ಗದಗ | ಮಕ್ಕಳು ದೇಶದ ಆಸ್ತಿ, ಅವರಲ್ಲಿ ಸಾಮಾಜಿಕ ಪ್ರಜ್ಞೆ ಬೆಳಸಬೇಕು: ಕಸಾಪ ತಾಲೂಕು ಅಧ್ಯಕ್ಷ

ಮಕ್ಕಳ ದಿನಾಚರಣೆ

ಒಂದು ದೇಶದ ಭವಿಷ್ಯ ಆ ದೇಶದ ಶಾಲಾ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ. ಮಕ್ಕಳು ದೇಶದ ಬಹುದೊಡ್ಡ ಆಸ್ತಿ. ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಬೆಳಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ನರಗುಂದ ತಾಲೂಕು ಅಧ್ಯಕ್ಷ ಪೊ. ಬಿ.ಸಿ ಹನಮಂತಗೌಡ ಸಲಹೆ ನೀಡಿದ್ದಾರೆ. 

ಗದಗ ಜಿಲ್ಲೆಯ ನರಗುಂದದ ವಿಶ್ವಚೇತನ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. "ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಜೊತೆಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಭಾಷೆ, ನೆಲ, ಜಲದ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕು" ಎಂದರು. 

Eedina App

"ಯಾವ ಮಗುವೂ ಶಿಕ್ಷಣದಿಂದ ಹೊರಗುಳಿಯಬಾರದು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಮಕ್ಕಳು ಸಂಸ್ಕಾರವಂತರಾಗಿ ಒಳ್ಳೆಯ ಶಿಕ್ಷಣ ಪಡೆದಾಗ ಮಾತ್ರ ದೇಶದ ಭವಿಷ್ಯ ಉಜ್ವಲವಾಗಲು ಸಾಧ್ಯ" ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೋಮು ಹೊಂಗಲ್ ಮಾತನಾಡಿ, "ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಅವರನ್ನು ಸತ್‌ಪ್ರಜೆಗಳನ್ನಾಗಿ ರೂಪಿಸಿದಾಗ ಮಾತ್ರ ನಮ್ಮ ದೇಶ ಅಭಿವೃದ್ಧಿ ಹೊಂದಲು ಸಾಧ್ಯ" ಎಮದರು. 

AV Eye Hospital ad

ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯ ಬೀರಪ್ಪ ಕಲಹಾಳ, ಮುತ್ತು ವಾಸನ್, ಲಕ್ಷ್ಮಣ್ ಸತರಡ್ಡಿ, ಶಾಲೆಯ ಮುಖ್ಯೋಪಾದ್ಯಾಯನಿರಾದ ಪ್ರೇಮಾ ಪತ್ತಾರ, ರಚನಾ ಹನಮಂತಗೌಡ್ರ, ಸ್ವೇತಾ ವಾಸನ್, ಮಹಾಲಕ್ಷ್ಮೀ ಗವಿ ಕುಮಾರಿ, ರಜನಿ ಶಾನವಾಡ ಉಪಸ್ಥಿತರಿದ್ದರು.

ಗದಗ ಜಿಲ್ಲಾ ಮಾಸ್ ಮೀಡಿಯಾ ಸಂಯೋಜಕ ಶರಣಪ್ಪ‌ ಎಚ್ ಸಂಗನಾಳ ಮಾಹಿತಿ ಆದರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app