ಚಿಕ್ಕಮಗಳೂರು | ಮಳೆ ಅಬ್ಬರ; ಭತ್ತದ ಗದ್ದೆಯಲ್ಲಿ ಭೂ ಕುಸಿತ

Shivamogga
  • ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ಘಟನೆ
  • ಸುಮಾರು 60 ರಿಂದ 70 ಅಡಿ ಆಳದ ಕಂದಕ ನಿರ್ಮಾಣ

ರಾಜ್ಯದ ಮಲೆನಾಡು ಭಾಗದಲ್ಲಿ ಮಳೆಯ ಅರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೂ ಕೃಷಿ ಚಟುವಟಿಕೆ ನಡೆಯಬೇಕಿದ್ದ ಹೊಲಗದ್ದೆಗಳು ಜಲಾವೃತಗೊಂಡು ಸಾಕಷ್ಟು ಅನಾಹುತ ಸಂಭವಿಸಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ಭತ್ತದ ಗದ್ದೆಯಲ್ಲಿ ಭೂ ಕುಸಿತವಾಗಿದ್ದು, ರೈತರು ಆತಂಕಗೊಂಡಿದ್ದಾರೆ.

ಮನೋಜ್ ಎಂಬವರಿಗೆ ಸೇರಿದ ಗದ್ದೆಯಲ್ಲಿ ಭೂ ಕುಸಿತವಾಗಿದ್ದು, ಸುಮಾರು 60 ರಿಂದ 70 ಅಡಿ ಆಳದ ಕಂದಕ ನಿರ್ಮಾಣವಾಗಿದೆ.

ಈ ಸುದ್ದಿ ಓದಿದ್ದೀರಾ?; ಕೊಡಗು | 'ಸಿಬಿಎಸ್ಇ'ಯಲ್ಲಿ ನವೋದಯ ವಿದ್ಯಾಲಯದ ಅತ್ಯುತ್ತಮ ಸಾಧನೆ

ಈ ಕುರಿತು ಮಾತನಾಡಿರುವ ರೈತ ಮನೋಜ್, "ನಾಟಿ ಮಾಡಲು ಗದ್ದೆಯನ್ನು ಹದಗೊಳಿಸಲಾಗಿತ್ತು. ಆದರೆ ಗುರುವಾರ ಸುರಿದ ಮಳೆಯಿಂದ ಸಂಜೆ 6 ಗಂಟೆಗೆ ಭಾರೀ ಶಬ್ದವೊಂದು ಕೇಳಿ ಬಂತು. ಗದ್ದೆಯಲ್ಲಿ ಹೋಗಿ ನೋಡಿದಾಗ ಭೂ ಕುಸಿತವಾಗಿ ಕಂದಕ ನಿರ್ಮಾಣವಾಗಿತ್ತು" ಎಂದಿದ್ದಾರೆ.

"ಇದರಿಂದ ನನಗೆ ಆತಂಕವಾಗಿದ್ದು, ಕಳೆದ ವಾರವೇ ಎತ್ತುಗಳಿಂದ ಉಳುಮೆ ಮಾಡಿ ಗದ್ದೆಯನ್ನು ಹದ ಮಾಡಿದ್ದೆ. ನಮ್ಮ ಪಕ್ಕದ ಹೊಲದ ಕೃಷಿಕರಿಗೆ ಕೂಡ ಭಯ ಶುರುವಾಗಿದೆ" ಎಂದು ತಿಳಿಸಿದರು.

ಭೂ ಕುಸಿತವಾಗಿರುವ ಸ್ಥಳಕ್ಕೆ ಕೃಷಿ ಇಲಾಖೆಯವರು ಭೇಟಿ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಮತ್ತೊಬ್ಬ ಕೃಷಿಕ ಪ್ರಶಾಂತ್ "ವಿಜ್ಞಾನಿಗಳು ಬಾರದೆ ಕೃಷಿಕರ ಆತಂಕ ಕಡಿಮೆ ಆಗುವುದಿಲ್ಲ" ಎಂದು ತಿಳಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180