ದೆಹಲಿಗೆ ಹೊರಟ ಸಿಎಂ: ಮತ್ತೆ ಬಿಜೆಪಿಯಲ್ಲಿ ಗರಿಗೆದರಿದ ಸಂಪುಟ ವಿಸ್ತರಣೆ ಚರ್ಚೆ

Basavaraj Bommai Sad
  • ಬಿಜೆಪಿಯಲ್ಲಿ  ಮತ್ತೆ ಮುನ್ನೆಲೆಗೆ ಬಂದ ಸಂಪುಟ ವಿಸ್ತರಣೆ ಚರ್ಚೆ
  • ಪ್ರಧಾನಿಗಳೊಂದಿಗಿನ ಸಭೆ ಸಲುವಾಗಿ ದೆಹಲಿಯತ್ತ ಸಿಎಂ ಪಯಣ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು (ಶನಿವಾರ) ದೆಹಲಿಗೆ ತೆರಳಲಿದ್ದಾರೆ. ಪ್ರಧಾನಿಮಂತ್ರಿಗಳೊಂದಿಗಿನ ಅಧೀಕೃತ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಲಿದ್ದಾರೆ. ಹೀಗಾಗಿ, ಈ ಭೇಟಿ ಅಷ್ಟೇನೂ ಮಹತ್ವ ಪಡೆದುಕೊಂಡಿಲ್ಲ. ಆದರೂ, ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಚರ್ಚೆ ಮುನ್ನೆಲೆಗೆ ಬಂದಿದೆ.

ಶನಿವಾರ ಮಧ್ಯಾಹ್ನ ಅಮೃತ ಮಹೋತ್ಸವದ ಸಭೆ, ಭಾನುವಾರ ನೀತಿ ಆಯೋಗದ ಸಭೆಯಲ್ಲಿ ಸಿಎಂ ಭಾಗವಹಿಸಲಿದ್ದಾರೆ. ಭಾನುವಾರದ ಸಭೆ ಬಳಿಕ ಮುಖ್ಯಮಂತ್ರಿಗಳು ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗುವ ಸಾಧ್ಯತೆ ಇದೆ.

ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಭೇಟಿಯಲ್ಲಿ ಸಂಪುಟ ವಿಸ್ತರಣೆ ವಿಚಾರ ಚರ್ಚೆಯಾಗಲಿದೆ ಎನ್ನಲಾಗಿದೆ. ಈ ಬಾರಿಯ ಭೇಟಿ ರಾಜ್ಯ ಬಿಜೆಪಿಯ ಸಚಿವಾಕಾಂಕ್ಷಿಗಳಲ್ಲಿ ನಿರೀಕ್ಷೆಗಳನ್ನು ಕೆರಳಿಸಿದೆ. ಸಂಪುಟದ ಕನಸ್ಸನ್ನು ನನಸಾಗಿಸಿಕೊಳ್ಳಲು ಕಾದು ನಿಂತಿರುವ ನಾಯಕರುಗಳಿಗೆ ಈ ಸಲದ ಭೇಟಿಯಾದರೂ ಅವಕಾಶದ ಬಾಗಿಲು ತೆರೆಸುತ್ತದೆಯೋ ಎನ್ನುವ ಕುತೂಹಲ ಹುಟ್ಟಿಸಿದೆ. 

ಚುನಾವಣೆಗೆ ಇನ್ನು ಎಂಟು ತಿಂಗಳಷ್ಟೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಪಕ್ಷವನ್ನು ಸಜ್ಜುಗೊಳಿಸುವ ಅನಿವಾರ್ಯತೆಯೂ ಮುಖ್ಯಮಂತ್ರಿಗಳ ಹೆಗಲೇರಿದೆ. ಹೀಗಾಗಿ ಈ ಬಾರಿ ಸಂಪುಟ ವಿಸ್ತರಣೆ ಬಗೆಗೂ ಮುಖ್ಯಮಂತ್ರಿಗಳು ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. 

ಸಂಪುಟದಲ್ಲಿ ಉಳಿದಿರುವ 5 ಸ್ಥಾನಗಳನ್ನು ಭರ್ತಿ ಮಾಡಿಕೊಂಡು ಚುನಾವಣಾ ವರ್ಷವನ್ನು ಸಮರ್ಥವಾಗಿ ನಿಭಾಯಿಸುವುದು ಸಿಎಂ ಲೆಕ್ಕಾಚಾರವಾಗಿದೆ. ಇವೆಲ್ಲಕ್ಕೂ ವರಿಷ್ಠರ ಒಪ್ಪಿಗೆ ಪಡೆಯಬೇಕಾಗಿದೆ. 

ಈ ಸುದ್ದಿ ಓದಿದ್ದೀರಾ?: ಆಗಸ್ಟ್‌ 10ರಂದು ಸಂಪುಟ ಸಭೆ: ಮಳೆ ಹಾನಿ ಕುರಿತು ಚರ್ಚೆ ಸಾಧ್ಯತೆ

ಜಾತಿ ಹಾಗೂ ಮತ ಲೆಕ್ಕಾಚಾರಗಳೂ ಮುಂಬರುವ ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಕಾರಣ ಇದರ ಬಗೆಗೂ ಚರ್ಚಸಿ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕಿದೆ. ಅಭಿವೃದ್ದಿ ಜೊತೆ ಮುನ್ನಡೆಯಲು ಪಕ್ಷದ ವರಿಷ್ಟರು ಸೂಚಿಸಿರುವ ಕಾರಣ ಪೂರ್ಣಪ್ರಮಾಣದ ಸಂಪುಟ ವಿಸ್ತರಣೆ ಅಗತ್ಯವೂ ಮುಖ್ಯಮಂತ್ರಿಗಳಿಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್