
- ಕಾರ್ಲೆ ಕಳಗೋಡು ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ
- ಧರ್ಮಸ್ಥಳ ಸಂಘದಿಂದ ನೋಂದಣಿ ಕಾರ್ಯಕ್ರಮ
ಗ್ರಾಮದಲ್ಲಿ ಇಂಟರ್ನೆಟ್ ನೆಟ್ವರ್ಕ್ ಸಮಸ್ಯೆ ಇರುವುದರಿಂದ ‘ಆಯುಷ್ಮಾನ್ ಕಾರ್ಡ್’ ನೋಂದಣಿ ಮಾಡಲು ನೋಂದಾಣಿಗಾರರು ಹಾಗೂ ಗ್ರಾಮದ ಜನರು ಬೆಟ್ಟ ಏರಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಾರ್ಲೆ ಕಳಗೋಡು ಗ್ರಾಮದಲ್ಲಿ ನಡೆದಿದೆ.
ಕಳಗೋಡು ಗ್ರಾಮದಲ್ಲಿ ಧರ್ಮಸ್ಥಳ ಸಂಘದ ವತಿಯಿಂದ ‘ಆಯುಷ್ಮಾನ್ ಕಾರ್ಡ್’ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಪ್ರಯೋಜನವನ್ನು ಗ್ರಾಮದ ಜನತೆ ಪಡೆದುಕೊಳ್ಳಬೇಕೆಂದು ಕೋರಲಾಗಿತ್ತು. ಆದರೆ, ಈ ಕಾರ್ಯಕ್ರಮಕ್ಕೆ ಇಂಟರ್ನೆಟ್ ನೆಟ್ವರ್ಕ್ ಸಮಸ್ಯೆ ದೊಡ್ಡ ತೊಡಕಾಗಿತ್ತು.
ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಸತೀಶ್ ಜಾರಕಿಹೊಳಿ ಹೇಳಿಕೆಗೆ ದಲಿತ ಸಂಘಟನೆಗಳ ಬೆಂಬಲ
ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ ಇರುವುದನ್ನು ಮನಗಂಡಿದ್ದ ಸಂಘದ ಸದಸ್ಯರು ಕಾರ್ಡ್ ಫಲಾನುಭವಿಗಳನ್ನು ಬೆಟ್ಟದ ತುದಿಗೆ ಕರೆದುಕೊಂಡು ಹೋಗಿ ನೋಂದಣಿ ಮಾಡಿಸಿದ್ದಾರೆ.
ಬೆಟ್ಟ ಹತ್ತಿ ಇಳಿಯಲು ತೊಂದರೆಯಾದರೂ ಕಾರ್ಡ್ ನೋಂದಣಿಯಾಗಿರುವುದಕ್ಕೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ನೆಟ್ವರ್ಕ್ಗಾಗಿ ಬೆಟ್ಟ ಹತ್ತಬೇಕಾದ ಪರಿಸ್ಥಿತಿ ಕಂಡು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.