ಚಿಕ್ಕಮಗಳೂರು| ಭಾರೀ ಮಳೆ: ಹಳ್ಳಕ್ಕೆ ಬಿದ್ದ ಕಾರು; ಓರ್ವ ಸಾವು

chikkamagaluru
  • ಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ
  • ಎನ್‌ ಆರ್ ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಗೆ ಅನೇಕ ಅನಾಹುತಗಳು ಸಂಭವಿಸುತ್ತಿದೆ. ಆಯತಪ್ಪಿ ಹಳ್ಳಕ್ಕೆ ಕಾರೊಂದು ನೀರಿನಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದು, ಕಾರಿನಲ್ಲಿದ್ದ ಓರ್ವ ಮೃತಪಟ್ಟಿರುವ ದಾರುಣ ಘಟನೆ ಎನ್‌ ಆರ್ ಪುರ ತಾಲೂಕಿನಲ್ಲಿ ನಡೆದಿದೆ.

ಅರಿಶಿಣಗೆರೆ ನಿವಾಸಿ ಪ್ರಸನ್ನ(51) ಮೃತ ದುರ್ದೈವಿ. ಸಂಬಂಧಿಕರ ಮನೆಗೆ ಹಬ್ಬಕ್ಕೆ ಹೊರಟಿರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಉರುಳಿದೆ. ಕಾರಿನೊಳಗೆ ಸಿಲುಕಿದ್ದ ಪ್ರಸನ್ನ ಹೊರಬರಲಾರದೆ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಎನ್‌ ಆರ್ ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಓದಿದ್ದೀರಾ?: ಉಡುಪಿ | ಸಂಕ ದಾಟುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದು ಬಾಲಕಿ ಸಾವು

ಕಡೂರಿನಲ್ಲಿ ಕೊಚ್ಚಿಕೊಂಡು ಹೋದ ಕಾರು; ಇಬ್ಬರ ರಕ್ಷಣೆ

Image
chikkamagaluru

ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಮತ್ತೊಂದು ಕಾರು ಹಳ್ಳಕ್ಕೆ ಬಿದ್ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

ಭಾರೀ ಮಳೆಗೆ ರಸ್ತೆಯ ಮೇಲೆ ಐದಾರು ಅಡಿ ನೀರು ತುಂಬಿಕೊಂಡಿದೆ. ಅಪಾಯದ ಸೂಚನೆಯಿದ್ದರೂ ಚಾಲಕ ದುಸ್ಸಾಹಸದಿಂದ ಕಾರನ್ನು ಚಲಿಸಲು ಮುಂದಾಗಿದ್ದು, ಕಾರು ನೀರಿನ ಸೆಳತಕ್ಕೆ ಕೊಚ್ಚಿಕೊಂಡು ಹೋಗಿದೆ. ಸ್ಥಳಕ್ಕೆ ಬಂದ ಸ್ಥಳೀಯರು ಕಾರಿನ ಗಾಜು ಹೊಡೆದು ಚಾಲಕ ಸೇರಿ ಇಬ್ಬರ ಪ್ರಾಣ ಉಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180