ಚಿಕ್ಕಮಗಳೂರು | ಹರಿಹರದಹಳ್ಳಿ ಗ್ರಾಮ ಪಂ. ಅಧ್ಯಕ್ಷರಾಗಿ ಜೆ ಎನ್ ಮಂಜೇಗೌಡ ಅವಿರೋಧ ಆಯ್ಕೆ

  • ಮಾದರಿ ಗ್ರಾಮವಾಗಿ ರೂಪಿಸುವ ಭರವಸೆ ನೀಡಿದ ನೂತನ ಅಧ್ಯಕ್ಷ

ಚಿಕ್ಕಮಗಳೂರು ಜಿಲ್ಲೆಯ ಹರಿಹರದಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯ ಜೆ ಎನ್‌ ಮಂಜೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 

ಪಂಚಾಯತ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಘೋಷಿಸಲಾಗಿತ್ತು. ಆದರೆ, ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ, ಮಂಜೇಗೌಡರನ್ನು ಅವರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ಚೌಹಾಣ್ ಘೋಷಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಲು ಒತ್ತಾಯ

ಈ ವೇಳೆ ಬಿಜೆಪಿ ಮುಖಂಡರು ಮಾತನಾಡಿ, “ಎಲ್ಲ ಸದಸ್ಯರ ಸಹಕಾರದೊಂದಿಗೆ ಗ್ರಾಮದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ ಉತ್ತಮ ಗ್ರಾಮವನ್ನಾಗಿ ರೂಪಿಸಲು ಮುಂದಾಗಬೇಕು" ಎಂದು ಹೇಳಿದರು. 

ನೂತನ ಅಧ್ಯಕ್ಷ ಜೆ ಎನ್ ಮಂಜೇಗೌಡ ಮಾತನಾಡಿ, “ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಗಮನಿಸಿ ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಎಲ್ಲ ಸದಸ್ಯರ ಸಹಕಾರದೊಂದಿಗೆ ಮಾದರಿ ಗ್ರಾಮವಾಗಿ ರೂಪಿಸಲು ಶ್ರಮಿಸುತ್ತೇನೆ" ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್