ಚಿಕ್ಕಮಗಳೂರು | ಆನೆ ದಾಳಿಗೆ ಮಹಿಳೆ ಮೃತ್ಯು : ತಡವಾಗಿ ಬಂದದ್ದಕ್ಕೆ ಆಕ್ರೋಶಿತ ಗ್ರಾಮಸ್ಥರಿಂದ ಬಿಜೆಪಿ ಶಾಸಕನ ಮೇಲೆ ಹಲ್ಲೆ; ಆರೋಪ

MLA MP Kumaraswamy
  • ಪೊಲೀಸರು ನನಗೆ 'ಮಿಸ್‌ಗೈಡ್' ಮಾಡಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ
  • ತಡವಾಗಿ ಬಂದ ಶಾಸಕರನ್ನು ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಬಂದ ಆಕ್ರೋಶಿತ ಗ್ರಾಮಸ್ಥರ ಗುಂಪು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಕುಂದೂರು ಸಮೀಪದ ಹುಲ್ಲೆಮನೆ ಗ್ರಾಮದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಮಹಿಳೆಯೋರ್ವರ ಮೃತದೇಹ ವೀಕ್ಷಿಸಲು ತಡವಾಗಿ ಬಂದಿದ್ದಕ್ಕೆ, ಆಕ್ರೋಶಿತ ಗ್ರಾಮಸ್ಥರ ಗುಂಪು ಪೊಲೀಸರ ಸಮ್ಮುಖದಲ್ಲೇ ತಮ್ಮ ಕ್ಷೇತ್ರದ ಶಾಸಕರನ್ನು ಅಟ್ಟಾಡಿಸಿದ ಘಟನೆ ಭಾನುವಾರ ನಡೆದಿರುವುದಾಗಿ ವರದಿಯಾಗಿದೆ.

ಘಟನೆಯ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಗ್ರಾಮಸ್ಥರು ಮೂಡಿಗೆರೆಯ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರನ್ನು ಅಟ್ಟಾಡಿಸಿ, ಓಡಿಸಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ಸುಮಾರು ಹತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳದಲ್ಲಿದ್ದರೂ ಏನೂ ಮಾಡಲಾಗದೇ, ಶಾಸಕರನ್ನೇ ಹಿಂದಕ್ಕೆ ಕಳುಹಿಸುತ್ತಿರುವುದು ದೃಶ್ಯದಲ್ಲಿ ಕಂಡು ಬಂದಿದೆ.

Eedina App

ಮೂಡಿಗೆರೆ ತಾಲೂಕು ಕುಂದೂರು ಸಮೀಪದ ಹುಲ್ಲೆಮನೆ ಗ್ರಾಮದ ಶೋಭಾ (45) ಕಾಡಾನೆ ದಾಳಿಯಿಂದ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದರು. ಮೃತದೇಹ ವೀಕ್ಷಿಸಲು ತಡವಾಗಿ ಬಂದ ಕಾರಣಕ್ಕೆ ಈ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಅಟ್ಟಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆ ಮಾಡಿರುವುದಲ್ಲದೇ ಬಟ್ಟೆಯನ್ನು ಹರಿದಿರುವುದಾಗಿ ಶಾಸಕರು ಆರೋಪಿಸಿದ್ದಾರೆ.

AV Eye Hospital ad

ಪದೇ ಪದೇ ಆನೆ ದಾಳಿಯಿಂದ ತೀವ್ರ ಅಕ್ರೋಶಗೊಂಡಿದ್ದ ಗ್ರಾಮಸ್ಥರು, ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ. ಶಾಸಕರ ಬಟ್ಟೆ ಹಿಡಿದು ಜಗ್ಗಾಡಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ಬಳಿಕ ಈ ಕುರಿತು ಸ್ವತಃ ವಿಡಿಯೋ ಬಿಡುಗಡೆ ಮಾಡಿರುವ ಶಾಸಕ ಎಂ.ಪಿ.ಕುಮಾರಸ್ವಾಮಿ, "ಆನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಮೃತದೇಹವನ್ನು ವೀಕ್ಷಿಸಲು ತೆರಳಿದ ವೇಳೆ ನನ್ನ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಇದು ವ್ಯವಸ್ಥಿತ ಪಿತೂರಿಯಾಗಿದೆ. ಪೊಲೀಸರು ನನಗೆ 'ಮಿಸ್‌ಗೈಡ್ ಮಾಡಿದ್ದಾರೆ. ನಮ್ಮದೇ ಸರ್ಕಾರದ ಪೊಲೀಸ್ ಇಲಾಖೆ ನನಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ" ಎಂದು ನೇರವಾಗಿ ಆರೋಪಿಸಿದ್ದಾರೆ.

ಹರಿದ ಬಟ್ಟೆಯಲ್ಲಿಯೇ ಹೇಳಿಕೆ ನೀಡಿರುವ ಅವರು, "ಆನೆ ದಾಳಿ ಬಗ್ಗೆ ಸರ್ಕಾರ ಹಾಗೂ ನ್ಯಾಯಾಲಯ ಏನು ಹೇಳಿದೆ ಎಂದು ಎಲ್ಲರಿಗೂ ಗೊತ್ತು. ಸಂಚು ಮಾಡಿ ಈ ರೀತಿಯ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿದ್ದ 10 ಪೊಲೀಸರಿಗೂ ಏನೂ ಮಾಡಲಿಕ್ಕಾಗಲಿಲ್ಲ. ನಾನು ಅಲ್ಲೇ ಇರುತ್ತಿದ್ದೆ. ಆ ಜಾಗ ಬಿಟ್ಟು ಕದಲುತ್ತಿರಲಿಲ್ಲ. ಆದರೆ ಪೊಲೀಸರು, ಹೋಗಿ ಹೋಗಿ ಸಾರ್ ಎಂದು ಮಿಸ್‌ಗೈಡ್ ಮಾಡಿದ್ದಾರೆ" ಎಂದು ನೇರವಾಗಿಯೇ ಆರೋಪಿಸಿದ್ದಾರೆ.

ವಿಡಿಯೋ ಕೃಪೆ: Vibrant Mysore News Facebook

"ನಮ್ಮ ಗ್ರಾಮದಲ್ಲಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ನಿಜ. ಪೊಲೀಸ್‌ನವರು ರಕ್ಷಣೆ ನೀಡಿ ಅವರನ್ನ ಬಚಾವ್ ಮಾಡಿದ್ದಾರೆ. ಪೊಲೀಸರ ವೈಫಲ್ಯ ಏನಿಲ್ಲ. ಅವರು ಕಾರಲ್ಲಿ ತೆರಳುವಾಗ ಬಟ್ಟೆ ಕೂಡ ಹರಿದಿಲ್ಲ. ಅವರ ಹೇಳಿಕೆ 100% ಶುದ್ಧ ಸುಳ್ಳು. ಮುಂಜಾನೆ 7.45ರ ಆಸುಪಾಸಿಗೆ ಮಹಿಳೆಯನ್ನು ಆನೆ ತುಳಿದು ಸಾಯಿಸಿದೆ. ಆದರೆ ಶಾಸಕರು ಸಂಜೆ 5 ಘಂಟೆಗೆ ಬಂದ್ರೆ ಹೇಗೆ ಸಹಿಸಿಕೊಳ್ಳೋಕೆ ಆಗುತ್ತೆ...?" ಎಂದು ಶಾಸಕರು ನೀಡಿರುವ ಹೇಳಿಕೆಗೆ ಗ್ರಾಮಸ್ಥರೋರ್ವರು ಕಮೆಂಟ್ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
5 ವೋಟ್
eedina app