ಹರಿದಿರುವ ನಿಮ್ಮವರ ಕಚ್ಚೆಗಳನ್ನು ಬಿಗಿಯಾಗಿ ಕಟ್ಟಿ, ನಂತರ ಮಾತಾಡಿ: ಕಾಂಗ್ರೆಸ್‌ ಕಿಡಿ

Congress
  • ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿಕೆಗೆ ಕಾಂಗ್ರೆಸ್‌ ಆಕ್ರೋಶ
  • ಬಿಜೆಪಿ ಕಚ್ಚೆ ಹರುಕರು ಯಾರು ಎನ್ನುವುದು ಇಡೀ ದೇಶಕ್ಕೆ ತಿಳಿದ ಸಂಗತಿ: ಕುಟುಕು

ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರಿಗೆ ಕಚ್ಚೆ ಹರುಕ ಎಂದು ಕರೆದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದಿದೆ.

ಈ ಕುರಿತು ಟ್ವೀಟ್‌ ಮಾಡಿ, ಸಿ ಟಿ ರವಿ ಅವರೇ, ಕಚ್ಚೆ ಹರುಕರು ಯಾರು ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ. ಸಿಡಿಗೆ ತಡೆಯಾಜ್ಞೆ ತಂದವರು, ಅತ್ಯಾಚಾರ ಆರೋಪದಲ್ಲಿ ರಾಜೀನಾಮೆ ಕೊಟ್ಟವರು, ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ವಿಡಿಯೋಗಳು ಹೊರ ಬಂದಿದ್ದು ಯಾವ ಪಕ್ಷದವರದ್ದು? ಹರಿದಿರುವ ನಿಮ್ಮವರ ಕಚ್ಚೆಗಳನ್ನು ಬಿಗಿಯಾಗಿ ಕಟ್ಟಿ, ನಂತರ ಮಾತಾಡಲು ಬನ್ನಿ” ಎಂದು ಕುಟುಕಿದೆ.

Eedina App

"ಕಂಡ ಕಂಡಲ್ಲಿ ಕಚ್ಚೆ ಹರಿದುಕೊಂಡವರು ಬಿಜೆಪಿಗರೇ ಅಲ್ಲವೇ ಲೂಟಿ ರವಿ ಅವರೇ? ಬಿಜೆಪಿಯ ಕಚ್ಚೆ ಪುರಾಣಗಳು, ರಾಜ್ಯದ ಹಳ್ಳಿಹಳ್ಳಿಗಳ ಕಟ್ಟೆ ಪುರಾಣಗಳಿಗೆ ಆಹಾರವಾಗಿವೆ! ಅತಿವೃಷ್ಟಿ ಸಂಕಷ್ಟದಲ್ಲಿರುವ ಜನತೆಗೆ ನೆರವಾಗುವ ಬಗ್ಗೆ ಒಂದಾದರೂ ಮಾತು ನಿಮ್ಮ ಬಾಯಲ್ಲಿ ಬರುವುದೇ? ನೀವೆಷ್ಟೇ ಬಾಯಿ ಹರಿದುಕೊಂಡರೂ
ಮತ್ತೆ ಸಂಪುಟದಲ್ಲಿ ಸ್ಥಾನ ಸಿಗದು" ಎಂದು ಲೇವಡಿ ಮಾಡಿದೆ.

ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, “ಪ್ರಾಸಬದ್ಧವಾಗಿ ಸಿಟಿನಾ ಲೂಟಿ ಎನ್ನುವುದಾದರೂ, ಸಿದ್ಧುನ ಪೆದ್ದ ಅನ್ನಬಹುದು. ಸಿಟಿನ ಲೂಟಿ ಅನ್ನಬೇಕಾದರೆ ಇವರನ್ನು ಏನೆಂದು ಕರೆಯಬೇಕು ನಾನು ಏನು ಹೇಳಬೇಕೋ ಅದನ್ನು ಸೂಕ್ಷ್ಮವಾಗಿ ಹೇಳಿದ್ದೇನೆ” ಎಂದಿದ್ದರು.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app