ಚಾಮರಾಜನಗರ | ʼನಿರ್ಲಕ್ಷ್ಯದಿಂದ ಮಗು ಸಾವುʼ ಆರೋಪ; ಜಿಲ್ಲಾಸ್ಪತ್ರೆ ವಿರುದ್ಧ ಪ್ರತಿಭಟನೆ

CHAMARAJANAGARA
  • ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆ
  • ಚಿಕಿತ್ಸೆ ನೀಡಿದ್ದ ಚೀಟಿ ಹಿಂಪಡೆದ ಸಿಬ್ಬಂದಿ

ಆಸ್ಪತ್ರೆ ಸಿಬ್ಬಂದಿಗಳು ನಿರ್ಲಕ್ಷ್ಯದಿಂದ ಚುಚ್ಚುಮದ್ದು ಹಾಕಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಚಾಮರಾಜನಗರ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದ ಎದುರು ಪೋಷಕರು ಹಾಗೂ ಸಾರ್ವಜನಿಕರು ಬುಧವಾರ ಪ್ರತಿಭಟನೆ ಮಾಡಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮುರಟಿಪಾಳ್ಯ ಗ್ರಾಮದ ಶಿವರುದ್ರಮ್ಮ ಎಂಬ ಮಹಿಳೆ ತನ್ನ ಒಂಭತ್ತು ತಿಂಗಳ ಗಂಡು ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದರು. ಮಗುವಿಗೆ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದ ಸಿಬ್ಬಂದಿ ಚುಚ್ಚುಮದ್ದು ಚುಚ್ಚಿದ್ದಾರೆ. ಅಲ್ಲಿಯವರೆಗೆ ಮಾತನಾಡುತ್ತಿದ್ದ ಮಗುವು ಚುಚ್ಚುಮದ್ದು ನೀಡಿದ ಕೆಲವೇ ಕ್ಷಣಗಳಲ್ಲಿ ಚಲನವಲನ ನಿಲ್ಲಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.

Eedina App

ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ವಸತಿ ನಿಲಯದಲ್ಲಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

“ಚಿಕಿತ್ಸೆ ನೀಡಿದ್ದ ವೈದ್ಯಕೀಯ ಚೀಟಿಯನ್ನು ಸಿಬ್ಬಂದಿಗಳು ನಮ್ಮಿಂದ ತೆಗೆದುಕೊಂಡಿದ್ದಾರೆ. ತರಾತುರಿಯಲ್ಲಿ ಮೈಸೂರು ಆಸ್ಪತ್ರೆಗೆ ಮಗುವನ್ನು ದಾಖಲಿಸುವಂತೆ ತಿಳಿಸಿದ್ದರು. ಮಗು ಚಲನವಲನ ನಿಲ್ಲಿಸಿರುವುದನ್ನು ಗಮನಿಸಿದಾಗ ಅನುಮಾನ ಬಂದು ಸ್ಥಳೀಯರಿಗೆ ತಿಳಿಸಿದ್ದೇವೆ” ಎಂದು ಪೋಷಕರು ಹೇಳಿದ್ದಾರೆ.

AV Eye Hospital ad

ವಿಷಯ ತಿಳಿಯುತ್ತಿದ್ದಂತೆ ನೂರಾರು ಸಾರ್ವಜನಿಕರು, ಹೋರಾಟಗಾರರು ಸ್ಥಳಕ್ಕೆ ಧಾವಿಸಿ ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೃಷ್ಣಪ್ರಸಾದ್‌ ತಿಳಿಸಿದ್ದಾರೆ.

ಮಗುವಿಗೆ ಪ್ರಮಾಣಕ್ಕಿಂತ ಹೆಚ್ಚು ಡೋಸ್‌ನ ಚುಚ್ಚುಮದ್ದು ನೀಡಿರುವ ಸಾಧ್ಯತೆಯಿದೆ ಎಂದು ಪ್ರತಿಭಟನಾಕಾರರು ಅನುಮಾನ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app