ಚಿಕ್ಕಮಗಳೂರು | ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 3.96 ಲಕ್ಷ ರೂ. ನಿವ್ವಳ ಲಾಭ

  • ಸಂಘದ ಸದಸ್ಯರುಗಳಿಗೆ ಶೇ.10ರಷ್ಟು ಷೇರಿನ ಲಾಭ ಘೋಷಣೆ
  • ನಿವೇಶನ ಖರೀದಿಸಲು ಆಡಳಿತ ಮಂಡಳಿ ನಿರ್ಧಾರ

ಚಿಕ್ಕಮಗಳೂರು ನಗರ ಗೃಹ ನಿರ್ಮಾಣ ಸಹಕಾರ ಸಂಘವು 2021-22ನೇ ಸಾಲಿನಲ್ಲಿ ರೂ.3.96 ಲಕ್ಷ ನಿವ್ವಳ ಲಾಭ ಗಳಿಸಿ ಯಶಸ್ವಿಯಾಗಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಚ್.ಎನ್ ಗಂಗಾಧರ್ ತಿಳಿಸಿದ್ದಾರೆ.

ನಗರದ ಬಸವನಹಳ್ಳಿಯಲ್ಲಿ ನಡೆದ ಚಿಕ್ಕಮಗಳೂರು ನಗರ ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಎಚ್‌.ಎನ್ ಗಂಗಾಧರ್ ಮಾತನಾಡಿರು.

“ಸಂಘದ ಸದಸ್ಯರುಗಳಿಗೆ ಶೇ.10ರಷ್ಟು ಷೇರಿನ ಲಾಭವನ್ನು ಘೋಷಿಸಲಾಗಿದೆ. ಜೊತೆಗೆ ಸಂಘವು ಕೆಲವು ವರ್ಷಗಳಲ್ಲಿ ನೂರು ವರ್ಷ ಪೂರೈಸಲಿದೆ. ಶತಮಾನೋತ್ಸವದ ಅಂಗವಾಗಿ ನಗರಾಭಿವೃದ್ದಿ ಪ್ರಾಧಿಕಾರದಿಂದ ನಗರದ ದೀಪಾ ನರ್ಸಿಂಗ್‌ನ ಬೈಪಾಸ್ ರಸ್ತೆಯಲ್ಲಿ ಸಿಎ ನಿವೇಶನ ಖರೀದಿಸಲು ಆಡಳಿತ ಮಂಡಳಿಯಿಂದ ನಿರ್ಧರಿಸಲಾಗಿದೆ” ಎಂದು ತಿಳಿಸಿದರು.

“ನಿವೇಶನ ಖರೀದಿಸುವ ಸಲುವಾಗಿ ಷೇರಿನ ಲಾಭವನ್ನು ನೀಡಬೇಕು ಎಂದು ಸದಸ್ಯರಲ್ಲಿ ಪ್ರಸ್ತಾಪಿಸಿದಾಗ ಸಭೆಯು ಸರ್ವಾನುಮತದಿಂದ ʼಸಂಘಕ್ಕೆ ನಿವೇಶನ ಖರೀದಿಸಲು ಷೇರಿನ ಲಾಭ ನೀಡುತ್ತೇವೆಂದುʼ ಅನುಮೋದನೆ ನೀಡಿದರು” ಎಂದು ಹೇಳಿದರು. 

"ಪ್ರತಿ ವರ್ಷದಿಂದಲೂ ಸಂಘವು ನಿವ್ವಳ ಲಾಭವನ್ನು ಹೆಚ್ಚಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಮೂಲ ಕಾರಣ ನಿರ್ದೇಶಕರು ಮತ್ತು ಸಂಘದ ಸದಸ್ಯರು. ಮುಂದಿನ ದಿನಗಳಲ್ಲಿ ನಿವೇಶನ ಖರೀದಿಸಿ ನೂತನ ಕಟ್ಟಡ ಸ್ಥಾಪನೆ ಮಾಡಲಾಗುವುದು" ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | 50 ಸಾವಿರ ರೂ.ಗೆ ಮಗು ಮಾರಾಟ: ಶಿಶು ರಕ್ಷಣೆ

ಅತಿಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಬಹುಮಾನ

ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ 12 ಮಕ್ಕಳಿಗೆ ತಲಾ ಒಂದು ಸಾವಿರ ನಗದು, ಪ್ರಮಾಣಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಎಲ್.ಕೆ.ರುಕ್ಮಿಣಿಮೂರ್ತಿ, ನಿರ್ದೇಶಕ ಎಚ್.ಎಂ. ನಾರಾಯಣ, ಸಿ.ಎಸ್ ಕುಬೇರ, ಬಿ.ವಿರೂಪಾಕ್ಷಪ್ಪ, ಎಲ್.ವಿ.ಕೃಷ್ಣಮೂರ್ತಿ, ಸಿ.ಎಂ ವೇಣುಗೋಪಾಲ್, ಸಿ.ಎಸ್. ಏಕಾಂತರಾಮು ಇತರರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180