಯೋತ್ಪಾದಕ ಮನಸ್ಥಿತಿ ವಿರುದ್ಧ ಈ ಬಹಿಷ್ಕಾರ’

ಕುಕ್ಕೆ ಸುಬ್ರಮಣ್ಯದ ಚಂಪಾಷಷ್ಠಿಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧಿಸಿರುವ ಬ್ಯಾನರ್‌ ವಿವಾದದ ಕುರಿತು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ಪ್ರತಿಕ್ರಿಯಿಸಿದ್ದು, "ಕರ್ನಾಟಕದ ಎಲ್ಲ ದೇವಸ್ಥಾನಗಳಲ್ಲೂ ಮುಸ್ಲಿಂಮರಿಗೆ ಬಹಿಷ್ಕಾರ ಹಾಕಬೇಕು" ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. 

ಗುರುವಾರ ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, “ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ನಿರ್ಧಾರ ಸ್ವಾಗತಾರ್ಹ. ಈ ದೇಶದಲ್ಲಿದ್ದುಕೊಂಡು, ಇಲ್ಲಿನ ಸವಲತ್ತು ಪಡೆದುಕೊಂಡು ದೇಶದ್ರೋಹಿ ಚಟುವಟಿಕೆ ನಡೆಸುತ್ತಿರುವ ಭಯೋತ್ಪಾದಕರ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುವುದನ್ನು ಮೌಲ್ವಿಗಳು ಅರಿಯಬೇಕು” ಎಂದರು.

“ಮುಸ್ಲಿಂ ಸಮುದಾಯದ ವಿರುದ್ದ ಅಲ್ಲ, ಆ ಸಮುದಾಯದಲ್ಲಿರುವ ಭಯೋತ್ಪಾದಕ ಮನಸ್ಥಿತಿ ವಿರುದ್ಧ ಈ ಬಹಿಷ್ಕಾರ. ರಾಜ್ಯದ ಎಲ್ಲ ದೇವಾಲಯಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ, ಪ್ರವೇಶ ನಿರ್ಬಂಧಿಸಬೇಕು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ?: ದಕ್ಷಿಣ ಕನ್ನಡ | ಸುಬ್ರಮಣ್ಯದಲ್ಲಿ ಅನ್ಯಧರ್ಮೀಯ ವ್ಯಾಪಾರಿಗಳಿಗೆ ನಿರ್ಬಂಧ; ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಮರ್ಥನೆ

“ಹಿಂದೂ ದೇವಾಲಯಗಳ 100 ಮೀಟರ್ ಅಂತರದಲ್ಲಿ ಹಿಂದೂಯೇತರರು ಪ್ರವೇಶ ಹಾಗೂ ವ್ಯಾಪಾರ ಮಾಡಬಾರದು ಎಂದು ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನಲ್ಲಿದೆ. ಆದ್ದರಿಂದ ಕುಕ್ಕೆ ಸುಬ್ರಮಣ್ಯದಲ್ಲಿ ಮುಸ್ಲಿಂಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಿಲ್ಲ” ಎಂದು ಸಮಜಾಷಿ ನೀಡಿದರು.

“ಯಾವುದೋ ನಾಲ್ಕು ಜನ ಮುಸ್ಲಿಂ ಕಿಡಿಗೇಡಿಗಳು ಮಾಡುವ ಕೆಲಸದಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ಮುಸ್ಲಿಂ ಮುಖಂಡರು, ಮೌಲ್ವಿಗಳು, ಸಮುದಾಯವು ಗಂಭೀರವಾಗಿ ಪರಿಗಣಿಸಬೇಕಿದೆ” ಎಂದು ಸಲಹೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180