
- ʼ12 ಬಾರಿ ದೆಹಲಿ ಭೇಟಿ ಮಾಡಿದರೂ ರಾಜ್ಯಕ್ಕೆ ನಯಾಪೈಸೆ ಪ್ರಯೋಜನವಾಗಿಲ್ಲʼ
- ʼಸಿಎಂ ಬೊಮ್ಮಾಯಿಯವರನ್ನ ಕಂಡರೆ ಹೈಕಮಾಂಡಿಗೆ ಅಷ್ಟೊಂದು ತಾತ್ಸಾರವೇ?ʼ
ಇದುವರೆಗೂ 12 ಬಾರಿ ದೆಹಲಿ ಭೇಟಿ ಮಾಡಿದರೂ ರಾಜ್ಯಕ್ಕೆ ನಯಾಪೈಸೆ ಪ್ರಯೋಜನವಾಗಿಲ್ಲ, ಈಗಲೂ ಆಗುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ʼದೆಹಲಿ ಟೂರಿಸ್ಟ್ʼ ಆಗಿದ್ದಾರೆ ಎಂದು ಕಾಂಗ್ರೆಸ್ ಕಿಚಾಯಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಬೊಮ್ಮಾಯಿಯವರ ಸಂಕಟ ವಿಸ್ತರಣೆಯಾಗುತ್ತಿದೆಯೇ ಹೊರತು; ಸಂಪುಟ ವಿಸ್ತರಣೆಯಲ್ಲ. ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡುತ್ತೇನೆ ಎಂದಿದ್ದ ಬೊಮ್ಮಾಯಿ ಅವರಿಗೆ ನಡ್ಡಾ ಅಪಾಯಿಂಟ್ಮೆಂಟ್ ಕೊಡಲು ಸತಾಯಿಸುತ್ತಿರುವುದೇಕೆ” ಎಂದು ಪ್ರಶ್ನಿಸಿದೆ.
“ರಾಜ್ಯದ ಸಿಎಂ ಬೊಮ್ಮಾಯಿಯವರನ್ನು ಕಂಡರೆ ಹೈಕಮಾಂಡಿಗೆ ಅಷ್ಟೊಂದು ತಾತ್ಸಾರವೇ? ಬೊಮ್ಮಾಯಿಯವರು ಅಷ್ಟು ಅಸಮರ್ಥರೆ? ಬೊಮ್ಮಾಯಿಯವರೆಂದರೆ ಬಿಜೆಪಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆಯೇ?” ಎಂದು ಕುಹಕವಾಡಿದೆ.
ಈ ಸುದ್ದಿ ಓದಿದ್ದೀರಾ? ಗಡಿ ವಿವಾದ | ಸುಪ್ರೀಂ ಕೋರ್ಟ್ನಲ್ಲಿ ನಾಳೆ ವಿಚಾರಣೆ: ರಾಜ್ಯದ ಪರ ಸಮರ್ಥ ವಾದ ಮಂಡಿಸುವ ಭರವಸೆ: ಸಿಎಂ ಬೊಮ್ಮಾಯಿ
"ದೆಹಲಿ ಟೂರಿಸ್ಟ್ ಬಸವರಾಜ ಬೊಮ್ಮಾಯಿ ಅವರನ್ನು ಹೈಕಮಾಂಡ್ ನಾಯಕರು ಭೇಟಿ ಮಾಡಲು ಸತಾಯಿಸುತ್ತಿರುವುದು ನೋಡಿ ಆಯ್ಯೋ ಪಾಪ ಎನಿಸುತ್ತಿದೆ! ಈವರೆಗೂ ಬೊಮ್ಮಾಯಿ 12 ಬಾರಿ ದೆಹಲಿ ಭೇಟಿ ಮಾಡಿದರೂ ರಾಜ್ಯಕ್ಕೆ ನಯಾಪೈಸೆ ಪ್ರಯೋಜನವಾಗಿಲ್ಲ” ಎಂದು ಟೀಕಿಸಿದೆ.