ಜಾಹೀರಾತಿನಲ್ಲಿ ನೆಹರೂಗೆ ಅವಮಾನ| ಸಿಎಂ ಬೊಮ್ಮಾಯಿ ಕ್ಷಮೆ ಯಾಚನೆಗೆ ಡಿ ಕೆ ಶಿವಕುಮಾರ್‌ ಆಗ್ರಹ

jawaharlal nehru
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಡಿ ಕೆ ಶಿವಕುಮಾರ್ ಪತ್ರ
  • ಜನತೆಯ ಕ್ಷಮೆ ಕೇಳಿ ಇತಿಹಾಸದ ಸತ್ಯ ಎತ್ತಿ ಹಿಡಿಯಬೇಕು: ಒತ್ತಾಯ

ಸ್ವಾತಂತ್ರ್ಯ ಹೋರಾಟ, ನವಭಾರತ ನಿರ್ಮಾಣದಲ್ಲಿ ನೆಹರು ಅವರ ಪಾತ್ರ ಬಹಳ ಹಿರಿದು. ಇದು ನಿಮಗೂ ಗೊತ್ತಿದೆ. ಈ ಇತಿಹಾಸ ಓದಿಯೇ ನಾವು ನೀವು ಬೆಳೆದಿದ್ದೇವೆ. ಆದರೂ ರಾಜಕೀಯ ಕಾರಣಕ್ಕೆ ನೀವು ಇಂತಹ ಕ್ಷುಲ್ಲಕ ಕೆಲಸಕ್ಕೆ ಕೈ ಹಾಕಬಾರದಿತ್ತು. ಇದು ಅಕ್ಷಮ್ಯ. ಆಗಿರುವ ಪ್ರಮಾದಕ್ಕೆ ನೀವು ಕ್ಷಮೆ ಯಾಚಿಸಬೇಕು. ಇತಿಹಾಸದ ಸತ್ಯವನ್ನು ಎತ್ತಿ ಹಿಡಿಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಆಗ್ರಹಿಸಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ಕುರಿತ ಸರ್ಕಾರಿ ಜಾಹೀರಾತಿನಲ್ಲಿ ಜವಾಹರಲಾಲ್ ನೆಹರು ಅವರ ಭಾವಚಿತ್ರ ಕೈಬಿಟ್ಟಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, “ಭಾನುವಾರ ದಿನಪತ್ರಿಕೆಗಳಲ್ಲಿ ಬಂದಿರುವ ಸರ್ಕಾರಿ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ಹೋರಾಟಗಾರ, ದೇಶದ ಮೊದಲ ಪ್ರಧಾನಿ, ಸ್ವಾತಂತ್ರ್ಯೋತ್ತರ ನವಭಾರತ ನಿರ್ಮಾಣದ ಶಿಲ್ಪಿ ಜವಾಹರಲಾಲ್ ನೆಹರು ಅವರ ಭಾವಚಿತ್ರ ಹಾಗೂ ಹೆಸರನ್ನು ಉದ್ದೇಶಪೂರ್ವಕವಾಗಿ ಪ್ರಕಟಿಸದೆ ಅವರಿಗೆ ಅಪಮಾನ ಮಾಡಿದ್ದೀರಿ. ಆ ಮೂಲಕ ಇತಿಹಾಸ ತಿರುಚುವ ವಿಫಲ ಯತ್ನ ಮಾಡಿದ್ದೀರಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Image
D K Shivakumar

“ಇಡೀ ದೇಶ ಸ್ವಾಂತಂತ್ರ್ಯ 75ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಿ, ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಈ ವಿಚಾರದಲ್ಲಿ ಅಧಿಕಾರರೂಢ ಸರ್ಕಾರದ ಜವಾಬ್ದಾರಿ ಒಂದು ಪಟ್ಟು ಹೆಚ್ಚಾಗಿಯೇ ಇರುತ್ತದೆ. ಮುಖ್ಯಮಂತ್ರಿ ಸ್ಥಾನದಿಂದ ತಾವು ಇಂತಹ ಕೀಳು ಮಟ್ಟದ ರಾಜಕಾರಣ ಮಾಡಬಾರದಿತ್ತು. ಇದು ತಮ್ಮ ಆತ್ಮಸಾಕ್ಷಿಗೆ ಶೋಭೆ ತರುವ ಕೆಲಸವಲ್ಲ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕುರ್ಚಿ ಉಳಿಸಿಕೊಳ್ಳಲು ನೆಹರೂ ಫೋಟೋ ಕೈಬಿಡುವಷ್ಟು ಗುಲಾಮಗಿರಿ ಬಂತೆ ಬೊಮ್ಮಾಯಿ ಅವರೇ?: ಸಿದ್ದರಾಮಯ್ಯ ಕಿಡಿ

“ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನೆಹರು ಅವರು ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ ಸೇರಿದಂತೆ ಪ್ರತಿ ಹಂತದಲ್ಲೂ ತಮ್ಮ ಬದುಕು ಮುಡಿಪಿಟ್ಟವರು. ಅಲ್ಲದೆ ಸ್ವಾತಂತ್ರ್ಯ ಹೋರಾಟಕ್ಕಾಗಿ 9 ವರ್ಷಗಳ ಸೆರೆವಾಸ ಅನುಭವಿಸಿದ್ದರು” ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್