ಚಿಕ್ಕಮಗಳೂರು | ಜಿಲ್ಲೆಯ ವಿವಿಧೆಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ

  • ಶಂಕರಪುರ ಅಂಬೇಡ್ಕರ್ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆ
  • ನಗರದ ಗೌರಿಕಾಲುವೆಯ ನೂರಾನಿ ಮಸೀದಿಯಲ್ಲೂ  ಧ್ವಜಾರೋಹಣ

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸೋಮವಾರ ಚಿಕ್ಕಮಗಳೂರು ಜಿಲ್ಲೆಯ ವಿವಿಧೇಡೆ ಧ್ವಜಾರೋಹಣ ನೆರವೇರಿಸಲಾಯಿತು.

ನಗರದ ಶಂಕರಪುರ ಅಂಬೇಡ್ಕರ್ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆ ಹಮ್ಮಿಕೊಂಡಿದ್ದು, ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ ಟಿ ರಾಧಾಕೃಷ್ಣ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಶಾಲೆ ಕಾರ್ಯದರ್ಶಿ ಸಿ ಕೆ ಬಸವರಾಜ್, ಮುಖ್ಯ ಶಿಕ್ಷಕ್ಷರಾದ ಜ್ಯೋತಿ, ರುದ್ರಪ್ಪ, ನೀಲಕಂಠಪ್ಪ, ಶಿವಕುಮಾರಿ, ಕರುಣಾಕರ ಮತ್ತಿತರರು ಹಾಜರಿದ್ದರು.

Image

ನಗರದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್  ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜಿ ಎಸ್ ಚಂದ್ರಪ್ಪ, ನಗರಾಧ್ಯಕ್ಷ ಸಿ.ಕೆ. ಮೂರ್ತಿ, ನಗರಸಭಾ ಸದಸ್ಯರಾದ ಎ.ಸಿ.ಕುಮಾರ್, ಗೋಪಿ, ಮುಖಂಡರುಗಳಾದ ಬಿ ಎಂ ತಿಮ್ಮಶೆಟ್ಟಿ, ದೇವಿಪ್ರಸಾದ್, ಚಂದ್ರಶೇಖರ್, ಮಾನುಮಿರಾಂಡ, ಆನಂದೇಗೌಡ, ಇರ್ಷಾದ್, ಹೆಚ್.ಎಸ್.ಚಂದ್ರಪ್ಪ, ಚಾಂದಾಪಾಷ, ಶ್ರೀಮತಿ ಜಯಂತಿ, ರಾಜೀವ ಮತ್ತಿತರರು ಹಾಜರಿದ್ದರು.

Image

ನಗರದ ಆಮ್‌ಆದ್ಮಿ ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಡಾ ಕೆ ಸುಂದರಗೌಡ ಧ್ವಜಾರೋಹರಣ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಪಕ್ಷದ ಉಪಾಧ್ಯಕ್ಷ ಮೋಹನ್, ಕಾರ್ಯದರ್ಶಿ ಈರೇಗೌಡ, ಮುಖಂಡರಾದ ಸೈಯದ್ ಜಮೀರ್ ಅಹ್ಮದ್, ನಾಗರಾಜ್, ಪವನ್, ಪರಮೇಶ್ವರ್, ಲಿಂಗಾರಾಧ್ಯ ಮತ್ತಿತರರಿದ್ದರು.

Image

ನಗರದ ಗೌರಿಕಾಲುವೆಯ ನೂರಾನಿ ಮಸೀದಿಯಲ್ಲಿ ಕಮಿಟಿ ಅಧ್ಯಕ್ಷ ಮುಮ್ತಾಜ್ ಆಲಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಸೀದಿ ಗುರುಗಳಾದ ಹಾಫಿಝ್ ಯೂನಿಸ್, ಹಾಫಿಝ್ ಇಸಾಕ್, ಕಮಿಟಿಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಖಾನ್, ಸದಸ್ಯರುಗಳಾದ ನಸ್ರುಲ್ಲಾ ಖಾನ್, ಅಬ್ದುಲ್ ವಾಜಿದ್, ನದೀಮ್ ಪಾಷ, ಅಮ್ದದ್ ಖಾನ್, ಅನ್ಸರ್, ಮುನ್ನಾಬಾಯ್, ಅಕ್ರಂಪಾಷ, ಮಕ್ದೂಮ್ ಮತ್ತಿತರರಿದ್ದರು.

Image

ನಗರದ ಗೌರಿಕಾಲುವೆಯ ಆಶಾದೀಪ ಕೇಂದ್ರದ ವಿಕಲಚೇತನ ಮಕ್ಕಳಿಗೆ ರೇಷನ್‌ಕಿಟ್, ವೈದ್ಯಕೀಯ ಸೌಲಭ್ಯ ಸೇರಿದಂತೆ ದಿನೋಪಯೋಗಿ ವಸ್ತುಗಳನ್ನು ನೀಡುವ ಮೂಲಕ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ಜಿಲ್ಲಾ ಘಟಕವು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿತು.

ಈ ವೇಳೆ ಸಮಿತಿಯ ಜಿಲ್ಲಾಧ್ಯಕ್ಷ ಎಂ.ರಾಜೇಶ್ ಮಾತನಾಡಿ, “ಮುಂದಿನ ದಿನಗಳಲ್ಲಿ ಆಶಾದೀಪ ಕೇಂದ್ರದ ಮಕ್ಕಳಿಗಾಗಿ ಸರ್ಕಾರದ ಮೂಲಕ ದೊರೆಯುವ ಸೌಲಭ್ಯಗಳನ್ನು ನೀಡುವಂತೆ ಸಮಿತಿಯಿಂದ ಒತ್ತಾಯಿಸಲಾಗುವುದು” ಎಂದರು. 

ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಗೌರವಾಧ್ಯಕ್ಷ ಗಂಗಾಧರ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್, ಮಹಿಳಾ ಅಧ್ಯಕ್ಷೆ ವಿನುತಾ, ಪ್ರಧಾನ ಕಾರ್ಯದರ್ಶಿ ಶಾಂತಿ ಫೆರ್ನಾಂಡೀಸ್, ತಾಲೂಕು ಅಧ್ಯಕ್ಷ ರಾಜೇಶ್, ಸದಸ್ಯರಾದ ವಿಜಯ್, ಅಜಯ್, ಮೂರ್ತಿ, ಹರೀಶ್, ಪೂರ್ಣೀಮಾ, ಮಂಜುನಾಥ್, ಸುಧಾ, ಮಂಜುಳಾ ಬಾಯಿ, ಕೇಂದ್ರದ ಶಿಕ್ಷಕರಾದ ತ್ರಿಸಾ ಪೀಟರ್, ಜೋಸ್ ಮೋಲಿ ಹಾಜರಿದ್ದರು.

Image

ನಗರದ ಕೋಟೆ ಅಗ್ರಹಾರ ವೃತ್ತದಲ್ಲಿ ನಗರ ಆಟೋ ಚಾಲಕರು ಹಾಗೂ ಮಾಲಿಕರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ  ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಉಮಾ ಕೃಷ್ಣಪ್ಪ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಸುಜಾತ ಶಿವಕುಮಾರ್, ಮಾಜಿ ಸದಸ್ಯ ವನಿತಾ ನಾರಾಯಣ ಮೂರ್ತಿ, ಸಂಘದ ಅಧ್ಯಕ್ಷ ರಾಮೇಗೌಡ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಕಾರ್ಯದರ್ಶಿ ಕೋಟೆ ಜಗದೀಶ್, ಕಾರ್ಯಾಧ್ಯಕ್ಷ ಉದಯಕುಮಾರ್, ಕನ್ನಡಪರ ಸಂಘಟನೆಯ ನೂರುಲ್ಲಾ ಖಾನ್, ಸಂಘದ ಸದಸ್ಯರುಗಳಾದ ಬಸವರಾಜ್, ದ್ವಾರಕೇಶ್, ಯಶವಂತ್, ಸತೀಶ್, ಮಂಜೇಗೌಡ, ವೆಂಕಟೇಶ್ ಹಾಜರಿದ್ದರು.

Image

ಚಿಕ್ಕಮಗಳೂರು ತಾಕಿನ ಪಂಡರವಳ್ಳಿ ಸಮೀಪದಲ್ಲಿರುವ ಕೆಳಚಂದ್ರ ಪ್ಲಾಂಟೇಷನ್ ಗ್ರೂಪ್ ಅಧೀನದಲ್ಲಿರುವ ಏಳುನೂರು ಖಾನ್ ಎಸ್ಟೇಟ್‌ನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಸ್ಟೇಟ್ ವ್ಯವಸ್ಥಾಪಕರು, ಸಿಬ್ಬಂದಿಯವರು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.

Image

ತಾಲೂಕಿನ ಮಲ್ಲೇದೇವರಹಳ್ಳಿಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪಂಚಾಯಿತಿ ಸದಸ್ಯ ಎಂ.ಡಿ.ನಾಗೇಶ್ ಧ್ವಜಾರೋಹಣ ನೆರವೇರಿಸಿದರು. ಅಂಗನವಾಡಿ ಕೇಂದ್ರಕ್ಕೆ ಪಂಚಾಯಿತಿ ಸದಸ್ಯ ತಮ್ಮ ವೈಯಕ್ತಿಕ ಖರ್ಚಿನಿಂದ ನಾಮಫಲಕದ ಬೋರ್ಡನ್ನು ಶಿಕ್ಷಕರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಹೆಚ್.ಎಂ.ಶೈಲಜಾ, ಭಾಗ್ಯ ರವಿಕುಮಾರ್, ಸಹಾಯಕಿ ನಾಗಮ್ಮ ಹಾಗೂ ಮಕ್ಕಳು ಹಾಜರಿದ್ದರು.

Image

ತಾಲೂಕಿನ ಆಲ್ದೂರು ಸಮೀಪದ ಕೋಟೆಯೂರಿನಲ್ಲಿ ಧ್ವಜಾರೋಹಣ ನೆರವೇರಿಸಿದ್ದು, 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಗ್ರಾಮದ 75 ವರ್ಷ ಪೂರ್ಣಗೊಳಿಸಿದ ಮಹಿಳೆ ಹಾಗೂ ಪುರುಷ ವೃದ್ದರಿಗೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನಿಸಿ ಗೌರವಿಸುವ ಮೂಲಕ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಲೋಕೇಶ್, ಗ್ರಾಮಸ್ಥರಾದ ಗಂಗೇಗೌಡ, ಸುರೇಂದ್ರಗೌಡ, ರಂಗೇಗೌಡ, ಲೋಕೇಶ್, ಎಸ್‌ಡಿಎಂಸಿ ಅಧ್ಯಕ್ಷ ಹೂವಯ್ಯ, ಶಿಕ್ಷಕ ತಿಪ್ಪೇಶ್, ಯತೀಶ್‌ಕುಮಾರ್ ಮತ್ತಿತರರು ಹಾಜರಿದ್ದರು.

Image

ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಸಿ ಎಸ್ ಕೇಶವಮೂರ್ತಿ ಧ್ವಜಾರೋಹರಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಿ ಆರ್ ಗಂಗಾಧರ್, ನಿರ್ದೇಶಕರಾದ ಎಂ.ಎಸ್.ಗಿರಿಧರ್ ಯತೀಶ್, ಸಿ ಆರ್ ಕೇಶವಮೂರ್ತಿ, ಬಿ ಎಸ್ ಪ್ರಶಾಂತ್, ಡಿ ಜಯಂತಿ, ಎಂ ಮಲ್ಲೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್